ಕಾರ್ತಿಕಮಾಸದ ಪ್ರಯುಕ್ತ – ಶಿವನಾಮ ಸಂಕೀರ್ತನೆ.
ಚಳ್ಳಕೆರೆ ನ.12




ಶಿವ ನಗರದ ಶ್ರೀಶಾರದಾದೇವಿ ಸತ್ಸಂಗ ಕಾರ್ಯಕ್ರಮದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ “ಕಾರ್ತಿಕಮಾಸ” ದ ಪ್ರಯುಕ್ತ ಯತೀಶ್ ಎಂ ಸಿದ್ದಾಪುರ ನೇತೃತ್ವದಲ್ಲಿ ಶಿವನಾಮ ಸಂಕೀರ್ತನೆ, ಶ್ರೀಮತಿ ಜಿ ಯಶೋಧಾ ಪ್ರಕಾಶ್ ಸಾರಥ್ಯದಲ್ಲಿ ಶ್ರೀಮದ್ ಭಗವದ್ಗೀತೆಯ ಜ್ಞಾನಯೋಗದ ಶ್ಲೋಕಗಳ ಕಲಿಕಾ ತರಗತಿ ಮತ್ತು “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ, ಪ್ರಸಾದ ವಿತರಣೆ ನಡೆಯಿತು.

ಕಾರ್ಯಕ್ರಮದಲ್ಲಿ ಶಾಂತಮ್ಮ, ಗೀತಾಲಕ್ಷ್ಮೀ, ಭ್ರಮರಂಬಾ, ಶೈಲಜಾ, ಕೃಷ್ಣವೇಣಿ, ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ, ಜಯಮ್ಮ, ಸುಧಾಮಣಿ, ನಾಗರತ್ನಮ್ಮ, ಸೌಮ್ಯ ಪ್ರಸಾದ್, ವೀರಮ್ಮ ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.
