ಸೆನ್ಸಾರ್‌ ಗೆ ಹೊರಟ – “ಗೋರಂಟಿ” ಸಿನಿಮಾ.

ಬೆಂಗಳೂರು ನ.12

ರಾವಲ್ ಸಿನಿ ಫೋಕಸ್ ಅರ್ಪಿಸುವ ಬಹು ಭಾಷಾ ಚಲನ ಚಿತ್ರ “ಗೋರಂಟಿ” ಇದೀಗ ಸೆನ್ಸಾರ್‌ಗೆ ಹೊರಟಿದೆ. ಕನ್ನಡ, ತೆಲಗು, ತಮಿಳ್ ಮತ್ತು ಹಿಂದಿ ಭಾಷೆಯಲ್ಲಿ ನಿರ್ಮಿಸಲಾಗುತ್ತಿರುವ ಕುತೂಹಲ ಭರಿತ ಚಿತ್ರ ಮೊದಲು ಕನ್ನಡ ಆವೃತ್ತಿಯನ್ನು ಬಿಡುಗಡೆ ಮಾಡಿ ನಂತರ ಉಳಿದ ಭಾಷೆಗಳಲ್ಲಿ ಬಿಡುಗಡೆ ಮಾಡುವೆ.

ಸದ್ಯ ಸೆನ್ಸಾರ್‌ಗೆ ಕನ್ನಡ ಆವೃತ್ತಿಯನ್ನು ಕಳುಹಿಸುತ್ತಿದ್ದೇನೆ. ಸಂಕ್ರಾಂತಿ ವೇಳೆಗೆ ಚಿತ್ರ ಬಿಡುಗಡೆ ಮಾಡುವ ಆಲೋಚನೆ ಇದೆ ಎಂದು ನಿರ್ದೇಶಕ ಮೋಹಿತ್‌ಕುಮಾರ್ ರಾವಲ್ ಹೇಳಿದರು.

ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ದೊಡ್ಡ ಮನೆತನ ರಾವ್ ಬಹದ್ದೂರ ವಂಶದಲ್ಲಿ ಹುಟ್ಟಿದ ತಂದೆ-ತಾಯಿ ಇದ್ದರೂ ಅನಾಥ ಎಂಬಂತೆ ಕಾಂತರಾಜ ಎಂಬ ವ್ಯಕ್ತಿಯ ಜೀವನ ನಡೆಯುತ್ತಿರುತ್ತದೆ.

ಬದುಕೇ ಬೇಡ ಎಂಬ ನಿರ್ಧಾರಕ್ಕೆ ಬಂದವನ ಜೊತೆಗೆ ನಿರ್ಗತಿಕನೊಬ್ಬ ಜೊತೆಯಾಗುತ್ತಾನೆ. ಇಬ್ಬರದೂ ವಿಚಿತ್ರ ಸ್ವಭಾವ, ಇದರಿಂದಾಗಿ ಚಿತ್ರದೊಳಗೆ ತಿರುವುಗಳೇ ಘಟಿಸುತ್ತಾ ಹೋಗುತ್ತವೆ.

ಜೊತೆಗೆ ಇಬ್ಬರು ಯುವತಿಯರ ಮನಸಿನ ತಿಕ್ಕಾಟದ ನಡುವೆ ಸುಂದರವಾದ ಭಾವ ಚಿತ್ರ ಪಾಂಟಿಂಗ್ ಮೂಡಿ ಬರುತ್ತದೆ. ಆದರೆ ಜೀವನ ವಿಚಿತ್ರವಾಗುತ್ತದೆ ಎಂಬುದು ಗೋರಂಟಿಯಲ್ಲಿದೆ.

ತಾರಾಗಣದಲ್ಲಿ ಮೋಹಿತ್‌ಕುಮಾರ್ ರಾವಲ್, ದಿತ್ಸಾ ರಾಯ್, ಟಿಯಾ, ಸ್ಮೈಲ್ ಶಿವು, ಅನು, ಭಾಷಾ, ವೆಂಕಟರಾಜು, ಸುಪ್ರೀಯ, ರಂಜಿತಾ, ಸೌಮ್ಯ, ಪದ್ಮ ನಾಯಕ, ಪೂಜಾ ಮೊದಲಾದವರು ಅಭಿನಯಿಸಿದ್ದಾರೆ.

ಛಾಯಾಗ್ರಹಣ ಶಿವಾಜಿ, ಮನ್ವರ್ಷಿ ನವಲಗುಂದ ಸಾಹಿತ್ಯ, ಡಿಐ ಅಮಿತ್, ವಿಕಾಸ್ ರಜತ್ ಸಂಗೀತ ನಿರ್ದೇಶನ, ರೆಕ್ಸ್ರಾಜು ನೃತ್ಯ ಸಂಯೋಜನೆ, ಸಂಕಲನ ವೆಂಕಿ, ಪತ್ರಿಕಾ ಸಂಪರ್ಕ ಡಾ, ಪ್ರಭು ಗಂಜಿಹಾಳ, ಡಾ, ವೀರೇಶ ಹಂಡಿಗಿ, ಕಥೆ–ಚಿತ್ರಕಥೆ-ಸಂಭಾಷಣೆ ಹಾಗೂ ನಿರ್ದೇಶನವನ್ನು ಮೋಹಿತ್‌ಕುಮಾರ್ ರಾವಲ್ ನಿರ್ವಹಿಸಿದ್ದಾರೆ. ಲತಾ ರಾವಲ್‌ರವರು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ರಾಜ್ಯ ಮಟ್ಟದ ವಿಶೇಷ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಡಾ, ಪ್ರಭು ಗಂಜಿಹಾಳ ಗದಗ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button