ದಲಿತ ಮಹಿಳೆ ಮೇಲೆ ಸವರ್ಣೀಯನ ದರ್ಪ ;. ಕಂಬಕ್ಕೆ ಕಟ್ಟಿ ಚಪ್ಪಲಿಯಿಂದ ಮನಬಂದಂತೆ ಥಳಿಸಿದ ವ್ಯಕ್ತಿ……!

ಕೊಪ್ಪಳ (ಕನಕಪುರ, ಫೆ.11) :

ಕೊಪ್ಪಳ ಜಿಲ್ಲೆಯಲ್ಲಿ  ಹಸುಗಳನ್ನು ಹೊಲದಲ್ಲಿ ಬಿಟ್ಟಿದ್ದಿಯಾ ಅಂತ ಮೇಲ್ಜಾತಿಯ ವ್ಯಕ್ತಿಯೊಬ್ಬ ದಲಿತ ಮಹಿಳೆಗೆ ಚಪ್ಪಲಿಯಿಂದ ಥಳಿಸಿದ ಘಟನೆ ನಡೆದಿದ್ದು ಈಗ ಸಾಮಾಜಿಕ ಜಾಲತಾಣದಲ್ಲಿ ಶೋಭಮ್ಮ ಪವಾರ್ ಎಂಬ ಮಹಿಳೆಗೆ ಥಳಿಸುತ್ತಿರುವ ವೀಡಿಯೋ ಹರಿದಾಡುತ್ತಿದೆ. ಪೊಲೀಸರು ಎಸ್ಸಿ/ಎಸ್ಟಿ ಮೇಲೆ ದೌರ್ಜನ್ಯ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅಮರೀಶ್ ಕಂಬಾರ್ ಎಂಬಾತನನ್ನು ಬಂಧಿಸಿದ್ದಾರೆ.

ಅಮರೇಶ್ ಕಂಬಾರ ಅವರಿಗೆ ಸೇರಿದ ಹೊಲದಲ್ಲಿ ದನ ಬೆಳೆ ತಿಂದು ಹಾಕಿದೆ ಎನ್ನುವ ಕಾರಣಕ್ಕಾಗಿ ಜಿಲ್ಲೆಯ ಕನಕಗಿರಿ ತಾಲ್ಲೂಕಿನ ರಾಂಪುರ ಗ್ರಾಮದಲ್ಲಿ ಇತ್ತೀಚೆಗೆ ಪರಿಶಿಷ್ಟ ಸಮುದಾಯದ ದಲಿತ ಮಹಿಳೆಯ ಮೇಲೆ ದಾರುಣವಾಗಿ ಹಲ್ಲೆ ನಡೆಸಿದ್ದಾನೆ.

ಕಂಬಾರ್ ಅವರಿಗೆ ಸೇರಿದ ಮೈದಾನಲ್ಲಿ ತಮ್ಮ ಹಸುಗಳು ಇರುವುದನ್ನು ನೋಡಿದ ಕೂಡಲೇ ಶೋಭಮ್ಮಾ ಹಸುಗಳನ್ನು ಕರೆದೊಯ್ಯಲು ಹೋಗಿದ್ದಾರೆ. ಆದರೆ ಆಕೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಮೈದಾನದಿಂದ ಹೊರಗೆ ಹೋಗಲು ಬಿಡದ ಅಮರೀಶ್ ಕಂಬಾರ್ ಹಲ್ಲೆ ನಡೆಸಿದ್ದಾನೆ.

ತಮ್ಮ ಹೊಲದ ಬೆಳೆಯನ್ನು ಹಾಳು ಮಾಡಿದ್ದರಿಂದ ದನವನ್ನು ಕಟ್ಟಿ ಹಾಕಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.ಅಮರೇಶ ಅವರ ಮನೆಗೆ ಬಂದ ಮಹಿಳೆ ದನ ಬಿಟ್ಟು ಬಿಡಿ ಎಂದು ಅಂಗಲಾಚಿದ್ದಾಳೆ. ಆಕ್ರೋಶಗೊಂಡ ಅಮರೇಶ ಮಹಿಳೆ ಮೇಲೆ ಹಲ್ಲೆ ಮಾಡಿ ಅವಾಚ್ಯ ಪದಗಳಿಂದ ನಿಂದಿಸಿ, ಕಂಬಕ್ಕೆ ಕಟ್ಟಿ ಮನಬಂದಂತೆ ಥಳಿಸಿದ್ದಾರೆ.

