ಕೂಡ್ಲಿಗಿ ಹಾಗೂ ಹೆಚ್.ಬಿ ಹಳ್ಳಿಯಲ್ಲಿ ನಡೆದ ಮನೆ ಕಳ್ಳತನವನ್ನು ಪತ್ತೆ ಹಚ್ಚಿ ಆಭರಣಗಳನ್ನು ಜಪ್ತಿ ಪಡಿಸಿಕೊಂಡ ಬಗ್ಗೆ – ಪತ್ರಿಕಾ ಗೋಷ್ಟಿ ನಡೆಸಿದ ಡಿ.ವೈ.ಎಸ್ಪಿ ಮಲ್ಲೇಶ. ದೊಡ್ಮನಿ.
ಕೂಡ್ಲಿಗಿ ಏ.12

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕ ಹಾಗೂ ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ನಡೆದ ಕೆಲ ಕಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚಿ ಮೂವರು ಆರೋಪಿಗಳನ್ನು ಬಂಧಿಸಿ ಕಳ್ಳತನ ವಾಗಿರುವ ಬೆಲೆ ಬಾಳುವ ವಸ್ತುಗಳನ್ನು ಜಪ್ತಿ ಪಡಿಸಿಕೊಂಡ ಕುರಿತು ಗುರುವಾರ ರಂದು ಪತ್ರಿಕಾ ಗೋಷ್ಠಿ ನಡೆಸಿದ ಕೂಡ್ಲಿಗಿ ಡಿವೈಎಸ್ಪಿ ಮಲ್ಲೇಶ ದೊಡ್ಮನಿ ಉಪ ವಿಭಾಗ ಕೂಡ್ಲಿಗಿ ಇವರ ಸೂಕ್ತ ಮಾರ್ಗದರ್ಶನದಲ್ಲಿ ಪ್ರಹ್ಲಾದ್.ಆರ್. ಚೆನ್ನಗಿರಿ ಸಿಪಿಐ ಕೂಡ್ಲಿಗಿ ಹಾಗೂ ವಿಕಾಸ್.ಪಿ ಲಂಬಾಣಿ ಸಿಪಿಐ ಹೆಚ್.ಬಿ ಹಳ್ಳಿ ಮತ್ತು ಕೂಡ್ಲಿಗಿ ಠಾಣೆಯ ಪಿಎಸ್ಐ ಸಿ.ಪ್ರಕಾಶ್ ಹಾಗೂ ಸಿಬ್ಬಂದಿ ವರ್ಗದವರು ಮನೆ ಕಳ್ಳತನ ಪ್ರಕರಣವನ್ನು ಪತ್ತೆ ಕಾರ್ಯವನ್ನು ಕೈಗೊಂಡು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಪೊಲೀಸ್ ಇಲಾಖೆಯವರು ತಿಳಿಸಿರುತ್ತಾರೆ.ಬಂಧನಕ್ಕೊಳ ಗಾಗಿರುವ ಎಂ.ಇಂದ್ರ ಅಲಿಯಾಸ್ ದುರ್ಗಪ್ಪ ತಂದೆ ನಾಗೇಶ್ 25 ವರ್ಷ ಬಟ್ಟೆ ವ್ಯಾಪಾರ ಕೆಲಸ ಮಾಡುತ್ತಿದ್ದು ಈತನು ರಾಮ್ ರಹೀಮ್ ನಗರ ಹಗರಿಬೊಮ್ಮನಹಳ್ಳಿ ಪಟ್ಟಣ ವಾಸಿಯಾಗಿದ್ದು, ಹಾಗೂ ಜಿ..ಸತೀಶ್ ಗೌಡ ತಂದೆ ಲೇಸನ್ ಗೌಡ 34 ವರ್ಷ ಈತನು ಡ್ರೈವರ್ ಕೆಲಸ ಮಾಡುತ್ತಿದ್ದು ಸಂತೆ ಮಾರ್ಕೆಟ್ ಹತ್ತಿರ ಪಾದಗಟ್ಟೆ ಗುಡಿ ಎದುರುಗಡೆ ಮರಮನಹಳ್ಳಿ ಪಟ್ಟಣದಲ್ಲಿ ವಾಸವಿದ್ದು, ಹಾಗೆ ವಲ್ಲಿ ಅಲಿಯಾಸ್ ಸುಭಾಷ್ ತಂದೆ ವೆಂಕಟೇಶ್ ಈತನ 23 ವರ್ಷ ಈತನು ದೃಷ್ಟಿ ಕರಿಮಣಿ ಮಾರುವ ಕೆಲಸ ಮಾಡಿಕೊಂಡು ಯಡ್ರಾಮನಹಳ್ಳಿ ಗ್ರಾಮದ ನಿವಾಸಿಯಾಗಿರುವ ಈತನು ಹಗರಿಬೊಮ್ಮನಹಳ್ಳಿ ತಾಲೂಕಿನವನು ಮೇಲ್ಕಂಡ ಆರೋಪಿತರು ರಾಜ್ಯದ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಸುಮಾರು 10-15 ಠಾಣೆಗಳಲ್ಲಿ ವಾರೆಂಟ್ ಬಾಕಿ ಇರುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ, ಹಾಗೆ ದಸ್ತಿಗಿರಿ ಮಾಡಿ ಇವರಿಂದ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ 2 ಹಾಗೂ ಹಗರಿಬೊಮ್ಮನಹಳ್ಳಿ ಠಾಣೆಯಲ್ಲಿ 2 ಒಟ್ಟು 4 ಮನೆ ಕಳ್ಳತನ ಪ್ರಕರಣದಲ್ಲಿ ಮೇಲ್ಕಂಡ ಆರೋಪಿತರಿಂದ ಒಟ್ಟು, 215 ಗ್ರಾಂ ಬಂಗಾರದ ಆಭರಣಗಳು 2 ಕೆಜಿ ಬೆಳ್ಳಿ ಆವರಣಗಳು ಒಂದು ಸ್ವಿಫ್ಟ್ ಡಿಸೈರ್ ಕಾರು ಅಂದಾಜು ಬೆಲೆ 2 ಲಕ್ಷ ರೂಪಾಯಿಗಳು, ಹಾಗೆ ಒಟ್ಟು 22,00,750 ರೂಪಾಯಿ ಬೆಲೆ ಬಾಳುವ ವಸ್ತುಗಳನ್ನು ಜಪ್ತಿ ಪಡಿಸಿಕೊಂಡಿದ್ದು ಪೊಲೀಸ್ ಇಲಾಖೆಯವರು ತಿಳಿಸಿರುತ್ತಾರೆ. ಸದರಿ ಈ ಕಾರ್ಯಚರಣೆಯನ್ನು ಮಾಡಿದ ಡಿವೈಎಸ್ಪಿ ಮಲ್ಲೇಶ ದೊಡ್ಮನಿ ಪ್ರಹ್ಲಾದ್.ಆರ್ ಚನ್ನಗಿರಿ ಸಿಪಿಐ ಕೂಡ್ಲಿಗಿ , ವಿಕಾಸ್.ಪಿ ಲಮಾಣಿ ಸಿಪಿಐ ಹೆಚ್.ಬಿ ಹಳ್ಳಿ ಸಿ.ಪ್ರಕಾಶ್ ಪಿ ಎಸ್ ಐ ಕೂಡ್ಲಿಗಿ ಹಾಗೂ ಸಿಬ್ಬಂದಿ ವರ್ಗದವರಾದ ಮುಜವಾರ್ ಭಾಷಾ, ಎಎಸ್ಐ ,ತಿಪ್ಪೇಸ್ವಾಮಿ ಎಚ್ ಸಿ, ಬಸಪ್ಪ ಬದ್ದಿ, ಹೆಚ್.ಸಿ ಬಂಡೆ ರಾಘವೇಂದ್ರ ,ಮಂಜುನಾಥ, ಬಸವರಾಜ, ಕುಮಾರ ಪತ್ರಿ, ರಾಜೇಂದ್ರ ಪ್ರಸಾದ , ಹಸಾನುಲ್ಲಾ,ಇರ್ಷದ್, ಅಂಜಿನಪ್ಪ, ಕೊಟ್ರೇಶ್ ಹಂಪಣ್ಣ ,ಮಲ್ಲಿಕಾರ್ಜುನ, ಹೇಮಲತಾ, ಬಾಗಳಿ ಕೊಟ್ರೇಶ್, ಇವರುಗಳನ್ನು ಹರಿಬಾಬು ಐಪಿಎಸ್ ಪೊಲೀಸ್ ಅಧ್ಯಕ್ಷರು ವಿಜಯನಗರ ಜಿಲ್ಲೆ ರವರು ಶ್ಲಾಘಿಸಿ ಬಹುಮಾನವನ್ನು ಘೋಷಿಸಿದ್ದಾರೆ ಎಂದು ವರದಿಯಾಗಿದೆ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ.ಸಾಲುಮನೆ.ಕೂಡ್ಲಿಗಿ