ತುಮಕೂರು : ಏಷ್ಯಾದ ಅತಿ ದೊಡ್ಡ ಹೆಲಿಕ್ಯಾಪ್ಟರ್ ಉತ್ಪಾದನಾ ಕಾರ್ಖಾನೆ….!

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ನ ಹೆಲಿಕಾಪ್ಟರ್ ಫ್ಯಾಕ್ಟರಿ - ಇದನ್ನು 'ಗ್ರೀನ್‌ಫೀಲ್ಡ್ ಹೆಲಿಕಾಪ್ಟರ್ ಫ್ಯಾಕ್ಟರಿ' ಎಂದು ಕರೆಯಲಾಗುತ್ತದೆ. ಭಾರತದ ಅತಿದೊಡ್ಡ ಹೆಲಿಕಾಪ್ಟರ್ ಉತ್ಪಾದನಾ ತಾಣವಾಗಲಿದೆ. ದೇಶವು ಹೆಲಿಕಾಪ್ಟರ್​ಗಳನ್ನು ಆಮದು ಮಾಡಿಕೊಳ್ಳದೇ ದೇಶಕ್ಕೆ ಅಗತ್ಯವಾದ ಹೆಲಿಕಾಪ್ಟರ್‌ಗಳನ್ನು ತಯಾರಿಸಲು ಅನುವು ಮಾಡಿಕೊಡುತ್ತದೆ.

ತುಮಕೂರು :

615 ಎಕರೆಯಲ್ಲಿ ಹೆಲಿಕಾಪ್ಟರ್ ಕಾರ್ಖಾನೆಯನ್ನು ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ನಿರ್ಮಾಣಗೊಂಡಿದೆ. ಮೊದಲ ಹಂತದಲ್ಲಿ ಈ ಕಾರ್ಖಾನೆಯು ಲೈಟ್ ಯುಟಿಲಿಟಿ ಹೆಲಿಕಾಪ್ಟರ್‌ಗಳನ್ನು (LUHs) ಉತ್ಪಾದಿಸಲಿದೆ. ಇದು ಸ್ಥಳೀಯವಾಗಿ ವಿನ್ಯಾಸಗೊಳಿಸಿದ ಮತ್ತು ಅಭಿವೃದ್ಧಿಪಡಿಸಿದ 3-ಟನ್ ವರ್ಗದ, ಏಕ-ಎಂಜಿನ್ ವಿವಿಧೋದ್ದೇಶದ ಹೆಲಿಕಾಪ್ಟರ್ ಆಗಿರಲಿದೆ.ಹೆಲಿಕಾಪ್ಟರ್ ಘಟಕ, ಹೆಲಿಪ್ಯಾಡ್, ಫ್ಲೈಟ್ ಹ್ಯಾಂಗಾರ್, ಅಡ್ಮಿನ್ ಕಟ್ಟಡ ಸೇರಿ ಕೆಲವಾರು ಸೌಲಭ್ಯಗಳನ್ನು ಒಳಗೊಂಡಿದೆ.ಇಂದಿನಿಂದ ಮೊದಲ ಹಂತದ ಕಾರ್ಯಾಚರಣೆಗಳು ನಡೆಯುತ್ತವೆ ಎನ್ನಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಜಿಲ್ಲೆಯ ಗುಬ್ಬಿ ತಾಲೂಕಿನ ಬಿದರೆಹಳ್ಳ ಕಾವಲ್ ಗ್ರಾಮದ ಬಳಿಯ ಏಷ್ಯಾದಲ್ಲೇ ಅತಿ ದೊಡ್ಡ ಹೆಚ್​ಎಎಲ್​ನ (HAL) ಹೆಲಿಕಾಪ್ಟರ್​ ಉತ್ಪಾದನಾ ಘಟಕವನ್ನು ​ಉದ್ಘಾಟಿಸಿದ್ದಾರೆ. 

2016ರಲ್ಲಿ ಪ್ರಧಾನಿಯವರೇ ಈ ಘಟಕ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ್ದರು. 615 ಎಕರೆ ಜಾಗದಲ್ಲಿ ನಿರ್ಮಾಣವಾಗಿರುವ ಈ ಹೆಲಿಕಾಪ್ಟರ್ ಘಟಕ, ಇಂದಿನಿಂದ ಮೊದಲ ಹಂತದ ಕಾರ್ಯಾಚರಣೆಗಳು ನಡೆಯುತ್ತವೆ ಎನ್ನಲಾಗಿದೆ.

ಹೆಚ್​ಎಎಲ್(HAL) ಬಳಿ ಭಾರತೀಯ ಮಿಲಿಟರಿ ಯುದ್ಧ ಹೆಲಿಕಾಪ್ಟರ್ ನಿರ್ಮಿಸುವ ಬಹಳಷ್ಟು ಯೋಜನೆಗಳಿವೆ. ಬೆಂಗಳೂರಿನಲ್ಲಿರುವ ಹೆಚ್​ಎಲ್​ನ (HAL) ಮುಖ್ಯ ತಯಾರಕಾ ಸಂಕೀರ್ಣ ಸಾಕಾಗದೇ ಇರುವುದರಿಂದ ತುಮಕೂರಿನಲ್ಲಿ ಹೊಸದಾದ ಮತ್ತೊಂದು ಬೃಹತ್ ಘಟಕ ನಿರ್ಮಿಸಲಾಗಿದೆ.

