ನವೆಂಬರ್ 15 ರಂದು ಕನ್ನಡ ರಾಜ್ಯೋತ್ಸವ – ಮತ್ತು ವಾಲ್ಮೀಕಿ ಜಯಂತ್ಯುತ್ಸವ.

ನಗರಂಗೆರೆ ನ.12

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಗರಂಗೆರೆ‌ ಗ್ರಾಮ ಪಂಚಾಯಿತಿ ಹಿತ ರಕ್ಷಣಾ ವೇದಿಕೆ‌ ಮತ್ತು ಮೂರ್ತಿ ಇಂಡಸ್ಟ್ರೀಸ್ ಮತ್ತು ಡೆವಲಪರ್ಸ್ ಗ್ರೂಪ್ಸ್, ಚಳ್ಳಕೆರೆ. ಇವುಗಳ ಸಂಯುಕ್ತ ಆಶ್ರಯದಲ್ಲಿ ನವೆಂಬರ್ 15 ರ ಭಾನುವಾರ ಬೆಳಗ್ಗೆ 10 ಗಂಟೆಯಿಂದ ಬೆಂಗಳೂರು ರಸ್ತೆಯಲ್ಲಿ ಬರುವ ಶ್ರೀ ಸಾಯಿ ಗಣೇಶ ಬಡಾವಣೆಯ ಹತ್ತಿರ ಪ್ರಥಮ ಬಾರಿಗೆ ವೈವಿಧ್ಯಮಯ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿದ್ದು.

ಇದರ ಅಂಗವಾಗಿ ಕನ್ನಡ ರಾಜ್ಯೋತ್ಸವ,ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ,ಬೃಹತ್ ರಂಗೋಲಿ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮವು ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಸ್ವಾಮಿ ಜಪಾನಂದಜೀ, ಶ್ರೀ ನರಹರಿ ಸದ್ಗುರು ಆಶ್ರಮದ ಪೀಠಾಧ್ಯಕ್ಷರಾದ ಪೂಜ್ಯ ಡಾ, ವೈ ರಾಜಾರಾಮ್ ಗುರುಗಳ ದಿವ್ಯ ಸಾನಿಧ್ಯದಲ್ಲಿ ನಡೆಯಲಿದ್ದು ಬೆಳಗ್ಗೆ 10 ಗಂಟೆಯಿಂದ ಜೀ ಕನ್ನಡ ವಾಹಿನಿಯ ಖ್ಯಾತ ಗಾಯಕ ಸಿದ್ದಾರಾಮು ಮತ್ತು ತಂಡದವರಿಂದ ಸುಗಮ ಸಂಗೀತ, ಚಳ್ಳಕೆರೆಯ ಯುವ ಗಾಯಕ ಕೆ.ಟಿ ಮುತ್ತುರಾಜ್ ಅವರಿಂದ ನಾಡಗೀತೆಯ ಗಾಯನ ನಡೆಯಲಿದ್ದು. ಕಾರ್ಯಕ್ರಮದ ಉದ್ಘಾಟನೆಯನ್ನು ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆಯ ಸಚಿವರಾದ ಟಿ ರಘುಮೂರ್ತಿ, ಚಿತ್ರದುರ್ಗದ ಸಂಸದರಾದ ಗೋವಿಂದ ಕಾರಜೋಳ ನೆರವೇರಿಸಲಿದ್ದು.

ಅಧ್ಯಕ್ಷತೆಯನ್ನು ಶಿಮುಲ್ ನ ನಿರ್ದೇಶಕರಾದ ಬಿ.ಸಿ ಸಂಜೀವಮೂರ್ತಿ ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ವಿವಿಧ ಪಕ್ಷಗಳ ಮುಖಂಡರು,ವಿವಿಧ ಕ್ಷೇತ್ರಗಳ ಗಣ್ಯರು,ನಗರಂಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಗ್ರಾಮಸ್ಥರು ಭಾಗವಹಿಸಲಿದ್ದು.

ಈ ಬಾರಿಯ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪುರಸ್ಕೃತರಾದ ಬಿ‌.ತಿಪ್ಪಣ್ಣ ಮರಿಕುಂಟೆ, ಅನರ್ಘ್ಯ ರತ್ನ ಪ್ರಶಸ್ತಿ ಪುರಸ್ಕೃತರಾದ ಕೊರ್ಲಕುಂಟೆ ತಿಪ್ಪೇಸ್ವಾಮಿ, ಸಮಾಜ ಸೇವಕರಾದ ಎಚ್.ಎಸ್ ಸೈಯದ್, ಚಿತ್ರದುರ್ಗದ ನ್ಯೂಬರ್ಗ್ ವಾಸವಿ ಲ್ಯಾಬ್ ನ ಡಾ, ನಾರಾಯಣಮೂರ್ತಿ ಅವರಿಗೆ ಸನ್ಮಾನವನ್ನು, ಉಪಹಾರದ ವ್ಯವಸ್ಥೆ ಮಾಡಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button