ಧಾರವಾಡ ವಿವಿಯಲ್ಲಿ ಅಂತಿಮ ವರ್ಷದ ವಿದ್ಯಾರ್ಥಿ ನಗ್ನವಾಗಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ….!
ಧಾರವಾಡ:
ಧಾರವಾಡ ಕೃಷಿ ವಿವಿ ವಿದ್ಯಾರ್ಥಿಯೋರ್ವ ನಗ್ನವಾಗಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ.
ಕೃಷಿ ವಿವಿ ಅಂತಿಮ ವರ್ಷದ ವಿದ್ಯಾರ್ಥಿ ರೋಹಿತ್ C.P ಎಂಬ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ನಿನ್ನೆ ಮಧ್ಯಾಹ್ನ ಹಾಸ್ಟೆಲ್ ಮೆಸ್‌ನಲ್ಲಿ ಊಟ ಮಾಡಿದ ಈತ, ನಂತರ ಹಾಸ್ಟೆಲ್ ರೂಂಗೆ ತೆರಳಿದ್ದಾನೆ. ಅದರ ನಂತರ ಆತನ ಗೆಳೆಯರು ಹಾಗೂ ಕುಟುಂಬದವರಯ ಎಷ್ಟೇ ಕರೆ ಮಾಡಿದರೂ ಆತ ಕರೆ ಸ್ವೀಕರಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಓರ್ವ ವಿದ್ಯಾರ್ಥಿ ಕಿಟಕಿಯಿಂದ ನೋಡಿದಾಗ ರೋಹಿತ್ ಹಾಸ್ಟೆಲ್ ರೂಂನಲ್ಲಿ ನೇಣು ಹಾಕಿಕೊಂಡ ವಿಷಯ ಗೊತ್ತಾಗಿದೆ.
ಹುಡುಗ ತಕ್ಷಣ ಹಾಸ್ಟೆಲ್ ವಾರ್ಡನ್ ಗೆ ತಿಳಿಸಿದ್ದಾನೆ , ಕೃಷಿ ವಿವಿ ಆಡಳಿತ ಮಂಡಳಿ ಪೊಲೀಸರಿಗೆ ಹಾಗೂ ವಿದ್ಯಾರ್ಥಿ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಇನ್ನೂ ವಿದ್ಯಾರ್ಥಿ ಪೋಷಕರು ತಡ ರಾತ್ರಿ ವಿಜಯನಗರ ಜಿಲ್ಲೆಯ ಕೊಟ್ಟೂರಿನಿಂದ ಧಾರವಾಡಕ್ಕೆ ಆಗಮಿಸಿದ ನಂತರ ಶವ ಕೆಳಗೆ ಇಳಿಸಿ ಆಸ್ಪತ್ರೆಗೆ ಕಳಿಸಲಾಯಿತು.
ವಿದ್ಯಾರ್ಥಿ ನಗ್ನವಾಗಿ ಏಕೆ ನೇಣು ಹಾಕಿಕೊಂಡನು ಎಂದು ಪೊಲೀಸರು ಅನುಮಾನಾಸ್ಪದ ತನಿಖೆ ಕೈಗೊಂಡಿದ್ದಾರೆ. ಅಲ್ಲದೇ ವಿದ್ಯಾರ್ಥಿಯ ಮೊಬೈಲ್ ಅನ್ನು ಕೂಡ ವಶಕ್ಕೆ ಪಡದಿದ್ದಾರೆ.
ಸದ್ಯ ಉಪನಗರ ಠಾಣೆಯಲ್ಲಿ ರೋಹಿತ್ ಪೋಷಕರು ಕೂಡಾ ದೂರು ನೀಡಿದ ಮೇಲೆ ಪ್ರಕರಣ ದಾಖಲಾಗಲಿದ್ದು, ವಿದ್ಯಾರ್ಥಿ ಶವ ಪೋಷಕರು ತಮ್ಮ ಊರಿಗೆ ತೆಗೆದುಕೊಂಡು ಹೋಗಲಿದ್ದಾರೆ.