ನಾನಾ ಪಕ್ಷ ತೊರೆದು ಕಾಂಗ್ರೇಸ್ ಗೆ ಸೇರ್ಪಡೆ, ತಳ ಮಟ್ಟದಲ್ಲಿ ಆನೆ ಬಲ ಬಂದಂತಾಗಿದೆ – ಶಾಸಕ ಡಾ. ಎನ್.ಟಿ. ಶ್ರೀ ನಿವಾಸ್.
ಕೂಡ್ಲಿಗಿ ಮೇ.05

ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತ ಮತ್ತು ಕ್ಷೇತ್ರದ ಅಭಿವೃದ್ಧಿ ಮೆಚ್ಚಿ ವಿವಿಧ ಪಕ್ಷದ ಕೆಲ ಕಾರ್ಯಕರ್ತರು ಮತ್ತು ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಶಾಸಕರ ಡಾ ಎನ್ ಟಿ ಶ್ರೀನಿವಾಸ್ ಅವರ ಅಧ್ಯಕ್ಷತೆಯಲ್ಲಿ ನರಸಿಂಹನಗಿರಿ ಅವರು ತಮ್ಮ ನಿವಾಸದಲ್ಲಿ ವಿವಿಧ ಪಕ್ಷವನ್ನು ತೊರೆದು ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆಯಾದರು ಅಪ್ಪೇನಹಳ್ಳಿ ಗುತ್ತಿಗೆದಾರರಾದ ಮಾರುತಿ, ಸಿದ್ದೇಶಸ್ವಾಮಿ ಅವರ ನೇತೃತ್ವದಲ್ಲಿ ವಿವಿಧ ಕಾರ್ಯಕರ್ತರಾದ ಎಸ್. ಬಸವರಾಜ, ಎಮ್ ಸಿದ್ದಪ್ಪ, ಹೊನ್ನೂರುಸ್ವಾಮಿ, ಹೊನ್ನೂರಪ್ಪ, ಎಮ್ ಮಲ್ಲಿಕಾರ್ಜುನ, ಹೆಚ್.ಜಿ. ಮಲ್ಲಿಕಾರ್ಜುನ, ಹೆ.ಜಿ. ಪ್ರಕಾಶ, ಎ.ಜಿ. ಸಿದ್ದಬಸಪ್ಪ, ಭೀಮಾ, ಉದಯ ಕುಮಾರ್, ಮಲ್ಲಿಕಾರ್ಜುನ, ಎಮ್. ನಾಗರಾಜ, ಗಂಗಾಧರ. ಗಾಣಗಟ್ಟೆ ಯು ಎಂ ಮಹಾಂತೇಶ್, ಬಿ ಮಹಾಂತೇಶ್, ಪಿ ಬೋರಪ್ಪ ,ಅವರು ತಮ್ಮ ಅನ್ಯ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಈ ವೇಳೆ ಶಾಸಕ ಡಾ ಎನ್.ಟಿ ಶ್ರೀನಿವಾಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು ದಿನೇ ದಿನೇ ಅನ್ಯ ಪಕ್ಷ ತೊರೆದು ನಮ್ಮ ಕರ್ನಾಟಕ ಘನ ಸರ್ಕಾರದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಮುನ್ನಡೆಸುವ ಜನಪರ – ಪ್ರಗತಿ ಪರ ಸರ್ಕಾರದ ಅಭಿವೃದ್ಧಿ ಕೆಲಸ ಕಾರ್ಯಗಳ ಜನ ಪರ ಯೋಜನೆಗಳನ್ನು ಕಂಡು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವುದು ಗ್ರಾಮೀಣ ಪ್ರದೇಶಗಳಲ್ಲಿ ತಳಮಟ್ಟದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಆನೇ ಬಲ ಬಂದಂತೆ ಆಗಿದೆ ಎಂದರು. ಹೀಗಾಗಿ ಅಖಂಡ ಬಳ್ಳಾರಿ ಜಿಲ್ಲೆಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಈ .ತುಕಾರಾಂ ಅವರ ಗೆಲುವುಗಾಗಿ ಕೈ ಜೋಡಿಸಬೇಕು ಎಂದೂ ಮನವಿ ಮಾಡಿಕೊಂಡರು. ಮುಂದಿನ ದಿನಗಳಲ್ಲಿ ತಮ್ಮನ್ನು ಗೌರವಿಸುವ ಮೂಲಕ ತಮ್ಮ ಪ್ರದೇಶ ಮತ್ತು ಸಮುದಾಯವನ್ನು ಗಮನದಲ್ಲಿಟ್ಟುಕೊಂಡು ಯಾವುದೇ ಬೇಧ ಭಾವ ಇಲ್ಲದೇ ಸರ್ವರ ಅಭಿವೃದ್ಧಿಗಾಗಿ ಒತ್ತುಕೊಡಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮಾರುತಿ ಕಂಟ್ರಾಕ್ಟ್ ಸಿದ್ದೇಶ್ ಸ್ವಾಮಿ, ಹಾಲಸಾಗರ ಮಾರೇಶ್, ಗಾಣಗಟ್ಟೆ ರಮೇಶ, ಮಧು ಕುಮಾರ್, ಯು.ಎಮ್. ಮಹಾಂತೇಶ, ಎನ್. ಮಹಾಂತೇಶ, ಪಿ ಮಹೇಶ್ವರಪ್ಪ, ಪಿ ಪರಮೇಶ್ ಉಪಸ್ಥಿತರಿದ್ದರು.
ಹೋಬಳಿ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್.ವೀರೇಶ್. ಕಾನಾ ಹೊಸಹಳ್ಳಿ.