ಮುಂದಿನ 20 ವರ್ಷದ ಕಾಲಾವಧಿಯಲ್ಲಿ 3-15 ಟನ್ ಶ್ರೇಣಿಯ 1 ಸಾವಿರಕ್ಕೂ ಹೆಚ್ಚು ಹೆಲಿಕಾಪ್ಟರುಗಳು ಹೆಚ್​ಎಎಲ್ ತಯಾರಿಸಲಿದೆ. ಇದರ ಒಟ್ಟು ಮೌಲ್ಯ 4 ಲಕ್ಷ ಕೋಟಿ ರೂಗೂ ಹೆಚ್ಚು ಎನ್ನಲಾಗಿದೆ. ಈಗಾಗಲೇ ಒಂದು ಹೆಲ್​ಯುಎಚ್ ಹೆಲಿಕಾಪ್ಟರ್ ತಯಾರಿಸಲಾಗಿದ್ದು ಅದರ ಪರೀಕ್ಷೆಯೂ ಯಶಸ್ವಿಯಾಗಿ ಉದ್ಘಾಟನೆಗೆ ಅಣಿಯಾಗಿದೆ. ಕಾರ್ಖಾನೆಯಲ್ಲಿ 6,000ಕ್ಕೂ ಹೆಚ್ಚು ಜನರಿಗೆ ಉದ್ಯೋಗದ ನಿರೀಕ್ಷೆ ಇದೆ.

ಮುಂದಿನ 20 ವರ್ಷದಲ್ಲಿ 3-15 ಟನ್ ಸಾಮರ್ಥ್ಯದ ಹೆಲಿಕಾಪ್ಟರ್ ಉತ್ಪಾದನೆ

ತುಮಕೂರಿನ ಈ ಹೆಲಿಕಾಪ್ಟರ್ ಫ್ಯಾಕ್ಟರಿಯಲ್ಲಿ ಮೊದಲಿಗೆ ಲೈಟ್ ಯುಟಿಲಿಟಿ ಹೆಲಿಕಾಪ್ಟರುಗಳನ್ನು (LUH Copters) ತಯಾರಿಸಲಾಗುತ್ತದೆ. ನಂತರ ಲೈಟ್ ಕಾಂಬ್ಯಾಟ್ ಹೆಲಿಕಾಪ್ಟರುಗಳು (LCH) ಮತ್ತು ಮಲ್ಟಿರೋಲ್ ಹೆಲಿಕಾಪ್ಟರುಗಳನ್ನು (IMRH) ತಯಾರಿಸುವ ಯೋಜನೆ ಇದೆ.

ಭಾರತೀಯ ವಾಯಪಡೆ ಬಳಿ ಈಗ ಚೀತಾ ಮತ್ತು ಚೇತಕ್ ಎಂಬ ಎರಡು ಮಾದರಿಯ ಹೆಲಿಕಾಪ್ಟರುಗಳಿವೆ. ಆದರೆ, ಇವುಗಳು ಹಳೆಯದಾಗಿದ್ದು, ಹೊಸ ತಂತ್ರಜ್ಞಾನದೊಂದಿಗೆ ತಯಾರಿಸಲಾಗಿರುವ ಲೈಟ್ ಯುಟಿಲಿಟಿ ಹೆಲಿಕಾಪ್ಟರುಗಳು ಈ ಚೀತಾ ಮತ್ತು ಚೇತಕ್ ಸ್ಥಾನಗಳನ್ನು ತುಂಬಲಿವೆ. 

ಒಮ್ಮೆ ಎಲ್​ಯುಎಚ್ ಕಾಪ್ಟರುಗಳು ತಕ್ಕ ಪ್ರಮಾಣದಲ್ಲಿ ನಿರ್ಮಾಣಗೊಂಡು ನಿಯೋಜನೆಗೊಂಡ ಬಳಿಕ ಚೀತಾ ಮತ್ತು ಚೇತಕ್ ಹೆಲಿಕಾಪ್ಟರುಗಳು ಕಾರ್ಯಾಚರಣೆ ನಿಲ್ಲಿಸಲಿವೆ. ಈ ಹಳೆಯ ಹೆಲಿಕಾಪ್ಟರುಗಳನ್ನು ಹೆಚ್​​ಎಎಲ್ ಸಂಸ್ಥೆಯೇ ನಿರ್ಮಿಸಿದೆ.

ತುಮಕೂರಿನ ಈ ಹೊಸ ಫ್ಯಾಕ್ಟರಿಯಲ್ಲಿ ಆರಂಭದಲ್ಲಿ ವರ್ಷಕ್ಕೆ 30 ಹೆಲಿಕಾಪ್ಟರ್​ಗಳನ್ನು ತಯಾರಿಸುವ ಉದ್ದೇಶ ಇದೆ. ನಂತರ ಹಂತ ಹಂತವಾಗಿ ಈ ಸಂಖ್ಯೆಯನ್ನು 90ಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ರಕ್ಷಣಾ ಇಲಾಖೆ ಹೇಳಿದೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button