ಈ ಕುರಿತು ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ ಪ್ರಿಯಾಂಕ್ ಖರ್ಗೆ ‘ಬಿಜೆಪಿ ಆಳ್ವಿಕೆಯಲ್ಲಿ ದಲಿತರ ಮೇಲೆ ನಿರಂತರವಾಗಿ ಹಲ್ಲೆ ಹಾಗೂ ದೌರ್ಜನ್ಯ ಹೆಚ್ಚಾಗುತ್ತಲೇ ಇದೆ. ಜಮೀನ್ದಾರರ ಜಮೀನಿಗೆ ಹಸು ನುಗ್ಗಿದೆ ಎನ್ನುವ ಕಾರಣಕ್ಕೆ ಮಹಿಳೆ ಮೇಲೆ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಲಾಗಿದೆ. ಹಸಿವಿನಲ್ಲಿಯೂ ಮೇಲ್ವಾತಿ ಹಾಗೂ ಕೆಳಜಾತಿ ಎನ್ನುವುದು ಇದೆಯೇ? ತಪ್ಪಿತಸ್ಥರಿಗೆ ಈ ಬಿಜೆಪಿ ಆಡಳಿತದಲ್ಲಿ ಶಿಕ್ಷೆ ಯಾವಾಗ? ಎಂದು ಪ್ರಶ್ನಿಸಿದ್ದಾರೆ.ಅಮ್ಮನ ರಕ್ಷಣೆಗೆ ಬಂದ ಮಗಳು: ಕಳೆದು ಹೋಗಿದ್ದ ದನವನ್ನು ಹುಡುಕಲು ನನ್ನ ಪತ್ನಿ ಶೋಭಾ ಹಾಗೂ ಮಗಳು ಹೋಗಿದ್ದರು. ಅಮರೇಶ ಕುಂಬಾರ ಹೊಲದಲ್ಲಿ ದನಗಳು ಸಿಕ್ಕ ಕಾರಣ ಪತ್ನಿ ಮಗಳನ್ನು ವಾಪಸ್ ಕಳುಹಿಸಿದಳು. ತನ್ನ ತಾಯಿಯ ಮೇಲೆ ಹಲ್ಲೆ ಮಾಡುತ್ತಾರೆ ಎನ್ನುವ ಆತಂಕದಿಂದ ಮಗಳು ಓಡೋಡಿ ಮನೆಗೆ ಹೋಗಿ ಮೊಬೈಲ್ ಫೋನ್ ತಂದು ಹಲ್ಲೆಯ ವಿಡಿಯೊ ಮಾಡಿದ್ದಾಳೆ ಎಂದು ಶೋಭಾ ಪತಿ ರಮೇಶ ಪವಾರ್ ತಿಳಿಸಿದರು. ತಾಯಿಗೆ ಹೊಡೆಯುವಾಗ ಮಗಳು ಅಳುತ್ತಿದ್ದ ಚಿತ್ರಣದ ವಿಡಿಯೊ ವೈರಲ್ ಆಗಿದೆ.

ಶೋಭಮ್ಮಾಳನ್ನು ಕಂಬಕ್ಕೆ ಕಟ್ಟಿ ಚಪ್ಪಲಿಯಿಂದ ಹಲ್ಲೆ ಮಾಡಲಾಗಿದೆ ಎಂಬ ಆರೋಪವನ್ನು ಕೊಪ್ಪಳ ಜಿಲ್ಲಾ ಪೊಲೀಸರು ನಿರಾಕರಿಸಿದ್ದಾರೆ. ಆರೋಪಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button