ದೀಪಗಳ ಸಾಲು ದೀಪಾವಳಿ – ಹೆಚ್ ಲಕ್ಷ್ಮೀದೇವಮ್ಮ ಅಭಿಪ್ರಾಯ.
ಚಳ್ಳಕೆರೆ ನ.13




ಕಾರ್ತಿಕ ಮಾಸದ ಆರಂಭದಲ್ಲಿ ಬರುವ ದೀಪಾವಳಿಯು ಕತ್ತಲೆಯಿಂದ ಬೆಳಕಿನೆಡೆಗೆ ಸಾಗುವ ವಿಶಿಷ್ಟ ಹಬ್ಬ ಎಂದು ಚಳ್ಳಕೆರೆಯ ತ್ಯಾಗರಾಜ ನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಮುಖ್ಯಸ್ಥರಾದ ಶ್ರೀಮತಿ ಹೆಚ್ ಲಕ್ಷ್ಮೀದೇವಮ್ಮ ತಿಳಿಸಿದರು.

ತ್ಯಾಗರಾಜ ನಗರದ ಸದ್ಭಕ್ತರಾದ ಶ್ರೀಮತಿ ನಂಜಮ್ಮ ಕೆಂಚಪ್ಪ ಶಿಕ್ಷಕರ ಸವಿತಾ ನಿವಾಸದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು “ದೀಪಾವಳಿ ಹಬ್ಬದ ವಿಶೇಷತೆಗಳ” ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.

ದೀಪಾವಳಿಯಲ್ಲಿ ಬರುವ ನರಕ ಚತುರ್ದಶಿ, ಅಮಾವಾಸ್ಯೆಯ ಲಕ್ಷ್ಮೀ ಪೂಜೆ, ಬಲಿಪಾಡ್ಯಮಿಯನ್ನು ಆಯಾಮ ಪ್ರಾಂತ್ಯಗಳಲ್ಲಿ ವಿಶೇಷ ಸಾಂಪ್ರದಯ ಗಳೊಂದಿಗೆ ಆಚರಿಸಲಾಗುತ್ತದೆ ಎಂದು ಅವರು ವಿವರಿಸಿದರು.

ವಿಶೇಷ ಸತ್ಸಂಗದ ಪ್ರಯುಕ್ತ ದಿವ್ಯತ್ರಯರಿಗೆ ಪೂಜೆ ಮತ್ತು ಪ್ರಾರ್ಥನೆ, ದೀಪೋತ್ಸವ, ಸಾಮೂಹಿಕ ಶ್ರೀರಾಮರಕ್ಷಾ ಸ್ತೋತ್ರ ಪಠಣ, ಶ್ರೀರಾಮಕೃಷ್ಣರ ನಾಮಸ್ಮರಣೆ, ಗೀತಾ ಪ್ರಕಾಶ್ ಅವರಿಂದ ಶ್ರೀ ಸೌಂದರ್ಯ ಲಹರಿಯ ಕೆಲವು ಶ್ಲೋಕಗಳ ಪಾರಾಯಣ, ಭಜನೆ, ತಿಪ್ಪಮ್ಮ ಉಮಾಶಂಕರ್, ಪ್ರೇಮಲೀಲಾ ರಾಮಣ್ಣ, ಯತೀಶ್ ಎಂ ಸಿದ್ದಾಪುರ ಅವರಿಂದ ವಿಶೇಷ ಭಜನೆ, ಆರತಿ ಮತ್ತು ವಿವಿಧ ಪ್ರಸಾದಗಳ ವಿತರಣೆ ನಡೆಯಿತು.
ಸತ್ಸಂಗ ಸಭೆಯಲ್ಲಿ ವಿಶಾಲಾಕ್ಷಿ ಪುಟ್ಟಣ್ಣ, ಎಂ ಲಕ್ಷ್ಮೀದೇವಮ್ಮ, ಸರಸ್ವತಿ, ಸೌಮ್ಯ ಪ್ರಸಾದ್, ರಾಘವೇಂದ್ರ,ಪ್ರೇಮಾ, ಸುವರ್ಣ ನಾಗರಾಜ್ ಭಾಗವಹಿಸಿದ್ದರು.

