ಕರುಣಾಸಾಗರ ಶ್ರೀರಾಮಕೃಷ್ಣ ಪರಮ ಹಂಸರು – ಮಾತಾಜೀ ತ್ಯಾಗಮಯೀ.
ಚಳ್ಳಕೆರೆ ನ.14




ಅವತಾರ ಪುರುಷರಾದ ಶ್ರೀರಾಮಕೃಷ್ಣ ಪರಮ ಹಂಸರು ಕರುಣೆಯ ಸಾಗರವೇ ಆಗಿದ್ದರು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ ತಿಳಿಸಿದರು.

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಶ್ರೀರಾಮಕೃಷ್ಣ ಆರಾತ್ರಿಕ “ಖಂಡನ ಭವ ಬಂಧನ” ಹಾಡಿನ ಭಾವಾರ್ಥದ ವಿವರಣೆ ನೀಡುತ್ತ ಅವರು ಆಶೀರ್ವಚನ ನೀಡಿದರು.

ಕಾಮ-ಕಾಂಚನ ಮತ್ತು ಇಂದ್ರೀಯಗಳ ಮೇಲೆ ಹತೋಟಿ ಸಾಧಿಸಿದವರು ತ್ಯಾಗದ ಮೂರ್ತಸ್ವರೂಪರು, ನಿರ್ಭಯರು, ಜಾತಿ, ಮತ, ಮಾನ, ಅಭಿಮಾನಗಳನ್ನು ತೊರೆದವರು ಶ್ರೀರಾಮಕೃಷ್ಣ ಪರಮ ಹಂಸರು ಎಂದು ಅವರು ಹೇಳಿದರು.

ಸತ್ಸಂಗದ ಪ್ರಯುಕ್ತ ಶ್ರಿಶಾರದಾಶ್ರಮದ ಸದ್ಭಕ್ತರಿಂದ ವಿಶೇಷ ಭಜನೆ, ದಿವ್ಯತ್ರಯರಿಗೆ ಆರತಿ ಮತ್ತು ಪ್ರಸಾದ ವಿನಿಯೋಗ ನಡೆಯಿತು.
ಕಾರ್ಯಕ್ರಮದಲ್ಲಿ ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ , ವನಜಾಕ್ಷಿ ಮೋಹನ್, ಜಿ ಯಶೋಧಾ ಪ್ರಕಾಶ್, ಬಿ.ಸುಮನಾ, ಸುಧಾಮಣಿ,ಸಮಾಜ ಸೇವಕ ಯತೀಶ್ ಎಂ ಸಿದ್ದಾಪುರ ಸೇರಿದಂತೆ ಸದ್ಭಕ್ತರು ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.
