ಸಮುದಾಯ ಆರೋಗ್ಯ ಕೇಂದ್ರದ ನೂತನ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಶಂಕುಸ್ಥಾಪನೆ ಮಾಡಿ ಶಾಸಕ ಡಿ ಎಸ್ ಸುರೇಶ್
ಸಮುದಾಯ ಆರೋಗ್ಯ ಕೇಂದ್ರದ. ನೂತನ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಶಂಕುಸ್ಥಾಪನೆ ಮಾಡಿ ಮಾತನಾಡಿದರು
ತರೀಕೆರೆ ಮಾ, 19 — ನೀರಾವರಿ ಇಲಾಖೆಯಿಂದ ಜಾಗದಲ್ಲಿ ಸುಮಾರು 80 ವರ್ಷಗಳಿಂದ ವಾಸವಾಗಿದ್ದ ಹುಣಸೆನಹಳ್ಳಿ ಗ್ರಾಮದ ಸುಮಾರು 72 ಜನರಿಗೆ ಮನೆ ನಿವೇಶನಗಳನ್ನು ಕಂದಾಯ ಇಲಾಖೆಯಿಂದ, 94 ಸಿ ಅಡಿಯಲ್ಲಿ ಮಂಜೂರು ಮಾಡಿಸಿ ಕೊಟ್ಟಿರುತ್ತೇನೆ ಎಂದು ಲಕ್ಕವಳ್ಳಿ ಯಲ್ಲಿ ಶಾಸಕ ಡಿಎಸ್ ಸುರೇಶ್ ರವರು ಕರ್ನಾಟಕ ಸರ್ಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಚಿಕ್ಕಮಗಳೂರು, ತಾಲೂಕು ಆರೋಗ್ಯ ಅಧಿಕಾರಿಗಳ ಕಛೇರಿ ತರೀಕೆರೆ, ಇವರು ಏರ್ಪಡಿಸಿದ್ದ ಸಮುದಾಯ ಆರೋಗ್ಯ ಕೇಂದ್ರದ ನೂತನ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಶಂಕುಸ್ಥಾಪನೆ ಮಾಡಿ ಮಾತನಾಡಿದರು.

ತರೀಕೆರೆ ಪಟ್ಟಣದಲ್ಲಿ ವಾಸವಾಗಿರುವ, ಚೌಡೇಶ್ವರಿ ಕಾಲೋನಿ ಬಾಪೂಜಿ ಕಾಲೋನಿ ಮತ್ತು ನಾಗಪ್ಪ ಕಾಲೋನಿ ಕೊಳಚೆ ಪ್ರದೇಶದ ನಿವಾಸಿಗಳಿಗೆ 412 ಹಕುಪತ್ರಗಳನ್ನು ವಿತರಿಸಿದ್ದೇನೆ, ಇಂದು ಪ್ರಾಥಮಿಕ ಆರೋಗ್ಯ ಕೇಂದ್ರದಿಂದ 9 ಕೋಟಿ ಅನುದಾನದಲ್ಲಿ ಮೇಲ್ದರ್ಜೆಗೇರಿಸಿರುವ ಸಮುದಾಯ ಆರೋಗ್ಯ ಕೇಂದ್ರದ ನೂತನ ಕಟ್ಟಡ ನಿರ್ಮಾಣ ಕಾಮಗಾರಿಯ ಶಂಕು ಸ್ಥಾಪನೆಯನ್ನು ಮಾಡಿದ್ದೇನೆ. ಮುಂದಿನ ವಾರ ತರೀಕೆರೆಯಲ್ಲಿ 30 ಕೋಟಿ ಅನುದಾನದಲ್ಲಿ ತಾಯಿ ಮಗು ಆಸ್ಪತ್ರೆ ಶಂಕುಸ್ಥಾಪನೆ ಮಾಡಲಾಗುತ್ತದೆ. ಕ್ಷೇತ್ರದಲ್ಲಿ ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ ಅತಿ ಹೆಚ್ಚು ಪ್ರಾತಿನಿತ್ಯ ಕೊಟ್ಟು ತರೀಕೆರೆ ಆಸ್ಪತ್ರೆಗೆ ಅತ್ಯಾಧುನಿಕವಾದ ಲ್ಯಾಬ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಒಂದು ಕೋಟಿ ಅನುದಾನದಲ್ಲಿ ಆಕ್ಸಿಜನ್ ಪ್ಲಾಂಟ್ ನಿರ್ಮಾಣ ಮಾಡಲಾಗಿದೆ. ಕ್ಷೇತ್ರದಲ್ಲಿ ಎಲ್ಲಾ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ, ಸಮುದಾಯ ಭವನಗಳನ್ನು ನಿರ್ಮಾಣ ಮಾಡಲಾಗಿದೆ.
