ರೈತರ ಹೊಲ-ಗದ್ದೆಗಳಿಗೆ ತೆರಳಿದಾಗ ಕುರಿಗಾಹಿಗಳಿಗೆ ಕರಡಿಗಳು ಅನಿರೀಕ್ಷಿತವಾಗಿ ದಾಳಿ ಮಾಡುತ್ತವೆ. ಅರಣ್ಯ ಇಲಾಖೆಯಿಂದ ರಕ್ಷಣೆ ಯಾವಾಗ..? – ಹೊನ್ನೂರಪ್ಪ ವಕೀಲರು.

ಅಮಲಾಪುರ ನ.13

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಚೌಡಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಅಮಲಾಪುರ ಗ್ರಾಮದ ಪಕ್ಕದಲ್ಲಿ ಬರುವ ಮಲಿಯಾಮ್ಮನ ಹಳ್ಳ ಪಕ್ಕದಲ್ಲಿ ಕುರಿ ಮೆಯಿಹಿಸಲು ಹೋಗಿದ್ದ ರಮೇಶ್ 32 ವರ್ಷ ಇವರಿಗೆ ಬೆಳಿಗ್ಗೆ 11.30 ರ ಸಮಯದಲ್ಲಿ ಎರಡು ಕರಡಿಗಳು ದಾಳಿ ಮಾಡಿದ್ದು ರಮೇಶ್ ಎಂಬ ವ್ಯಕ್ತಿಗೆ ತಲೆಯ ಸುಳಿ ಭಾಗದಲ್ಲಿ ಹಾಗೂ ಬಲ ಭಾಗದ ತೊಡೆಯ ಭಾಗದಲ್ಲಿ ಬಾಯಿಯಿಂದ ಹಾಗೂ ಉಗುರುಗಳಿಂದ ಗಾಯ ಗೊಳಿಸಿದ್ದು ದೇಹದ ಅನೇಕ ಕಡೆಗಲ್ಲಿ ಗಾಯಗಳಾಗಿಗೆ, ಈ ವ್ಯಕ್ತಿ ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು.

ಈ ಸಂದರ್ಭದಲ್ಲಿ ಡಾಕ್ಟರ್ ನಾಗರಾಜ್ ಸ್ತ್ರೀ ಯೋಗ ತಜ್ಞರು ಚಿಕಿತ್ಸೆ ನೀಡಿದ್ದು ಇನ್ನೂ ಮೂರು ರಿಂದ ಐದು ದಿನಗಳ ಕಾಲ ದಾಖಲಾತಿಯೊಂದಿಗೆ ಚಿಕಿತ್ಸೆ ಪಡೆದು ಕೊಳ್ಳಬೇಕು ಎಂದು ಸಲಹೆ ನೀಡಿದರು.

ಹಾಗೆ ಈ ಸಂದರ್ಭದಲ್ಲಿ ಗಾಯಗೊಳಗಾದ ರಮೇಶನ ಪತ್ನಿಯಾದ ಗೀತಾ ಇವರು ಸಹ ಕರಡಿಗಳ ದಾಡಿ ದಾಳಿಗಳ ಕುರಿತು ತಿಳಿಸುತ್ತಾ ಸರ್ಕಾರದಿಂದ ಸಿಗುವಂತಹ ಪರಿಹಾರಕ್ಕಾಗಿ ಬೇಡಿಕೆಯಿಟ್ಟರು. ಹಾಗೆ ಕರಡಿಗಳ ದಾಳಿಯಿಂದ ಸಂಕಷ್ಟಕ್ಕೆ ಒಳಗಾಗುತ್ತಿರುವಂತಹ ರೈತರ ಕುರಿತು ಹೊನ್ನೂರಪ್ಪ ವಕೀಲರು ಹಾಗೂ ತಾಲೂಕು ವಕೀಲರ ಸಂಘದ ಅಧ್ಯಕ್ಷರು ಘಟನೆ ಕುರಿತು ತಿಳಿಸುತ್ತಾ ಅರಣ್ಯ ಇಲಾಖೆಗೆ ತಿಳಿಸುತ್ತಾ ಕೂಡ್ಲಿಗಿ ತಾಲೂಕಿನ ಗುಡೇಕೋಟೆಯಲ್ಲಿ ಏಷ್ಯಾದ 2 ನೇ. ಕರಡಿಧಾಮವಿದೆ. ಇಲ್ಲಿ ಕರಡಿಗಳ ಸಂಖ್ಯೆ ಹೆಚ್ಚಾಗಿದ್ದು, ಅರಣ್ಯ ಪ್ರದೇಶದ ಗಡಿ ಭಾಗದ ಗ್ರಾಮಗಳಿಗೆ ಹಾಗೂ ಜಮೀನುಗಳಿಗೆ ಕರಡಿಗಳು ಆಹಾರ ಮತ್ತು ನೀರನ್ನು ಹುಡುಕಿ ಕೊಂಡು ಲಗ್ಗೆಯಿಡುವುದು ಸಾಮಾನ್ಯವಾಗಿದೆ.

