ಅವತಾರ ಪುರುಷರು ಮಾನವ ಶರೀರ ಧರಿಸಿಯೇ ಲೀಲಾಕಾರ್ಯ ಮಾಡುತ್ತಾರೆ – ಸಮಾಜ ಸೇವಕ ಯತೀಶ್ ಎಂ ಸಿದ್ದಾಪುರ.

ಚಳ್ಳಕೆರೆ ನ.19

ಜಗತ್ತಿನಲ್ಲಿ ಅವತಾರಿಸುವ ಅವತಾರ ಪುರುಷರು ಸಾಮಾನ್ಯ ಮಾನವ ಶರೀರ ಧರಿಸಿಯೇ ತಮ್ಮ ಲೀಲಾ ಕಾರ್ಯವನ್ನು ನಡೆಸುತ್ತಾರೆ ಎಂದು ಚಳ್ಳಕೆರೆಯ ತ್ಯಾಗರಾಜ ನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಸದಸ್ಯ ಹಾಗೂ ಸಮಾಜ ಸೇವಕ ಯತೀಶ್ ಎಂ ಸಿದ್ದಾಪುರ ತಿಳಿಸಿದರು.

ತ್ಯಾಗರಾಜ ನಗರದ ಸದ್ಭಕ್ತರಾದ ಶ್ರೀಮತಿ ನಂಜಮ್ಮ ಕೆಂಚಪ್ಪ ಶಿಕ್ಷಕರ ಸವಿತಾ ನಿವಾಸದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಜನೆ ನಡೆಸಿಕೊಟ್ಟ ಅವರು “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ ಮಾಡುತ್ತ “ಮಾನವೀಯ ಮುಸುಕಿನಲ್ಲಿ” ಎಂಬ ಅಧ್ಯಾಯವನ್ನು ಓದುತ್ತಾ ಮಾತನಾಡಿದರು.

ಪಾರಾಯಣದಲ್ಲಿ ಹೆಚ್ ಲಕ್ಷ್ಮೀದೇವಮ್ಮ, ಪ್ರೇಮಾ ನಾಗೇಶ್, ಎಂ ಗೀತಾ ನಾಗರಾಜ್, ಸುವರ್ಣ ನಾಗರಾಜ್, ಶೋಭಾ ರಮೇಶ್, ತಿಪ್ಪಮ್ಮ ಉಮಾಶಂಕರ್, ಗೀತಾ ಸುಂದರೇಶ್, ಪ್ರಮೀಳಾ ಜಗದೀಶ್, ಆಶಾ ನಾಗರಾಜ್,ಎಂ ಲಕ್ಷ್ಮೀದೇವಮ್ಮ, ಸರಸ್ವತಿ, ದಾಕ್ಷಾಯಣಿ, ವನಜಾಕ್ಷಿ ಪಂಚಾಕ್ಷರಿ ಪಾಲ್ಗೊಂಡಿದ್ದರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button