ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಅವರ ಪತ್ರಿಕಾಗೋಷ್ಠಿ….!
ತರೀಕೆರೆ:
ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕು ಕಾಂಗ್ರೆಸ್ ಮುಖಂಡರು “ರುಪ್ಸಾ ಅಧ್ಯಕ್ಷರಾದ ಹಾಗೂ ತರೀಕೆರೆ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿಯು ಆದ, ಲೋಕೇಶ್ ತಾಳಿಕಟ್ಟೆ ರವರು ಶಿಕ್ಷಣ ಇಲಾಖೆಯಲ್ಲಿಯ ಮಹಾ ಭ್ರಷ್ಟಾಚಾರ ಬಯಲಿಗೆಳದ ಕಾರಣಕ್ಕೆ, ವಿಧಾನಸೌಧ ದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಈ ಸಂಬಂಧ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು, ಆದೇಶವನ್ನು ತೆಗೆದುಕೊಂಡು ವಿಧಾನಸೌಧ ಪೊಲೀಸ್ ಸ್ಟೇಷನ್ ಗೆ ತರುವ ಸಂದರ್ಭವನ್ನು ಬಳಸಿಕೊಂಡ ಕೆಲ ಕಿಡಿಗೇಡಿಗಳು ಪೋಲಿಸ್ನವರು ಬಂಧಿಸಿದ್ದಾರೆ ಎಂದು ಸುಳ್ಳು ವದಂತಿಯನ್ನು ಹಬ್ಬಿಸಿದ್ದಾರೆ. ಲೋಕೇಶ್ ತಾಳಿಕಟ್ಟೆ ರವರು ಕಾನೂನು ಬದ್ಧವಾಗಿ ಸರ್ಕಾರದ ಅನುಮತಿ ಪಡೆದು ಕಳೆದ 13 ವರ್ಷಗಳಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಿ, ತಾಳಿಕಟ್ಟೆ ಗ್ರಾಮವು ಸುತ್ತ ಮುತ್ತಲಿನ ಜಿಲ್ಲೆಗಳಿಗೆ ಮಾದರಿಯಾಗಿರುವುದು ವಾಸ್ತವ ಸತ್ಯ ಈ ಶಾಲೆಗೆ ಕೆಟ್ಟ ಹೆಸರು ತರಲು ಜವಾಬ್ದಾರಿಯುತ ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳು ಹಾಗೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ಸೇರಿಕೊಂಡಂತೆ ಅಪಪ್ರಚಾರ ಮಾಡಿರುತ್ತಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು ಮತ್ತು ಖಂಡಿಸಿದರು.
“ದಿನಾಂಕ 01/12/2023 ರ ಬಧವಾರ, ಬೆಳಿಗ್ಗೆ 10-00 ಘಂಟೆಗೆ “ರುಪ್ಸಾ ಅಧ್ಯಕ್ಷನಾದ” ನಾನು ನಿರೀಕ್ಷಣಾ ಜಾಮೀನು ಆದೇಶದೊಂದಿಗೆ ವಿಧಾನ ಸೌಧದ ಪೋಲೀಸ್ ಠಾಣೆಗೆ ದೂರು ಸಲ್ಲಿಸಲು ಹೋಗಿದ್ದು, ಈ ಸಂದರ್ಭವನ್ನು ಬಳಸಿಕೊಂಡ ಕೆಲ ಕಿಡಿಗೇಡಿಗಳು ನನ್ನನ್ನು ಬಂಧಿಸಲಾಗಿದೆ ಎಂಬ ಸುಳ್ಳು ವದಂತಿಯನ್ನು ಅಬ್ಬಿಸಿದ್ದಾರೆ. ಈ ಮೂಲಕ ನನ್ನನ್ನು ತೇಜೋವಧೆ ಮಾಡಲು ಪ್ರಯತ್ನಿಸುವುದು ಹಾಸ್ಯಾಸ್ಪದ. ಭ್ರಷ್ಟಾಚಾರದ ವಿರುದ್ಧ ನನ್ನ ಹೋರಾಟವನ್ನು ಹತ್ತಿಕ್ಕಲು ಯಾರಿಂದಲೂ ಸಾದ್ಯವಿಲ್ಲ.
ಕಾನೂನು ಬದ್ಧವಾಗಿ ಸರ್ಕಾರದ ಅನುಮತಿ ಪಡೆದು ಕಳೆದ 13 ವರ್ಷಗಳಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಿ ತಾಳಿಕಟ್ಟೆಯ ಸುತ್ತಮುತ್ತಲಿನ ಜಿಲ್ಲೆಗಳಿಗೆ ಮಾದರಿಯಾಗಿರುವುದು ವಾಸ್ತವ ಸತ್ಯ ನಮ್ಮ ಶಾಲೆಗೆ ಕೆಟ್ಟ ಹೆಸರು ತರಲು ಜವಾಬ್ದಾರಿಯುತ ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳು ಹಾಗೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ಸೇರಿಕೊಂಡಂತೆ ಇವರುಗಳು ಪ್ರಯತ್ನಿಸಿದ್ದು ನನ್ನ ಮೇಲಿರುವ ಇವರ ವಿಕೃತ ಮನಸ್ಥಿತಿಯನ್ನು ತೋರಿಸುತ್ತದೆ. ಇವರುಗಳ ಈ ವ್ಯರ್ಥ ಪ್ರಯತ್ನ ಯಾವುದೇ ಕಾರಣದಿಂದಲೂ ಯಶಸ್ವಿಯಾಯುವುದಿಲ್ಲ. ಈ ರೀತಿಯ ಅಪಪ್ರಚಾರ ಮಾಡಿರುವ ಇಲಾಖೆಯ ಮುಖ್ಯಸ್ಥರ ವಿರುದ್ಧ ಈಗಾಗಲೇ ಕಾನೂನು ರಿತ್ಯಾ ಕ್ರಮ ಕೈಗೊಳ್ಳುತಿದ್ದೇನೆ.” ಈ ರೀತಿಯಾಗಿ ಪತ್ರಿಕಾ ವರದಿಗಾರ ಮುಂದೆ ಲೋಕೇಶ್ ತಾಳಿಕಟ್ಟೆಯವರು ತಿಳಿಸಿದರು.