ಕೂಡಲ ಸಂಗಮದಲ್ಲಿ ಸಾಮೂಹಿಕ ಇಷ್ಟಲಿಂಗ ಕಾರ್ಯಕ್ರಮ.
ಕೂಡಲ ಸಂಗಮ ಸ.01

ಲಿಂಗಾಯತ ಪಂಚಮಸಾಲಿ ಮಹಾಪೀಠ ಧರ್ಮಕ್ಷೇತ್ರ ಕೂಡಲ ಸಂಗಮದಲ್ಲಿ ಬಸವ ಪಂಚಮಿ ನಿಮಿತ್ಯ ಸೆ. ೧ ರಂದು ಸಾಮೂಹಿಕ ಇಷ್ಟಲಿಂಗ ಪೂಜೆ ಕಾರ್ಯಕ್ರಮವನ್ನು ಪ್ರಥಮ ಜಗದ್ಗುರು ಪಾದಯಾತ್ರೆಯ ಪ್ರವರ್ತಕ ಬಸವಜಯ ಮೃತ್ಯುಂಜಯ ಮಹಾ ಸ್ವಾಮಿಗಳು ಸಾಮೂಹಿಕ ಇಷ್ಟಲಿಂಗ ಪೂಜೆ ನೆರವೇರಿಸಿದರು.ವಿವಿಧ ಭಾಗಗಳಿಂದ ಆಗಮಿಸಿದ ನೂರಾರಕ್ಕು ಹೆಚ್ಚು ಭಕ್ತಾದಿಗಳ ಕೈಗೆ ರುದ್ರಾಕ್ಷಿ ಕಟ್ಟುವುದರ ಮೂಲಕ ಮತ್ತು ಇಷ್ಟಲಿಂಗ ಧಾರಣೆ ಮಾಡಿ ಇಷ್ಟಲಿಂಗ ಪೂಜೆ ಆಚರಿಸುವ ವಿಧಾನಗಳನ್ನು ಭಕ್ತರೊಂದಿಗೆ ಪ್ರಾತ್ಯಕ್ಷಿ ಮಾಡಿ ಆಶಿರ್ವದಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರತಾಪ್.ವಾಯ್.ಕಿಳ್ಳಿ. ಇಲಕಲ್ಲ