ವಿಜಯನಗರ ಜಿಲ್ಲೆ ಚುನಾವಣೆ ಸಂದರ್ಭದಲ್ಲಿ ಆದರೂ ಸಹ ಸರಳವಾಗಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ 132ನೇ ಜಯಂತೋತ್ಸವ. ವನ್ನು ಜಿಲ್ಲಾಡಳಿತದ ನೇತೃತ್ವದಲ್ಲಿ ಆಚರಿಸಲಾಯಿತು
ಹೊಸಪೇಟೆ ಏ.14-

ಹೊಸಪೇಟೆ ನಗರದ ಅಂಬೇಡ್ಕರ್ ವೃತ್ತದಲ್ಲಿರುವ ನೂತನವಾಗಿ ನಿರ್ಮಾಣಗೊಂಡ ಕಂಚಿನ ಪುತ್ತಳಿಗೆ ಮಾಲಾರ್ಪಣೆಮಾಡಿ ಗೌರವಿಸಿ ಜಯಂತಿಯನ್ನು ಆಚರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಟಿ ವೆಂಕಟೇಶ್, ಸಿಇಓ ಸದಾಶಿವ ಪ್ರಭು, ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿ ಬಾಬು, ತಹಶೀಲ್ದಾರ್ ವಿಶ್ವವಿಜಿತ್ ಮೆಹ್ತಾ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ಮತ್ತು ದಲಿತ ಪರ ಸಂಘಟನೆಗಳ ಮುಖಂಡರು ಪದಾಧಿಕಾರಿಗಳು,

ಅಂಬೇಡ್ಕರ್ ಸಂಘ ಮುಖಂಡರು ಪದಾಧಿಕಾರಿಗಳು, ಬಾಬು ಜಗಜೀವನ್ ರಾಮ್ ಸಂಘದ ಮುಖಂಡರು ಪದಾಧಿಕಾರಿಗಳು,
ದಲಿತ ಹಕ್ಕುಗಳ ಸಮಿತಿ ಮುಖಂಡರು ಪದಾಧಿಕಾರಿಗಳು, ಪ್ರಗತಿಪರ ಚಿಂತಕರು, ಬುದ್ಧಿಜೀವಿಗಳು, ಮತ್ತು ಕವಿಗಳು, ಬಹುಜನ ಮುಖಂಡರು, ಮಂಗಳಮುಖಿಯರು, ಮಹಿಳೆಯರು, ಮಕ್ಕಳು, ಜಯಂತಿಯಲ್ಲಿ ಪಾಲ್ಗೊಂಡಿದ್ದರು.
ತಾಲೂಕ ವರದಿಗಾರರು:ಮಾಲತೇಶ್ ಶೆಟ್ಟರ್. ಹೊಸಪೇಟೆ