ಬಂಜಾರ ಸಂಸ್ಕೃ ತಿ ಜನಪದ ಕಲೆ ಉಳಿಸಿ ಬೆಳೆಸಿರಿ
ತರೀಕೆರೆ ಮಾ, 19 — ಅಳಿವಿನ ಅಂಚಿನಲ್ಲಿರುವ ಬಂಜಾರ ಸಂಸ್ಕೃತಿ ಮತ್ತು ಜನಪದ ಕಲೆ ನಶಿಸಿ ಹೋಗುತ್ತಿದೆ ಅದನ್ನು ಉಳಿಸಿ ಬೆಳೆಸಬೇಕು ಎಂದು ಮಾಜಿ ಶಾಸಕರಾದ ಟಿ ಹೆಚ್ ಶಿವಶಂಕರಪ್ಪನವರು ತರೀಕೆರೆ ಬಯಲು ರಂಗಮಂದಿರದಲ್ಲಿ ಬಂಜಾರ ಸೇವಾಲಾಲ್ ಸೇನೆ ತರೀಕೆರೆ, ಹಾಗೂ ತಾಲೂಕು ಬಂಜಾರ ಸಂಘ ತರೀಕೆರೆ, ಇವರು ಏರ್ಪಡಿಸಿದ್ದ.
ಚಿಕ್ಕಮಗಳೂರು ಜಿಲ್ಲಾ ಯುವಜನೋತ್ಸವ ಹಾಗೂ ಬಂಜಾರ ಸಂಸ್ಕೃತಿ ಉತ್ಸವ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದರು. ಬಂಜಾರ ಸೇವಾಲಾಲ್ ಸೇನೆಯವರು ಜಿಲ್ಲೆಯಲ್ಲಿಯೇ ಮೊಟ್ಟ ಮೊದಲ ಬಾರಿಗೆ ಇಂತಹ ಕಾರ್ಯಕ್ರಮ ಏರ್ಪಡಿಸಿರುವುದು ಶ್ಲಾಘನೀಯ ಎಂದು ಹೇಳಿದರು. ಸರ್ದಾರ್ ಸೇವಾಲಾಲ್ ಸ್ವಾಮೀಜಿ ಮಾತನಾಡಿ ಬಂಜಾರ ಸಮಾಜದ ಯುವಕರು ತಮ್ಮ ಗುರಿ ಸಾಧನೆಗೆ ಶ್ರದ್ಧೆ ನಿಷ್ಠೆ ಇದ್ದರೆ ಗುರಿಯನ್ನು ಮುಟ್ಟಬಹುದು. ಸದಾ ನಮ್ಮಲ್ಲಿ ಸಕಾರಾತ್ಮಕವಾದ ಆಲೋಚನೆಗಳು ಇರಬೇಕು, ಉತ್ಸಾಹ ಮತ್ತು ನಗೆ, ಸಂತೋಷ ಮನುಷ್ಯನ ಜೀವನ ಸುಖವಾಗಿರುತ್ತದೆ. ಯಾರೊಬ್ಬರೂ ಜೀವನದಲ್ಲಿ ಉತ್ಸಾಹವನ್ನು ಕಳೆದುಕೊಳ್ಳಬಾರದು.
ದುಶ್ಚಟಗಳಿಗೆ ದಾಸರಾಗಿ ಯುವಶಕ್ತಿ ಹಾಳಾಗುತ್ತಿದೆ. ಯುವಶಕ್ತಿಯನ್ನು ಒಳ್ಳೆಯ ರೀತಿಯಲ್ಲಿ ಬಳಸಿಕೊಳ್ಳಬೇಕು, ಯುವಶಕ್ತಿಯಿಂದ ದೇಶಕ್ಕೆ ಸಮಾಜಕ್ಕೆ ಉತ್ತಮ ಕೊಡುಗೆ ಮಾಡಬಹುದು, ಸಮಾಜದಲ್ಲಿ ಏನಾದರೂ ಬದಲಾವಣೆ ಮಾಡಬೇಕೆಂದರೆ ಯುವಕರು ಮುಂದೆ ಬರಬೇಕು ಎಂದು ಹೇಳಿದರು. ಅತಿಥಿಗಳಾಗಿ ಆಗಮಿಸಿದ್ದ ಸಮಾಜ ಸೇವಕ ಕಾಂಗ್ರೆಸ್ ಪಕ್ಷದ ಆಕಾಂಕ್ಷಿ ಯಾದ ಎಚ್ಎಮ್ ಗೋಪಿಕೃಷ್ಣ ಮಾತನಾಡಿ ಬಂಜಾರ ಸಮಾಜದ ಬಂಧುಗಳಿಗೂ ನನಗೂ ತುಂಬಾ ಆತ್ಮೀಯ ನಾನು ಸಹ ಬಂಜಾರ ಸಮಾಜದ ತಾಂಡಗಳ ಗೆಳೆಯರೊಂದಿಗೆ ಸಹವಾಸ ಪ್ರೀತಿ ವಿಶ್ವಾಸ ಗಳಿಸಿದ್ದೇನೆ ನನಗೆ ತಾವೆಲ್ಲರೂ ಪ್ರೋತ್ಸಾಹ ನೀಡಬೇಕು ಆಶೀರ್ವದಿಸಬೇಕು ಮುಂದಿನ ಚುನಾವಣೆಯಲ್ಲಿ ನಿಮ್ಮೆಲ್ಲರ ಆಶೀರ್ವಾದ ನನಗೆ ಅಗತ್ಯವಾಗಿ ಬೇಕಾಗಿದೆ ಎಂದು ಕೋರಿದರು.
ವೇದಿಕೆಯಲ್ಲಿ ಸಮಾಜದ ಮುಖಂಡರಾದ ಸೇವೆ ನಾಯ್ಕ, ರಾಮಪ್ಪ, ಗೋವಿಂದ ನಾಯ್ಕ, ಶಿವಮೂರ್ತಿ ನಾಯ್ಕ, ಲಾಯರ್ ಶಿವಶಂಕರ್, ತಾಳಿಕಟ್ಟೆ ಲೋಕೇಶ್, ಟಿಎಸ್ ರಮೇಶ್, ಕರಡಿಪುರದ ಉಮೇಶ್ ನಾಯ್ಕ, ಲಾಯರ್ ಶೇಖರ ನಾಯ್ಕ, ದಾಸ್ಯ ನಾಯಕ,ಹಾಗೂ ರೂಪ ನಾಯಕ ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು:ಎನ್.ವೆಂತೇಶ್.ತರೀಕೆರೆ