ಮಧ್ಯಪ್ರದೇಶದ ಮೊರೆನಾದಲ್ಲಿ ಭಾರತೀಯ ಯುದ್ದ ವಿಮಾನಗಳು ಪರಸ್ಪರ ಡಿಕ್ಕಿ ; ಬೆಳಗಾವಿ ಮೂಲದ ವಿಂಗ್ ಕಮಾಂಡರ್ ಹನುಮಂತರಾವ್ ಹುತಾತ್ಮ ..!
ಮಧ್ಯಪ್ರದೇಶದ (Madhya Pradesh) ಮೊರೆನಾದಲ್ಲಿ ಭಾರತೀಯ ಯುದ್ದ ವಿಮಾನಗಳು ಪರಸ್ಪರ ಡಿಕ್ಕಿ ಪ್ರಕರಣದಲ್ಲಿ ಬೆಳಗಾವಿ ಮೂಲದ ವಿಂಗ್ ಕಮಾಂಡರ್ ಹನುಮಂತರಾವ್ ಹುತಾತ್ಮರಾದ ಘಟನೆ ನಡೆದಿದೆ.ಕಮಾಂಡರ್ ಹನುಮಂತರಾವ್ ಅವರು ತಂದೆ, ತಾಯಿ, ಹೆಂಡತಿ ಇಬ್ಬರು ಮಕ್ಕಳಿದ್ದರು ಈಗ ಅವರನ್ನೆಲ್ಲಾ ಬಿಟ್ಟು ಅಗಲಿದ್ದಾರೆ.
ಬೆಳಗಾವಿ :
ಮಧ್ಯಪ್ರದೇಶದ ಮೊರೆನಾದಲ್ಲಿ ಭಾರತೀಯ ಯುದ್ದ ವಿಮಾನಗಳು ಪರಸ್ಪರ ಡಿಕ್ಕಿಯಾಗಿ ಬೆಳಗಾವಿ ಮೂಲದ ವಿಂಗ್ ಕಮಾಂಡರ್ ಹನುಮಂತರಾವ್ R ಸಾರಥಿ ಅವರು ಹುತಾತ್ಮರಾಗಿದ್ದಾರೆ.
ಕಮಾಂಡರ್ ಹನುಮಂತರಾವ್ ಅವರು ಬೆಳಗಾವಿ ನಗರದ ಗಣೇಶಪುರದ ಸಂಭಾಜೀ ನಗರದ ನಿವಾಸಿಯಾಗಿದ್ದು, ಅವರು ತಂದೆ, ತಾಯಿ, ಹೆಂಡತಿ ಇಬ್ಬರು ಮಕ್ಕಳು ಇದ್ದರು ಈಗ ಹನುಮಂತರಾವ್ ಅವರು ತಮ್ಮ ಕುಟುಂಬವನ್ನು ಬಿಟ್ಟು ಹುತಾತ್ಮರಾಗಿದ್ದಾರೆ.
ಶನಿವಾರ ಬೆಳಗ್ಗೆ ಘಟನೆ ನಡೆದಿದ್ದು, ಸುಖೋಯ್ ಯುದ್ಧ ವಿಮಾನದಲ್ಲಿ ಮೂವರು ಪೈಲಟ್ ಗಳಿದ್ದರೆ, ಮೀರಜ್ ನಲ್ಲಿ ಒಬ್ಬರೇ ಪೈಲಟ್ ಇದ್ದರು. ಇಬ್ಬರು ಪೈಲಟ್ ಅಪಾಯದಿಂದ ಪಾರಾಗಿದ್ದರು. ಒಬ್ಬರು ಸ್ಥಳದಲ್ಲೇ ಸಾವು ಕಂಡಿದ್ದರೆ, ಇನ್ನೊಬ್ಬರು ಗಂಭೀರ ಗಾಯಗೊಂಡಿದ್ದರು ಎಂದು ಸೇನಾ ಮೂಲಗಳು ತಿಳಿಸಿದ್ದವು.
ಹನುಮಂತ ರಾವ್ ಸೋದರನೂ ವಾಯುಪಡೆಯಲ್ಲಿದ್ದು, ಪೈಲಟ್ ಆಗಿದ್ದಾರೆ.
ಗಣೇಶಪುರದ ಹನುಮಂತರಾವ್ ಮನೆಗೆ ಬೆಳಗಾವಿಯ ಏರ್ಪೋರ್ಸ್ ಟ್ರೈನಿಂಗ್ ಸೆಂಟರ್ ನ ಅಧಿಕಾರಿಗಳು ಭೇಟಿ ನೀಡಿದ್ದಾರೆ. ವಿಂಗ್ ಕಮಾಂಡರ್ ಸಾವಿನ ಸುದ್ದಿ ತಿಳಿದ ಹನುಮಂತರಾವ್ ಮನೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ವಿಂಗ್ ಕಮಾಂಡರ್ ಹನುಮಂತರಾವ್ (Hanumanth Rao Sarathi) ಹುತಾತ್ಮರಾಗಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿ ಭಾರತೀಯ ವಾಯು ಪಡೆ (IAF) ವಿಷಾದ ವ್ಯಕ್ತಪಡಿಸಿದೆ.
ವಾಯು ಪಡೆಯ ವಿಮಾನ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿತು. ಘಟನೆ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಮಾಹಿತಿ ನೀಡಲಾಗಿದೆ ಎಂದು ರಕ್ಷಣಾ ಇಲಾಖೆ ಹೇಳಿದೆ.
ಬೆಳಗಾವಿ ಗ್ರಾಮೀಣ ಕ್ಷೇತ್ರ ವ್ಯಾಪ್ತಿಯ ಗಣೇಶಪುರದ ಹನುಮಂತರಾವ್ ಮನೆಗೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ವಿಂಗ್ ಕಮಾಂಡರ್ ಸಾವಿನ ಸುದ್ದಿ ತಿಳಿದ ಹನುಮಂತರಾವ್ ಮನೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಮಧ್ಯಪ್ರದೇಶದ ಮೊರೆನಾ ಸಮೀಪ ಸುಖೋಯ್ 30 (Sukhoi) ಹಾಗೂ ಒಂದು ಮಿರಾಜ್ 2000 (Mirage) ಯುದ್ಧವಿಮಾನ ಪತನವಾಗಿತ್ತು. ಈ ಎರಡೂ ವಿಮಾನಗಳು ಗ್ವಾಲಿಯರ್ ವಾಯುನೆಲೆಯಿಂದ ಟೇಕಾಫ್ ಆಗಿದ್ದವು. ಘಟನೆಗೆ ಕಾರಣ ತಿಳಿಯಲು ಭಾರತೀಯ ವಾಯುಪಡೆ ತನಿಖೆಗೆ ಆದೇಶ ಮಾಡಿದೆ.