ರೈತರ ಅಭಿವೃದ್ಧಿ ಶ್ರೇಯಸ್ಸಿಗೋಸ್ಕರ ಬಿಜೆಪಿ ಸರ್ಕಾರ ಕೆಲಸ ಮಾಡಿದೆ…….
ತರೀಕೆರೆ(ಮಾ, 5 ) :
ಬಿ.ಎಸ್ ಯಡಿಯೂರಪ್ಪನವರು 40 ವರ್ಷಗಳ ಹೋರಾಟ ಇಂದು ಲಕ್ಷಾಂತರ ಜನ ಕಾರ್ಯಕರ್ತರಿಂದ ಬಿಜೆಪಿ ಸರ್ಕಾರ ತರಲು ಸಾಧ್ಯವಾಯಿತು. ಎಂದು ಬಿ ವೈ ವಿಜೇಂದ್ರರವರು ತರೀಕೆರೆ ಬಯಲು ರಂಗ ಮಂದಿರದಲ್ಲಿ ಜಿಲ್ಲಾ ರೈತ ಮೋರ್ಚಾದಿಂದ ಏರ್ಪಡಿಸಿದ್ದ ರೈತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಹೇಳಿದರು.
ಬಿ.ಎಸ್ ಯಡಿಯೂರಪ್ಪ ವಿರೋಧ ಪಕ್ಷದ ನಾಯಕರಾಗಿದ್ದಾಗ, ಉಪಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯರವರು ಯಡಿಯೂರಪ್ಪನವರು ಬಿಜೆಪಿ ಸರ್ಕಾರ ರಚನೆ ಮಾಡುವ ಹಗಲು ಕನಸು ಕಾಣುತ್ತಿದ್ದಾರೆ ಎಂದು ಹೇಳಿದ್ದರು, ಆದರೆ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿ ರೈತರಿಗಾಗಿ ವಿಶೇಷವಾದ ಬಜೆಟ್ಟನ್ನು ಮಂಡಿಸಿದ್ದರು, ಇದು ದೇಶದಲ್ಲಿಯೇ ಮೊದಲು ಎಂದು ಹೇಳಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು 2014ರಿಂದ ಇಂದಿನವರೆಗೂ ಒಂದು ದಿನವೂ ಸಹ ರಜಾ ತೆಗೆದುಕೊಳ್ಳದೆ ದೇಶಕ್ಕಾಗಿ ಶ್ರಮಿಸುತ್ತಿದ್ದಾರೆ.ಬಿಜೆಪಿ ಸರ್ಕಾರ ರೈತರಿಗೆ ಬಡ್ಡಿ ರಹಿತ ಸಾಲ ಕೊಟ್ಟಿದೆ ರೈತರಿಗೆ ಕಿಸಾನ್ ಯೋಜನೆ, ಭೀಮಾ ಫಸಲ್ ಯೋಜನೆ, ಜಾರಿಗೆ ತಂದಿದೆ ರೈತರಿಗೆ ರಸ ಗೊಬ್ಬರಗಳಿಗೆ ಸಬ್ಸಿಡಿ ಕೇಂದ್ರ ಸರ್ಕಾರ ಕೊಟ್ಟಿದೆ. 1500 ಕೋಟಿಗೂ ಹೆಚ್ಚು ಅನುದಾನ ನೀಡಿ ನೀರಾವರಿ ಯೋಜನೆಯನ್ನು ಜಾರಿಗೆ ತಂದಿದ್ದಾರೆ, ರೈತರ ಅಭಿವೃದ್ಧಿಗೋಸ್ಕರ ಬಿಜೆಪಿ ಸರ್ಕಾರ ಕೆಲಸ ಮಾಡಿದೆ.ಎಲ್ಲಾ ಮೋರ್ಚಾಗಳು ಸಮಾವೇಶದ ಮೂಲಕ ಮತ್ತೊಮ್ಮೆ ಸರ್ಕಾರ ತರಲು ಮನೆಮನೆಗೂ ಸರ್ಕಾರದ ಸಾಧನೆ ಬಗ್ಗೆ ತಿಳಿಸಬೇಕು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.
