ರವಿ ಬಸ್ರೂರರಿಗೆ ಶ್ರೀ ಸಿದ್ಧಶ್ರೀ – ರಾಷ್ಟ್ರೀಯ ಪ್ರಶಸ್ತಿ.
ಸಿದ್ಧನಕೊಳ್ಳ ಜ.04

ಇಲಕಲ್ ತಾಲೂಕಿನ ಸುಕ್ಷೇತ್ರ ಶ್ರೀ ಸಿದ್ಧನಕೊಳ್ಳದ ಜಾತ್ರಾ ವಿಶೇಷವಾಗಿ, ಶ್ರೀ ಸಿದ್ಧಶ್ರೀ ರಾಷ್ಟ್ರೀಯ ಉತ್ಸವ ಹಾಗೂ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವ -2025 ರ. ಪ್ರಶಸ್ತಿಯ ಜೊತೆಗೆ ಹೊಸದಾಗಿ ಈ ವರ್ಷ ರಾಜ್ಯ ಚಲನ ಚಿತ್ರ ಪ್ರಶಸ್ತಿಯನ್ನು ನೀಡಲಾಗುವುದೆಂದು ಡಾ, ಶ್ರೀ ಶಿವಕುಮಾರ ಮಹಾಸ್ವಾಮಿಗಳು ಹೇಳಿದರು. ಅವರು ಸಿದ್ಧನಕೊಳ್ಳದಲ್ಲಿ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿ, ಜ. 14 ಮತ್ತು 15 ರಂದು ಎರಡು ದಿನಗಳ ಕಾಲ ಶ್ರೀ ಸಿದ್ಧನಕೊಳ್ಳದಲ್ಲಿ ಸಿದ್ಧಶ್ರೀ ರಾಷ್ಟ್ರೀಯ ಉತ್ಸವ ಹಾಗೂ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ ಅದ್ದೂರಿಯಾಗಿ ನಡೆಯಲಿದೆ. ಪ್ರತಿ ವರ್ಷದಂತೆ ಈ ವರ್ಷವೂ ಸಿದ್ಧಶ್ರೀ ರಾಷ್ಟ್ರೀಯ ಪ್ರಶಸ್ತಿಯನ್ನು ಹಾಗೂ ರಾಜ್ಯ ಪ್ರಶಸ್ತಿಯನ್ನು ಕೊಡಲಾಗುವುದು. ಕಳೆದ ವರ್ಷ ಚಲನ ಚಿತ್ರ ಖ್ಯಾತ ನಟ ಶೋಭರಾಜ ಅವರಿಗೆ ನೀಡಲಾಗಿತ್ತು. ಈ ಸಲದ ರಾಷ್ಟ್ರೀಯ ಪ್ರಶಸ್ತಿಯನ್ನು ಕೆ.ಜಿ.ಎಫ್ ಖ್ಯಾತಿಯ ಚಲನ ಚಿತ್ರ ಸಂಗೀತ ನಿರ್ದೇಶಕರಾದ ರವಿ ಬಸ್ರೂರ ಅವರಿಗೆ, ರಾಜ್ಯ ಪ್ರಶಸ್ತಿಯನ್ನು ಖ್ಯಾತ ಚಲನ ಚಿತ್ರ ಸಾಹಿತಿ, ನಿರ್ದೇಶಕ ಕೊಪ್ಪಳ ಜಿಲ್ಲೆಯ ಕಿನ್ನಾಳರಾಜು ಅವರಿಗೆ ನೀಡಲಾಗುವುದು. ಮತ್ತು ಉತ್ತಮ ಕಲಾವಿದೆ ಪ್ರಶಸ್ತಿಯನ್ನು ಚಲನ ಚಿತ್ರ ಕಲಾವಿದೆ, ಕಿರುತೆರೆ ಕಲಾವಿದೆಯಾದ ಸುನಂದಾ ಕಲಬುರ್ಗಿ ಅವರಿಗೆ ಮತ್ತು ಈ ಜಾತ್ರಾ ಮಹೋತ್ಸವಕ್ಕೆ ಮಠದ ಭಕ್ತಾದಿಗಳು ಆಗಮಿಸ ಬೇಕು ಎಂದು ಪತ್ರಿಕಾ ಗೋಷ್ಟಿಯಲ್ಲಿ ತಿಳಿಸಿದರು. ಈ ಸಂದರ್ಭದಲ್ಲಿ ಸಂಗಣ್ಣ ತುರಡಗೇರಿ, ಸಂಗಮೇಶ ಹುದ್ದಾರ, ಡಾ, ಪ್ರಭು ಗಂಜಿಹಾಳ ಚಲನ ಚಿತ್ರೋತ್ಸವ ಕಮಿಟಿ, ಹುಲ್ಲಪ್ಪ ಹಳ್ಳೂರ, ಹನುಮಂತ ಬಂಡಿ ಗ್ರಾನೈಟ್ ಉದ್ದಿಮೆದಾರರು, ವೀರೂ ಐಹೊಳೆ (ಜೂ ಉಪೇಂದ್ರ), ಚಲನ ಚಿತ್ರ ಕಲಾವಿದ ಸಂಗನಗೌಡ ಕುರುಡಗಿ, ಜಯ ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾಧ್ಯಕ್ಷ ಮಹೇಶ ವಡ್ಡರ ಮತ್ತಿತರರು ಉಪಸ್ಥಿತರಿದ್ದರು.
*****
-ಡಾ.ಪ್ರಭು ಗಂಜಿಹಾಳ
ಮೊ.೯೪೪೮೭೭೫೩೪೬