ಅಮೇರಿಕದ ಅಕ್ಕ ಸಮ್ಮೇಳನಕ್ಕೆ “ಕನ್ನಡಿ” ಚಲನ ಚಿತ್ರ ಆಯ್ಕೆ.

ಬೆಂಗಳೂರು ಆ.23

ಬೆಳ್ಳಿದೀಪ ಪ್ರೊಡಕ್ಷನ್ಸ್ ಬೆಂಗಳೂರ ಅವರ “ಕನ್ನಡಿ” ಸಾಮಾಜಿಕ ಕಳಕಳಿಯ ಚಲನ ಚಿತ್ರ ಅಮೇರಿಕ ಕನ್ನಡ ಕೂಟಗಳ ಅಗರ ‘ಅಕ್ಕ’ ವಿಶ್ವ ಸಮ್ಮೇಳನ -೨೦೨೪ ರ ಚಿತ್ರೋತ್ಸವದಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಗಿದೆ. ಈ ಕುರಿತು ‘ಅಕ್ಕ’ ಸಮ್ಮೇಳನದ ಕಾರ್ಯದರ್ಶಿ ಮಾದೇಶ ಬಸವರಾಜು ತಿಳಿಸಿದ್ದು , ವೇಶ್ಯಾವಾಟಿಕೆಯ ಸುತ್ತ ಹೆಣೆದ ಕಥಾನಕ “ಕನ್ನಡಿ” ಚಿತ್ರ. ಏನು ಅರಿಯದೆ ವೇಶ್ಯಾವಾಟಿಕೆಗೆ ಹೋಗಿ ಆ ರಾತ್ರಿ ಆಗುವ ಅವಳ ಅನುಭವ. ಬಂದು ಹೋಗುವ ಒಂದಷ್ಟು ಗಿರಾಕಿ ಎಂಬ ಹೆಸರಿನ ಗಂಡಸರು.

ಆ ಎಲ್ಲವುಗಳ ಅರಿತ ನಾಯಕಿ ಪಲ್ಲವಿ ಇದೊಂದು ಪಾಪದ ಕೂಪ ಇರುವ ಕಷ್ಟಗಳಿಗೆ ಇದೊಂದೇ ನಿರ್ಣಾಯಕ ಹಾದಿಯಲ್ಲ, ಬದುಕಲು ನೂರಾರು ಆಯಾಮಗಳು ಇದ್ದಾವೆ, ಬದುಕಿ ತೋರಿಸುವ ಛಲ ದಿಂದ ಆ ರಾತ್ರಿಯ ಕರಾಳ ರಾತ್ರಿಯಿಂದ ಹೊರ ಬಂದು ಹೊಸ ದೊಂದು ಬದುಕಿಗೆ ಹೆಜ್ಜೆ ಇಟ್ಟ ಹೆಣ್ಣು ಮಗಳ ಕಥಾನಕ ಚಿತ್ರ ಕನ್ನಡಿ.

ಈಗಾಗಲೇ ಮೈಸೂರು ದಸರಾ ಮಹೋತ್ಸವ, ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲೂ ಆಯ್ಕೆಯಾಗಿ ಪ್ರದರ್ಶನ ಗೊಂಡು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದು ಇದೀಗ ಅಕ್ಕ ಸಮ್ಮೇಳನಲ್ಲೂ ಪ್ರದರ್ಶನಕ್ಕೆ ಆಯ್ಕೆಯಾಗಿದ್ದಕ್ಕೆ ನಿರ್ಮಾಪಕ ಬೆಳ್ಳಿಚುಕ್ಕಿ ವೀರೇಂದ್ರ ಖುಷಿಯನ್ನು ಚಿತ್ರ ತಂಡದೊಂದಿಗೆ ಹಂಚಿ ಕೊಂಡರು.

ತಾರಾ ಬಳಗದಲ್ಲಿ- ನಮಿತಾ ರಾವ್, ಶಶಾಂಕ್ ಸಿಂಹ, ಎ .ಗೋವಿಂದ, ನಟರಾಜ್ ಬೆಳ್ಳಿದೀಪ ,ಮೈಕೋಮಂಜು, ಅಲಕಾನಂದ, ರೇಣುಕಾ ಶಿಕಾರಿ, ಮೈಸೂರು ಮಂಜುಳಾ, ಕಾವೇರಿ ಶ್ರೀಧರ್, ಕವಿತಾ ಕಂಬಾರ್, ಎಸ್ ವಿ ರವಿಶಂಕರ್, ವಿನೋದ್ , ರಾಜೇಶ್ ಅಂಜನಾಪುರ ಇತರರಿದ್ದಾರೆ. ತಾಂತ್ರಿಕ ವರ್ಗದಲ್ಲಿ-ಛಾಯಾಗ್ರಹಣ ಆರ್ ಗಿರಿ, ಸಂಗೀತ ಶಿವ ಸತ್ಯ, ವಸ್ತ್ರ ವಿನ್ಯಾಸ ರೇಷ್ಮಾ ಬೆಳ್ಳಿದೀಪ, ಹಿನ್ನೆಲೆ ಗಾಯಕರು ಮಾನಸ ಹೊಳ್ಳ, ಆಕಾಂಕ್ಷ ಬಾದಾಮಿ, ಕಡಬಗೆರೆ ಮುನಿರಾಜು, ಸಂಕಲನ ಮುತ್ತುರಾಜ್, ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ, ಗೀತ ರಚನೆ ,ನಟನೆ , ನಿರ್ಮಾಣ ಬೆಳ್ಳಿಚುಕ್ಕಿ ವೀರೇಂದ್ರ ಅವರದಿದದ್ದು , ಶರಣ್ ಗದ್ವಾಲ್ ನಿರ್ದೇಶಿಸಿದ್ದಾರೆ.

*****

ವರದಿ:-ಡಾ.ಪ್ರಭು ಗಂಜಿಹಾಳ

ಮೊ : ೯೪೪೮೭೭೫೩೪೬

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button