ಶಾಸಕರಾದ ಡಿ.ಎಸ್ ಸುರೇಶರವರು ಪ್ರಾಸ್ತಾವಿಕವಾಗಿ ಮಾತನಾಡಿ ರೈತ ದೇಶದ ಬೆನ್ನೆಲುಬು 2008ರಲ್ಲಿ ಯಡಿಯೂರಪ್ಪ ಸಿಎಂ ಆದಾಗ ಕೇಂದ್ರದಲ್ಲಿ ನರೇಂದ್ರ ಮೋದಿಯವರು ಪ್ರಧಾನಮಂತ್ರಿಯಾಗಿ ರೈತರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. 2008ರಲ್ಲಿ ಉಬ್ರಾಣಿ ಏತ ನೀರಾವರಿ ಯೋಜನೆಗೆ ಚಾಲನೆ ನೀಡಿದರು.2019 ರಲ್ಲಿ ಭದ್ರಾ ಮೇಲದಂಡೆ ಯೋಜನೆ ಜಾರಿಗೆ ತಂದರು. ಯಾವ ಸರ್ಕಾರವು ರೈತರಿಗಾಗಿ ಕೆರೆಗಳನ್ನು ತುಂಬಿಸುವ ಯೋಜನೆ ಮಾಡಲಿಲ್ಲ,ಬಿಜೆಪಿ ಸರ್ಕಾರ ಮಾಡಿದೆ. 625 ಕೋಟಿ ರೂ.ಗಳ ಅನುದಾನದಲ್ಲಿ ಜಲಜೀವನ್ ಮಿಷನ್ ಯೋಜನೆಯಿಂದ ಮೂರು ತಾಲೂಕುಗಳಿಗೆ ಕುಡಿಯುವ ನೀರಿನ ಯೋಜನೆ ಮಾಡಲಾಗಿದೆ. ಕ್ಷೇತ್ರಾದ್ಯಂತ ಚೆಕ್ ಡ್ಯಾಮ್ ಗಳು, ರಸ್ತೆಗಳು, ಸಮುದಾಯ ಭವನಗಳು, ನಿರ್ಮಾಣ ಮಾಡಲಾಗಿದೆ. ಮತ್ತು ರಾಗಿ, ಭತ್ತ,ಕೊಬ್ಬರಿಗೆ ಬೆಂಬಲ ಬೆಲೆ ಕೊಟ್ಟಿದೆ ಸರ್ಕಾರ, ಆದರೆ ಎಲ್ಲಿಂದಲೋ ದುಡ್ಡು ಮಾಡಿಕೊಂಡು ಬಂದವರು ಇಲ್ಲಿ ಬಂದು ನಮ್ಮ ಸರ್ಕಾರ ಏನು ಮಾಡಿಲ್ಲ ಎಂದು ಹೇಳುತ್ತಾರೆ, ಅವರಿಗೆ ಲಿಸ್ಟ್ ಕೊಡುತ್ತೇನೆ ಪ್ರತಿ ಗ್ರಾಮಗಳಿಗೆ ಭೇಟಿ ನೀಡಿ ನಾನು ಏನೇನು ಬಿಜೆಪಿ ಸರ್ಕಾರ ಏನೇನು ಮಾಡಿದೆ ಎಂದು ವಿಚಾರಿಸಲಿ ತಿಳಿಯುತ್ತದೆ ಎಂದು ಹೇಳಿದರು.
ಜಿಲ್ಲಾ ರೈತ ಮೋರ್ಚಾದ ಕೆ ಆರ್ ಆನಂದಪ್ಪ, ಡಾ. ನವೀನ್, ಮಾತನಾಡಿದರು. ವೇದಿಕೆಯಲ್ಲಿ ಕಡೂರು ಶಾಸಕರಾದ ಬೆಳ್ಳಿ ಪ್ರಕಾಶ್, ಶಿವಪ್ರಸಾದ್, ಕಲ್ಮರಡಪ್ಪ, ಪ್ರತಾಪ್, ಸುಧಾಕರ್, ಚೈತ್ರ ಶ್ರೀ, ಶಾಂತ ಶಿವಮೂರ್ತಿ, ಪದ್ಮಾವತಿ, ಆಶಾ ಅರುಣ್ ಕುಮಾರ್, ರಾಜರಾಜೇಶ್ವರಿ, ಎಸ್ ಬಿ ಆನಂದಪ್ಪ, ಅಶ್ವಥ್ ರೆಡ್ಡಿ, ವಸಂತ್ ಕುಮಾರ್, ಸೋಮಶೇಖರ್, ಡಿಎಸ್ ಗಿರೀಶ್ , ಆರ್ ದೇವಾನಂದ್, ದಿನೇಶ್, ಟಿ.ಎಲ್ ರಮೇಶ್, ಗಿರೀಶ್ ಚವ್ಹಾಣ ಮುಂತಾದವರು ಉಪಸ್ಥಿತರಿದ್ದರು.
ವರದಿಗಾರರು : ತರೀಕೆರೆ N. ವೆಂಕಟೇಶ್