ಚಿಗುರುವ ಎಲೆಯ ಬೇರು
ಚಿಗುರುವ ಎಲೆಯ ಬೇರು

ಚೈತ್ರದ ಚಿಗುರಿನಂತೆ ನನ್ನವಳ ನಯನ
ನಾಟ್ಯಮಯೂರಿಯಂತೆ ಅವಳ ನಿತ್ಯ ನರ್ತನ
ಪ್ರೀತಿ ಪ್ರೇಮದಲ್ಲಿ ಅವಳಿಗೆ ಯಾರು ಇಲ್ಲ ಸಮಾನ
ಪ್ರತಿನಿತ್ಯ ನೆನಪಾಗುತ್ತಿದೆ ಅವಳ ಸುಂದರ ವದನ
ಚೈತ್ರದ ಚಿಗುರಿನಂತೆ ಹೆತ್ತವ್ವಳ ಪ್ರೀತಿ
ಮನದಿ ನಿತ್ಯ ಬೆಳಗುತಿರುವೆ ತಾಯಿಗೆ ಆರತಿ
ಮಮತೆ ಕರುಣೆಗೆ ನೀನು ಸಹನಾ ಮೂರೂತಿ
ಜಗದಗಲ ಬೆಳಗುತಿದೆ ತಾಯಿ ಕೃಪದಿಂದ ಎನ್ನ ಕಿರೂತಿ
ಚೈತ್ರದ ಚಿಗುರಿನಂತೆ ತಂದೆಯ ಜವಾಬ್ದಾರಿ
ನನ್ನ ಭವ್ಯ ಭವಿಷ್ಯಕ್ಕೆ ನೀನೇ ರುವಾರಿ
ತಂದೆ ಇರದಿದ್ದರೆ ಬದುಕಲಿ ನಾವು ಅಲೆಮಾರಿ
ಎದ್ದಾಗೊಮ್ಮೆ ಅವರ ಪಾದಕ್ಕೆ ಕೈಮುಗಿರಿ
ಚೈತ್ರದ ಚಿಗುರಿನಂತೆ ಗೆಳೆಯರ ಒಡನಾಟ
ಉಸಿರಲಿ ನೆನಪಿರಲಿ ಬಾಲ್ಯದ ಸ್ನೇಹಕೂಟ
ಮತ್ತೆ ಮತ್ತೆ ನೆನಪಾಗುವುದು ಜೂಟಾಟ ಚೆಲ್ಲಾಟ
ಮಾತು ಬಿಟ್ಟು ಸ್ನೇಹದಲಿ ಬರದಿರಲಿ ಗೋಳಾಟ
ಚೈತ್ರದ ಚಿಗುರಿನಂತೆ ಗುರುವಿನ ಬೋಧನೆ
ಕಪ್ಪು ಹಲಗೆಯಲಿ ಶಿಷ್ಯರ ಬದುಕಿನ ಬದಲಾವಣೆ
ಗುರುವಿರದೆ ಮಾಡಿದ್ದಾರೆಯೇ ಯಾರಾದರೂ ಸಾಧನೆ
ರೂಢಿಯಾಗಲಿ ತಂದೆ ತಾಯಿ ಗುರುವಿಗೆ ವಂದನೆ
ರಚನೆ: ಶ್ರೀ ಮುತ್ತು.ಯ.ವಡ್ಡರ