ಮಳೆಗಾಲ ಹಾಗೂ ಇತರೆ ಸಂದರ್ಭಗಳಲ್ಲಿ ಕರಡಿಗಳು ಜಮೀನುಗಳ ಪೊದೆಗಳಲ್ಲಿ, ತೋಟಗಳ ಹತ್ತಿರ ಮರಿಗಳೊಂದಿಗೆ ಆಶ್ರಯ ಪಡೆಯುತ್ತವೆ. ರೈತರು ಹೊಲ-ಗದ್ದೆಗಳಿಗೆ ತೆರಳಿದಾಗ ಅಥವಾ ಒಂಟಿ ಯಾಗಿರುವಾಗ ಕರಡಿಗಳು ಅನಿರೀಕ್ಷಿತವಾಗಿ ದಾಳಿ ಮಾಡುತ್ತವೆ.

ಈ ಹಲವು ದಿನಗಳು ಹಾಗೂ ವರ್ಷಾಗಳಿಂದ ನಡೆದಿರುವ ಪ್ರಮುಖ ಪ್ರಾಣ ಹಾನಿ ಸಹ ಹಾಗಿರುವಾಗ ಘಟನೆಗಳು ನೋಡುವುದಾದರೆ ಹಲಸಾಗರ, ಕಡೇಕೋಳ, ಭೀಮಸಮುದ್ರ, ಶ್ರೀಕಂಠಾಪುರ ಮುಂತಾದ ಗ್ರಾಮಗಳ ಸುತ್ತಮುತ್ತ ಕರಡಿ ದಾಳಿಗೆ ಕುರಿಗಾಹಿಗಳು ಹಾಗೂ ರೈತರು ಬಲಿಯಾಗಿರುವ ಮತ್ತು ಗಂಭೀರವಾಗಿ ಗಾಯ ಗೊಂಡಿರುವ ಅನೇಕ ಘಟನೆಗಳು ವರದಿ ಮಾಡಲಾಗಿದೆ.

ರೈತರಿಗೆ ಗಾಯ ಅಮಲಾಪುರ, ಹಿರೇಹೆಗ್ಡಾಳ್ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ, ನೀರು ಹಾಯಿಸುತ್ತಿದ್ದ ಅಥವಾ ಬಿತ್ತನೆ ಮಾಡುತ್ತಿದ್ದ ರೈತರ ಮೇಲೆ ಕರಡಿಗಳು ದಾಳಿ ನಡೆಸಿ ಗಾಯ ಗೊಳಿಸಿರುವ ಉದಾಹರಣೆಗಳಿವೆ.

