ವಾಲ್ಮೀಕಿ ಸಮುದಾಯ ಭವನಕ್ಕೆ ನಿವೇಶನ ನೀಡಲು ಕ್ರಮ – ಎನ್.ವಿ ನಟೇಶ್.
ತರೀಕೆರೆ ಅ.14




ಡಾ, ಬಿ.ಆರ್ ಅಂಬೇಡ್ಕರ್ ಭವನದಲ್ಲಿ ವಾಲ್ಮೀಕಿ ಜಯಂತಿ ಆಚರಿಸಲು ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದವರು ಭಾಗವಹಿಸಬೇಕು ಎಂದು ಉಪ ವಿಭಾಗಾಧಿಕಾರಿ ಎನ್ ವಿ ನಟೇಶ್ ಹೇಳಿದರು.
ಅವರು ಇಂದು ತಾಲೂಕು ಆಡಳಿತ ತಹಶೀಲ್ದಾರ್ ನ್ಯಾಯಾಲಯ ಸಭಾಂಗಣದಲ್ಲಿ ಕರೆದಿದ್ದ ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತರೀಕೆರೆ ತಾಲೂಕು ಮತ್ತು ಅಜ್ಜಂಪುರ ತಾಲೂಕು ಸಮಾಜದ ಅಧ್ಯಕ್ಷರಾದ ಗೋವಿಂದಪ್ಪ ಮತ್ತು ಮಹೇಶ್ವರಪ್ಪ ಎರಡು ತಾಲೂಕುಗಳಲ್ಲಿ ವಾಲ್ಮೀಕಿ ಸಮುದಾಯ ಭವನ ನಿರ್ಮಾಣ ಮಾಡಲು ಸರ್ಕಾರ ನಿವೇಶನ ಮಂಜೂರಿ ಮಾಡಿ ಕೊಡಬೇಕು ಎಂದು ಸಭೆಯಲ್ಲಿ ಮನವಿ ಮಾಡಿದರು.
ಉಪ ವಿಭಾಗ ಅಧಿಕಾರಿ ಮಾತನಾಡಿ ಈ ಕುರಿತು ವಿಶೇಷ ಸಭೆ ಕರೆದು ವಾಲ್ಮೀಕಿ ಸಮುದಾಯ ಭವನಕ್ಕೆ ನಿವೇಶನ ನೀಡಲು ಕ್ರಮ ವಹಿಸಲಾಗುವುದು ಎಂದು ಹೇಳಿದರು.
ಮೆರವಣಿಗೆಯನ್ನು ಕಲಾತಂಡಗಳೊಂದಿಗೆ ಕಣ್ಣಪ್ಪ ದೇವಸ್ಥಾನದಿಂದ ಸಾಲುಮರದಮ್ಮ ದೇವಸ್ಥಾನ ತಲುಪಿ ಬಿ ಎಚ್ ರಸ್ತೆ ಮಾರ್ಗವಾಗಿ ತರೀಕೆರೆ ಪಟ್ಟಣದ ಡಾ, ಬಿ.ಆರ್ ಅಂಬೇಡ್ಕರ್ ಭವನ ತಲುಪುವುದು ಎಂದು ಸಭೆಯು ತೀರ್ಮಾನಿಸಿತು.
ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಯಲ್ಲಿ ಹೆಚ್ಚಿನ ಅಂಕ ಪಡೆದ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡುವುದು ಎಂದು ತೀರ್ಮಾನಿಸಲಾಯಿತು.
ಗಡಿ ರಂಗಪುರದ ಕ ದ ಸಂ ಸ ಮುಖಂಡ ಗಂಗಾಧರ ಮಾತನಾಡಿ ಜಿಲ್ಲೆಯಲ್ಲಿ ಒಂಬತ್ತು ತಾಲೂಕು ಪಂಚಾಯತಿ ಕ್ಷೇತ್ರಗಳನ್ನು ಗುರುತಿಸಿದ್ದು ಎಲ್ಲಾ ಮಹಿಳೆಯರಿಗೆ ಮೀಸಲಾತಿ ನೀಡಲಾಗಿದೆ.
ಪುರುಷರಿಗೆ ಆದ್ಯತೆ ನೀಡಿಲ್ಲ ಹಾಗೂ ಜಿಲ್ಲಾ ಪಂಚಾಯಿತಿ 2 ಕ್ಷೇತ್ರಗಳಲ್ಲಿ ಮಲೆನಾಡು ಭಾಗಕ್ಕೆ ನೀಡಿದ್ದು ಬಯಲು ಸೀಮೆಯಾದ ತರೀಕೆರೆ ಕಡೂರು ಅಜ್ಜಂಪುರ ತಾಲೂಕುಗಳಿಗೆ ಒಂದು ಕ್ಷೇತ್ರವು ಕೊಟ್ಟಿಲ್ಲ ಎಂದು ಸಭೆಯಲ್ಲಿ ಪ್ರಸ್ತಾಪಿಸಿದರು. ಅಧ್ಯಕ್ಷತೆ ವಹಿಸಿದ್ದ ಎನ್ ವಿ ನಟೇಶ್ ಮಾತನಾಡಿ ಇದು ಸರ್ಕಾರದ ಮಾರ್ಗ ಸೂಚಿಯಾಗಿದೆ ಎಂದು ಹೇಳಿದರು.
ಸಭೆಯಲ್ಲಿ ತಹಸಿಲ್ದಾರ್ ವಿನಾಯಕ ಸಾಗರ್ ಸಮಾಜ ಕಲ್ಯಾಣ ಅಧಿಕಾರಿ ಎಸ್ ಮಂಜುನಾಥ್ ಕಾರ್ಯ ನಿರ್ವಹಣಾಧಿಕಾರಿ ವಿಜಯಕುಮಾರ್ ಮುಖ್ಯ ಅಧಿಕಾರಿಯಾದ ತಹೇರಾ ತಸ್ನಿಮ್, ರಮೇಶ್ ಹಾಗೂ ಎಲ್ಲಾ ಇಲಾಖೆ ಅಧಿಕಾರಿಗಳು ವಾಲ್ಮೀಕಿ ಸಮಾಜದ ಮುಖಂಡರು ಮಹಾತ್ಮ ಪ್ರೊ, ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾದ ತರೀಕೆರೆ ಎನ್ ವೆಂಕಟೇಶ್ ಮತ್ತು ಸಂಘ ಸಂಸ್ಥೆಯ ಮುಖಂಡರುಗಳು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್ ವೆಂಕಟೇಶ್ ತರೀಕೆರೆ ಚಿಕ್ಕಮಗಳೂರು
