ನರೇಗಲ್ಲಿನ 4 ನೇ. ವಾರ್ಡಿನ ಹೊಸಪೇಟೆ ಓಣಿಯ ಹುಚ್ಚಿರಪ್ಪಜ್ಜನ – ಭಕ್ತರ ನಿಸ್ವಾರ್ಥ ಸೇವೆ.
ಕೋಡಿಕೊಪ್ಪ ಫೆ.04

ಗಜೇಂದ್ರಗಡ ತಾಲೂಕಿನ ನರೇಗಲ್ಲಿನ ಕೋಡಿಕೊಪ್ಪದ ಯಾವುದು ಹೌದು ಅದು ಅಲ್ಲ, ಯಾವುದು ಅಲ್ಲ ಅದು ಹೌದು ಎಂಬ ಸರ್ವಕಾಲಿಕ ಸತ್ಯ ಸಂದೇಶ ನೀಡಿದ ಹಠಯೋಗಿ ಶ್ರೀ ಹುಚ್ಚಿರಪ್ಪಜ್ಜನ ಪುಣ್ಯಾರಾಧನೆ ಶತಮಾನೋತ್ಸವದ ಅಂಗವಾಗಿ ನರೇಗಲ್ಲಿನ 4 ನೇ. ವಾರ್ಡಿನ ಹಠಯೋಗಿ ಶ್ರೀ ಹುಚ್ಚಿರಪ್ಪಜ್ಜನ ಭಕ್ತರು ತಮ್ಮ ಭಕ್ತಿಯ ಪರಾಕಾಷ್ಟೆಯನ್ನು ವಿನೂತನವಾಗಿ ಅಜ್ಜನ ಪಾದಕ್ಕೆ ತಮ್ಮ ಸೇವೆಯನ್ನು ಅರ್ಪಣೆ ಮಾಡಿದ್ದಾರೆ. ಆ ನಿಸ್ವಾರ್ಥ ಭಕ್ತಿ ಏನು ಅಂದರೆ ನರೇಗಲ್ಲಿನ 4 ನೇ. ವಾರ್ಡಿನ ಹೊಸಪೇಟೆ ಓಣಿಯ ಮಳಿಯಪ್ಪನ ಕಟ್ಟಿಯ ದೇವಸ್ಥಾನದ ಹತ್ತಿರ ಎಲ್ಲಾ ಭಕ್ತರು ಸೇರಿ 5 ಕ್ವಿಂಟಲ್ ಶೆಂಗಾ ಹೋಳಿಗೆಯನ್ನು ಎಲ್ಲಾ ಮಹಿಳೆಯರು ತಾವೇ ಸ್ವತಃ ತಮ್ಮ ಕೈಯಾರೆ ಮಾಡುತ್ತಿದ್ದಾರೆ ಇವರ ಈ ಸೇವೆಗೆ ಆ ಕೋಡಿಕೊಪ್ಪದ ಹಠಯೋಗಿ ಶ್ರೀ ಹುಚ್ಚಿರಪ್ಪಜ್ಜ ನವರು ನರೇಗಲ್ಲಿನ ಎಲ್ಲಾ ಭಕ್ತರ ಬಾಳಿಗೆ ಬೆಳಕು ನೀಡಲಿ . ನಿತ್ಯವೂ ಬಾಳಿಗೆ ಬೆಳಕು ಕೊಡಲಿ ಹಾಗೂ ಶ್ರೀ ವೀರಪ್ಪಜ್ಜನ ವರಿಂದ ನರೇಗಲ್ಲ ಮತ್ತು ಕೋಡಿಕೊಪ್ಪಕ್ಕೆ ಈ ನಾಡಿನಲ್ಲಿ ದೊಡ್ಡ ಹೆಸರಿದೆ. ವೀರಪ್ಪಜ್ಜ ನವರ ಜ್ಞಾನ ಪ್ರಸಾದ, ಅನ್ನ ಪ್ರಸಾದ ಸ್ವೀಕರಿಸಿ ನೀವುಗಳೆಲ್ಲರೂ ಪುಣ್ಯವಂತರಾಗಿರಿ ಎಂದು ನಮ್ಮ ರಾಷ್ಟ್ರಕ್ರಾಂತಿ ನ್ಯೂಸ್ ಚಾನೆಲ್ ತಂಡದ ಪರವಾಗಿ ಆಶಿಸುತ್ತೆವೆ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ.ರೋಣ.ಗದಗ