ವೃತ್ತಿಯಲ್ಲಿದ್ದವರು ಈಗ ನಿರುದ್ಯೋಗಿಗಳು..!? ; ನಿರೋದ್ಯೋಗಿಗಳಾದ 2 ಲಕ್ಷ ಐ.ಟಿ ಉದ್ಯೋಗಿಗಳು…!

ತಾಂತ್ರಿಕ ಕ್ಷೇತ್ರದಲ್ಲಿ ದೊಡ್ಡಮಟ್ಟದ ಉದ್ಯೋಗಿಗಳ ಕಡಿತದಿಂದಾಗಿ 2023ರ ಜನವರಿ ತಿಂಗಳು ವೃತ್ತಿಪರರಿಗೆ ಕ್ರೂರವಾಗಿದೆ. ಅನೇಕ ಪ್ರತಿಭಾನ್ವಿತರು ಕೆಲಸ ಕಳೆದುಕೊಂಡಿದ್ದಾರೆ. ತಾಂತ್ರಿಕ ಕ್ಷೇತ್ರವು ಬಹುತೇಕ ಭಾರತೀಯರನ್ನೇ ಅವಲಂಬಿಸಿರುವ ಕಾರಣ, ಇದರ ಪರಿಣಾಮ ಅವರ ಮೇಲೆ ಬೀರುತ್ತಿದೆ ಎಂದು ಹೇಳಿದರು.

ವಾಷಿಂಗ್ಟನ್ (PTI. ಜ.24): 

ಅಮೇರಿಕಾದ ದೈತ್ಯ ಐ.ಟಿ. ಕಂಪನಿಗಳ ದಿಢೀರ್ ಸಿಬ್ಬಂದಿ ಸಂಖ್ಯೆಗಳನ್ನು ಕಡಿತಗೊಳಿಸುವ ಕ್ರಮದಿಂದಾಗಿ ಅಮೆರಿಕದಲ್ಲಿರುವ ಭಾರತದ ಸಾವಿರಾರು ಐ.ಟಿ ಉದ್ಯೋಗಿಗಳು ನಿರುದ್ಯೋಗಿಗಳು ಆಗಿದ್ದಾರೆ .

2022ರ ನವೆಂಬರ್‌ನಿಂದ ಈವರೆಗೆ ಸುಮಾರು 2 ಲಕ್ಷ ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಇವರಲ್ಲಿ ಶೇ 30 – 40ರಷ್ಟು ಜನರು ಭಾರತೀಯರು, ಬಹುತೇಕ ಮಂದಿ ಗೂಗಲ್, ಮೈಕ್ರೋಸಾಫ್ಟ್, ಫೇಸ್‌ಬುಕ್ ಮತ್ತು ಅಮೆಜಾನ್ ಸಂಸ್ಥೆಗಳಲ್ಲಿ ಕೆಲಸದಲ್ಲಿ ಇದ್ದರು. ಹೆಚ್ಚಿನವರು H-1B ಮತ್ತು L1 ವೀಸಾ ಹೊಂದಿದವರಾಗಿದ್ದಾರೆ.

ಗೂಗಲ್, ಮೈಕ್ರೋಸಾಫ್ಟ್, ಅಮೆಜಾನ್ ಸೇರಿದಂತೆ ಪ್ರಮುಖ ಐ.ಟಿ. ಕಂಪನಿಗಳು ಇತ್ತೀಚಿನ ದಿನಗಳಲ್ಲಿ ಸಿಬ್ಬಂದಿ ಸಂಖ್ಯೆಯನ್ನು ಭಾರಿ ಪ್ರಮಾಣದಲ್ಲಿ ಕಡಿತಗೊಳಿಸಿರುವುದರಿಂದ, ವೀಸಾ ನಿಷ್ವಸಿಸುವುದರೊಳಗಾಗಿ ಹೊಸ ಉದ್ಯೋಗವನ್ನು ಹುಡುಕಿಕೊಳ್ಳಬೇಕಾದ ಸವಾಲು ಈಗ ಭಾರತೀಯರ ಮುಂದಿದೆ.