ಸ್ವಚ್ಛ ಭಾರತ್ ಯೋಜನೆ ಅಡಿ ಎಲ್ಲಾ ಗ್ರಾಮಗಳಲ್ಲಿಯೂ ಸ್ವಚ್ಛತೆಯನ್ನು ಕಾಪಾಡಲು ಶೌಚಾಲಯಗಳನ್ನು ನಿರ್ಮಾಣ ಮಾಡಿಸಲಾಗಿದೆ. 625 ಕೋಟಿ ಅನುದಾನದಲ್ಲಿ ಭದ್ರಾ ಜಲಾಶಯದಿಂದ ಮನೆಮನೆಗೂ ಶುದ್ಧ ಕುಡಿಯುವ ನೀರನ್ನು ಕೊಡುವ ಯೋಜನೆ ಚಾಲನೆಯಾಗಿದೆ. ಎಲ್ಲಾ ಜಾತಿ ಸಮುದಾಯದವರಿಗು ಸಹ ಭೇದ ಭಾವವಿಲ್ಲದೆ ಕೆಲಸ ಮಾಡಿದ್ದೇನೆ. ಲಕ್ಕವಳ್ಳಿ ಡ್ಯಾಮ್ ಬಲಿ ಇರುವ ಕದಲಿ ರಂಗನಾಥ ಸ್ವಾಮಿ ದೇವಸ್ಥಾನ ಅಭಿವೃದ್ಧಿ ಪಡಿಸಲಾಗಿದೆ.
ಸೋಂಪುರದಲ್ಲಿರತಕ್ಕಂತ ಸೋಮೇಶ್ವರ ದೇವಸ್ಥಾನವನ್ನು ಮೂರು ಕೋಟಿ ಅನುದಾನದಲ್ಲಿ ಪುನರ್ ನಿರ್ಮಾಣ ಮಾಡಲಾಗುತ್ತಿದೆ. ಕ್ಷೇತ್ರದ ತರೀಕೆರೆ ಮತ್ತು ಅಜ್ಜಂಪುರ ಎರಡು ತಾಲೂಕುಗಳಲ್ಲಿಯೂ ಅತೀ ಹೆಚ್ಚು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಯಾರು ಅಭಿವೃದ್ಧಿ ಮಾಡದ ಕೆಲಸ ಮಾಡಿದ್ದಾರೆ ಅವರಿಗೆ ಅವಕಾಶ ಕೊಡಿ ಎಂದು ಹೇಳಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ತಾಲೂಕು ವೈದ್ಯಧಿಕಾರಿಯಾದ ಡಾಕ್ಟರ್ ಚಂದ್ರಶೇಖರ್ ರವರು ಮಾತನಾಡಿ ಶತಮಾನದಲ್ಲಿ ಕಂಡರೆಯದ ಮಹಾ ಭೀಕರ ಮಹಾಮಾರಿ ಕೋವಿಡ್ ರೋಗದ ಅಭಿರುದ್ಧ ಎಲ್ಲಾ ಇಲಾಖೆಯವರು, ಸಾರ್ವಜನಿಕರ ಸಹಕಾರದೊಂದಿಗೆ ಕೋವಿಡ್ ನಿಂದ ಜಯಗಳಿಸಿದ್ದೇವೆ.
ನಂತರದ ದಿನಗಳಲ್ಲಿ ಹೊಸ ಹೊಸ ಕಟ್ಟಡಗಳು ವಸತಿಗೃಹಗಳು ನಿರ್ಮಾಣವಾಗಿವೆ ಸುಮಾರು 700 ಜನ ನೌಕರರು ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು. ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶಿವಯೋಗಿಯವರು ಮಾತನಾಡಿದರು.
ಲಕ್ಕವಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ನಾಗರತ್ನ ಧನಪಾಲ್, ಉಪಾಧ್ಯಕ್ಷರಾದ ಕುಪ್ಪನ್, ಡಾಕ್ಟರ್ ಪ್ರಸನ್ನ ಕುಮಾರ್ ಸಣ್ಣಕ್ಕಿ, ಡಾಕ್ಟರ್ ಮಮತಾ, ಮಾಲಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ವೇತ ವಿಜಯಕುಮಾರ್, ಸಿ ಡಿ ಪಿ ಓ ಜ್ಯೋತಿ ಲಕ್ಷ್ಮಿ, ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಪದ್ಮಾವತಿ ಸಂಜೀವಕುಮಾರ್, ಮಾಜಿ ಜಿಲ್ಲಾ ಪಂಚಾಯತಿ ಉಪಾಧ್ಯಕ್ಷರಾದ ಎ ಶ್ರೀ ರಾಮ್, ಲಕ್ಕವಳ್ಳಿಯ ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಮಧು ಕುಮಾರ್, ನರೇಂದ್ರ ಜೈನ್, ನಾಗರಾಜ್, ಚಂದನ್ ಜೋಯಿಶ್, ಚರಣ್ ಕುಮಾರ್, ರಂಜಿತ್, ರವಿರಾಜ್, ನಾಗರತ್ನ,ಹರಿಕೃಷ್ಣ , ಉಪ ತಾಶಿಲ್ದಾರ್ ವಾಣಿಶ್ರೀ, ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಶಾಂತಮ್ಮ ಅಬ್ದುಲ್ ರೆಹಮಾನ್, ಭವಾನಿ, ಚೇತನ್, ಸುವರ್ಣಮ್ಮ ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್ ತರೀಕೆರೆ