ಶ್ರೀಮಹಾಲಕ್ಷ್ಮೀ ದೇವಸ್ಥಾನದಲ್ಲಿ ಶ್ರೀಶಾರದಾಶ್ರಮದ – ಭಕ್ತರಿಂದ ದೇವಿ ಭಜನೆ.

ಚಳ್ಳಕೆರೆ ಅ.15

ಶಿವ ನಗರದ ಶ್ರೀಮಹಾಲಕ್ಷ್ಮೀ ತಾಯಿಯ ಸನ್ನಿಧಿಯಲ್ಲಿ ನವರಾತ್ರಿಯ ನಾಲ್ಕನೇ ದಿನದ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಜಿ ಯಶೋಧಾ ಪ್ರಕಾಶ್ ನೇತೃತ್ವದಲ್ಲಿ ಸಾಮೂಹಿಕ ಶ್ರೀದೇವಿಸ್ತುತಿ ಪಾರಾಯಣ, ಮಾ ನಾಮ ಸಂಕೀರ್ತನೆ, ಯತೀಶ್ ಎಂ ಸಿದ್ದಾಪುರ, ಎಂ ಗೀತಾ ನಾಗರಾಜ್, ವನಜಾಕ್ಷಿ ಮೋಹನ್ ಅವರ ಸಾರಥ್ಯದಲ್ಲಿ ಮಹಿಷಾಸುರ ಮರ್ದಿನಿ ಸ್ತೋತ್ರ, ವಿಶೇಷ ದೇವಿ ಭಜನೆಗಳು, ಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು.

ಭಜನಾ ಕಾರ್ಯಕ್ರಮದಲ್ಲಿ ಪುಷ್ಪ, ಸಂಜೀವಮೂರ್ತಿ, ಬಿ.ಸುಮನಾ ಕೋಟೇಶ್ವರ್, ನಳಿನಿ, ಜ್ಯೋತಿ, ಶುಭಾ, ಅರ್ಚಕ ಸಂಗಮೇಶ್, ನಾಗರತ್ನಮ್ಮ, ವಿಶಾಲಾಕ್ಷಿ, ಶೈಲಜಾ, ಕೃಷ್ಣವೇಣಿ, ಸಂಗೀತ, ರಶ್ಮಿ, ಪಂಕಜಾ, ಭಾಗ್ಯಲಕ್ಷ್ಮೀ, ವಿಜಯಲಕ್ಷ್ಮೀ, ಕವಿತಾ, ಸರಸ್ವತಿ, ಪ್ರೇಮಲೀಲಾ, ಡಿ. ಕಾವೇರಿ ಸುರೇಶ್, ಜಯಶೀಲಮ್ಮ, ಜಯಮ್ಮ, ಲೀಲಾವತಿ, ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ, ದಾಕ್ಷಾಯಣಿ, ಭ್ರಮರಂಬಾ ಸೇರಿದಂತೆ ಸಾಕಷ್ಟು ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿದ್ದರು.

ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button