H-1B ವಲಸಿಗಯೇತರ ವೀಸಾ ಆಗಿದ್ದು, ಅಮೆರಿಕದ ಕಂಪನಿಗಳು ವಿಶೇಷ ಪರಿಣತಿ ಬಯಸುವ ಹುದ್ದೆಗಳಿಗೆ ತಾಂತ್ರಿಕ ಪರಿಣತಿಯನ್ನು ಆಧರಿಸಿ ವಿದೇಶಿಯರನ್ನು ನೇಮಿಸಿಕೊಳ್ಳಲು ಇದು ಅನುವು ಮಾಡಿಕೊಡಲಿದೆ. ಇಂತ ಹುದ್ದೆಗಳಿಗೆ ತಾಂತ್ರಿಕ ಪರಿಣತಿ ಆಧರಿಸಿ ಭಾರತ, ಚೀನಾದಿಂದ

ಸಾವಿರಾರು ಮಂದಿ ನೇಮಕಗೊಳ್ಳುತ್ತಾರೆ. ವಿಶೇಷ ಜ್ಞಾನ ಅಥವಾ ವ್ಯವಸ್ಥಾಪನಾ ವಿಭಾಗದಲ್ಲಿನ ಹುದ್ದೆಗಳಲ್ಲಿ ಇರುವವರನ್ನು ತಾತ್ಕಾಲಿಕವಾಗಿ ಕಂಪನಿ ತನ್ನ ವಿವಿಧ ಶಾಖೆಗಳಿಗೆ ವರ್ಗಾವಣೆ ಮಾಡಲು ಪೂರಕವಾಗಿ L-1A ಮತ್ತು L-1B ವೀಸಾವನ್ನು ನೀಡಲಾಗುತ್ತದೆ.

ಭಾರತದ ಉದ್ಯೋಗಿಗಳ ಪೈಕಿ ಗಣನೀಯ ಸಂಖ್ಯೆಯ ಉದ್ಯೋಗಿಗಳು ವಲಸಿಗಯೇತರ(H-1B and L-1) ವೀಸಾ ಅನ್ನು ಆಧರಿಸಿ ಅಮೆರಿಕದಲ್ಲಿ ನೆಲೆಸಿದ್ದಾರೆ. ಈಗ ಅವರ ವೀಸಾ ಊರ್ಜಿತವಾಗಿ ಇರಬೇಕಾದರೆ ನಿಗದಿತ ಗಡುವಿನ ಒಳಗೆ ಹೊಸ ಕೆಲಸ ಹುಡುಕಿಕೊಳ್ಳಬೇಕಿದೆ.

ಅಮೆಜಾನ್‌ನಲ್ಲಿದ್ದು ಕೆಲಸ ಕಳೆದುಕೊಂಡಿರುವ ಯುವತಿಯೊಬ್ಬರು, ‘ಮೂರು ತಿಂಗಳ ಹಿಂದೆ ಅಮೆರಿಕಕ್ಕೆ ಬಂದಿದ್ದೆ. ಮಾರ್ಚ್ 20 ನಿಮ್ಮ ಕೆಲಸದ ಕೊನೆಯ ದಿನ ಎಂದು ತಿಳಿಸಿದ್ದಾರೆ. ಏನು ಮಾಡಲಿ?’ ಎನ್ನುತ್ತಾರೆ.

H-1B ವೀಸಾ ಹೊಂದಿದವರ ಸ್ಥಿತಿ ಹೆಚ್ಚು ಶೋಚನೀಯವಾಗಿದೆ. 60 ದಿನದಲ್ಲಿ ಕೆಲಸ ಹುಡುಕಿಕೊಳ್ಳಲೇ ಬೇಕಾದ ಅನಿವಾರ್ಯತೆ ಈಗ ಅವರಿಗೆ ಎದುರಾಗಿದೆ. ಈ ಅವಧಿಯಲ್ಲಿ ಕೆಲಸ ಸಿಗದಿದ್ದರೆ ಭಾರತಕ್ಕೆ ವಾಪಸಾಗದೆ ಬೇರೆ ದಾರಿಯೇ ಇಲ್ಲ.