ಬೆಳೆ ಹಾಗೂ ಆರ್ಥಿಕ ನಷ್ಟ:-

ಮುಂಗಾರು ಹಾಗೂ ಇತರ ಬಿತ್ತನೆ ಸಂದರ್ಭಗಳಲ್ಲಿ ರೈತರು ಹೊಲದಲ್ಲಿ ಬಿತ್ತಿದ ಬೀಜಗಳನ್ನು ಕರಡಿಗಳು ಕೆದರಿ ತಿನ್ನುತ್ತವೆ.

ಇದರಿಂದ ರೈತರಿಗೆ ತೀವ್ರ ಬೆಳೆಹಾನಿ ಉಂಟಾಗಿ ಆರ್ಥಿಕ ನಷ್ಟವಾಗುತ್ತಿದೆ. ಇದರ ನೋವನ್ನು ಅನುಭವಿಸುವ ಪ್ರತಿಯೊಬ್ಬ ರೈತರ ಆಕ್ರೋಶ ಹಾಗೂ ಅರಣ್ಯ ಇಲಾಖೆಯ ಕ್ರಮ ಕೈಗೊಳ್ಳಲು ತಾಲೂಕಿನ ಹಲವು ಪ್ರಜ್ಞಾವಂತರು ರೈತರು ಹಾಗೂ ವಿವಿಧ ಸಂಘಟನೆಯ ಮುಖಂಡರು ಹೇಳುವಾಗೆ ಕಾಡಂಚಿನ ಗ್ರಾಮಗಳ ಜನರಿಗೆ ಜೀವ ಭಯವಿರುವುದರಿಂದ, ಅರಣ್ಯ ಇಲಾಖೆಯು ಸೂಕ್ತ ತಡೆ ಗೋಡೆಗಳನ್ನು ನಿರ್ಮಿಸಬೇಕು.

ಕರಡಿಗಳು ನಾಡಿಗೆ ನುಗ್ಗದಂತೆ ಬಿಗಿ ಬಂದೋಬಸ್ತ್ ಹಾಗೂ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂಬುದು ಸಾರ್ವಜನಿಕರು ಮತ್ತು ರೈತರ ಪ್ರಮುಖ ಒತ್ತಾಯವಾಗಿದೆ.

ಇಲಾಖೆಯು ಕರಡಿ ಧಾಮದೊಳಗೆ ಪ್ರಾಣಿಗಳಿಗೆ ಕುಡಿಯಲು ನೀರಿನ ಹೊಂಡಗಳ ನಿರ್ಮಾಣ, ವೀಕ್ಷಣಾ ಗೋಪುರಗಳ ಸ್ಥಾಪನೆ ಹಾಗೂ ಅಗತ್ಯವಿರುವ ಕಡೆಗಳಲ್ಲಿ ಬೋನುಗಳನ್ನು ಅಳವಡಿಸುವ ಕಾರ್ಯಾಚರಣೆಗಳನ್ನು ಮಾಡುತ್ತಿದ್ದರೂ, ಮಾನವ-ಪ್ರಾಣಿ ಸಂಘರ್ಷವನ್ನು ಸಂಪೂರ್ಣವಾಗಿ ತಡೆಯಲು ಇನ್ನೂ ಹೆಚ್ಚಿನ ಸುರಕ್ಷತಾ ಕ್ರಮಗಳ ಅವಶ್ಯಕತೆಯಿದೆ ಎಂದು ತಿಳಿಸುತ್ತಾ ಇದಕ್ಕೆ ಸಂಬಂಸಿದಂತ ಅಧಿಕಾರಿಗಳು ತಾಲೂಕು ಆಡಳಿತ, ಅರಣ್ಯ ಇಲಾಖೆ, ಹಾಗೂ ಶಾಸಕರು, ಇತ್ತ ಚಿತ್ತ ಗಮನ ಹರಿಸಿ ಸೂಕ್ತ ಪರಿಹಾರ ನೀಡಬೇಕು ಎಂದು ತಿಳಿಸಿದರು.

ಜಿಲ್ಲಾ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ ಬಿ. ಸಾಲುಮನೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button