ಮೈಕ್ರೋಸಾಫ್ಟ್ ನಲ್ಲಿದ್ದು ಕೆಲಸ ಕಳೆದುಕೊಂಡಿರುವ ಮತ್ತೊಬ್ಬ ಗೃಹಿಣಿ ‘ನಾನು ಜ.18ರಂದು ಕೆಲಸ ಕಳೆದುಕೊಂಡಿದ್ದು ಪರಿಸ್ಥಿತಿ ಗಂಭೀರವಾಗಿದೆ. ಮಗ ಪ್ರೌಢಶಾಲೆಯಲ್ಲಿದ್ದು, ಕಾಲೇಜಿಗೆ ಸೇರಿಸಬೇಕಿದೆ ಎನ್ನುತ್ತಾರೆ’ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

H-1B ವೀಸಾ ಹೊಂದಿದ್ದ ಹೆಚ್ಚಿನವರು ಕೆಲಸ ಕಳೆದುಕೊಳ್ಳುತ್ತಿರುವುದು ದುರದೃಷ್ಟಕರದ ಸಂಗತಿ ಆದರೆ ಇತ್ತ ಇದರ ಪರಿಣಾಮ ಕುಟುಂಬ, ಮಕ್ಕಳ ಶಿಕ್ಷಣದ ಮೇಲೆ ಬೀರುತ್ತಿದೆ.

ಕೆಲಸ ಹುಡುಕಲು ಸಹಾಯ ಮಾಡುತ್ತಿರುವ ಸಂಘಟನೆಗಳು :

ಉದ್ಯೋಗಾಂಕ್ಷಿಗಳು ಮತ್ತು ಉದ್ಯೋಗದಾತ ಸಂಸ್ಥೆಗಳ ನಡುವೆ ಸಂಪರ್ಕ ಸೇತುವಾಗಲು ಕ್ರಮವಹಿಸಿವೆ. ಭಾರತೀಯ ಜಾಗತಿಕ ತಾಂತ್ರಿಕ ವೃತ್ತಿಪರರ ಸಂಘಟನೆ (JITPRO), ಭಾರತ ಮತ್ತು ಭಾರತ ಮೂಲದವರ ಅಧ್ಯಯನ ಪ್ರತಿಷ್ಠಾನವು (FIIDS) ಭಾನುವಾರವಷ್ಟೇ ಇಂಥದೊಂದು ಕಾರ್ಯಕ್ಕೆ ಮುಂದಾಗಿವೆ.

ಅಲ್ಲದೆ, ಪರಿಹಾರ ಮಾರ್ಗೋಪಾಯಗಳನ್ನು ಹುಡುಕಲು ಭಾರತೀಯ ಐ.ಟಿ. ಉದ್ಯೋಗಿಗಳು ವಾಟ್ಸ್ ಆ್ಯಪ್ , ಟೆಲಿಗ್ರಾಂ ಗುಂಪುಗಳನ್ನು ರಚಿಸಿಕೊಂಡಿದ್ದಾರೆ. ಉದ್ಯೋಗಾವಕಾಶ ಕುರಿತ ಸಂದೇಶಗಳು ಈ ಗುಂಪಿನಲ್ಲಿ ಹಂಚಿಕೆ ಆಗುತ್ತಿವೆ.

ವಾಷಿಂಗ್ಟನ್ (PTI) ಯಲ್ಲಿ ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿರುವ ಭಾರತೀಯ ವೃತ್ತಿಪರರಿಗೆ ನೆರವಾಗಲು ವಿವಿಧ ಉದ್ಯಮ ಮತ್ತು ಸಮುದಾಯ ಆಧರಿತ ಸಂಘಟನೆಗಳು ಮುಂದಾಗಿದ್ದು ಉದ್ಯೋಗ ಕಳೆದುಕೊಂಡವರಿಗೆ ಸ್ವಲ್ಪ ಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿದೆ .

 

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button