ಅಭಿಮಾನಿಗಳ ಮನಗೆದ್ದ ಡಿ ಬಾಸ್ ; ಎದೆಯಲ್ಲಿ ಹಚ್ಚೆ ಹಾಕಿಸಿಕೊಂಡು , ಎಲ್ಲಾ ಸೆಲೆಬ್ರಿಟಿಗಳಿಗೆ ಗೌರವಾರ್ಪಣೆ ಸಲ್ಲಿಸಿದ ಡಿ ಬಾಸ್….!

ಈಗಾಗಲೇ ಈ ಮಾಸ್ ಕಮರ್ಷಿಯಲ್ ಎಂಟರ್‌ಟೈನರ್ 100 ಕೋಟಿ ಕ್ಲಬ್ ಪಟ್ಟಿಗೆ ಸೇರಿದೆ ಎಂದು ವರದಿಯಾಗಿದೆ.ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕ್ರಾಂತಿ ದೇಶಾದ್ಯಂತ ಬಿಡುಗಡೆಯಾಗಿ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದೆ.

ಮೂಲಗಳ ಪ್ರಕಾರ, ಕಮರ್ಷಿಯಲ್ ಎಂಟರ್‌ಟೈನರ್ ಅಧಿಕೃತವಾಗಿ 100 ಕೋಟಿ ಒಟ್ಟು ಸಂಗ್ರಹವನ್ನು ದಾಟಿದ್ದು, ಇದರಲ್ಲಿ ಸ್ಯಾಟಲೈಟ್ ಮತ್ತು ಡಿಜಿಟಲ್ ಹಕ್ಕುಗಳು ಸೇರಿವೆ, ಅವುಗಳು ಭಾರಿ ಬೆಲೆಗೆ ಮಾರಾಟವಾಗಿವೆ ಎನ್ನಲಾಗಿದೆ.

ಕ್ರಾಂತಿ ಬಿಡುಗಡೆಗೂ ಮೊದಲು ಮಾಧ್ಯಮಗಳ ಬಹಿಷ್ಕಾರದ ನಡುವೆಯೂ ಅಭಿಮಾನಿಗಳು ಅವರಿಗೆ ಬೆಂಬಲವಾಗಿ ನಿಂತು ಕ್ರಾಂತಿ ಸಿನೆಮಾದ ಯಶಸ್ಸಿಗೆ ದರ್ಶನ್ ತುಂಬಾ ಸಂತೋಷವಾಗಿದ್ದಾರೆ.

ಆದ್ದರಿಂದ ಈಗ ಅವರ ಅಭಿಮಾನಕ್ಕಾಗಿ ಅವರು ತಮ್ಮ ಎದೆಯ ಮೇಲೆ ಹಚ್ಚೆಯೊಂದನ್ನು ಹಾಕಿಸಿಕೊಂಡಿದ್ದಾರೆ.ಈಗ ಅದರ ವಿಡಿಯೋ ಎಲ್ಲಾ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ತಮ್ಮ ಅಭಿಮಾನಿಗಳ ಹೃದಯಕ್ಕೆ ಮತ್ತಷ್ಟು ಹತ್ತಿರವಾಗಿದ್ದಾರೆ. ಅವರು ತಮ್ಮ ಈ ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡು “ನನ್ನ ನಲ್ಮೆಯ ಸೆಲೆಬ್ರಿಟಿಗಳಿಗೆ ಒಂದು ಸಣ್ಣ ಗೌರವಾರ್ಪಣೆ ❤️A small tribute to all my loyal and royal celebrities 🙏 ನಿಮ್ಮ ದಾಸ ದರ್ಶನ್” ಎಂದು ಅವರು ಬರೆದುಕೊಂಡಿದ್ದಾರೆ.

ದರ್ಶನ್ ಅವರ ನಡೆಗೆ ಅಭಿಮಾನಿಗಳಂತೂ ಫುಲ್ ಫಿದಾ ಆಗಿದ್ದು ಚಿತ್ರರಂಗ ಇತಿಹಾಸದಲ್ಲಿ ಒಬ್ಬ ಸ್ಟಾರ್ ನಟ ಕನ್ನಡದಲ್ಲಿ ಟ್ಯಾಟು ಹಾಕಿಸಿ ಅಭಿಮಾನಿಗಳಿಗೆ ಗೌರವ ನೀಡಿದ ಏಕೈಕ ವ್ಯಕ್ತಿ ನಮ್ಮ ಡಿ ಬಾಸ್ ನೀವು ನಮ್ಮ ಮೇಲೆ ಎಷ್ಟು ಪ್ರೀತಿ ಇಟ್ಟಿದ್ದೀರಾ ಎಂಬುದಕ್ಕೆ ಇದೇ ಸಾಕ್ಷಿ ಎಂದೆಲ್ಲಾ ಸಾಮಾಜಿಕ ಮಾಧ್ಯಮಗಳಲ್ಲಿ ಬರೆದುಕೊಂಡಿದ್ದಾರೆ.

ವಿ ಹರಿಕೃಷ್ಣ ಬರೆದು ನಿರ್ದೇಶಿಸಿರುವ ಕ್ರಾಂತಿಯು ಫ್ಯಾಮಿಲಿ ಎಂಟರ್‌ಟೈನರ್ ಮತ್ತು ಸರ್ಕಾರಿ ಶಾಲೆಗಳನ್ನು ರಕ್ಷಿಸುವ ಬಲವಾದ ಸಂದೇಶವನ್ನು ಹೊಂದಿರುವ ಮಾಸ್ ಚಲನಚಿತ್ರವಾಗಿದೆ. ಚಿತ್ರದ ಯಶಸ್ಸಿನ ಬಗ್ಗೆ ಇತ್ತೀಚಿಗೆ ನಿರ್ಮಾಪಕಿ ಶೈಲಜಾ ನಾಗ್ ಸಂತಸ ವ್ಯಕ್ತಪಡಿಸುತ್ತಾ. “ದರ್ಶನ್ ಸಿಂಗಲ್ ಸ್ಕ್ರೀನ್‌ಗಳಲ್ಲಿ ಪ್ರಮುಖ ಕ್ರೌಡ್ ಪುಲ್ಲರ್ ಆಗಿರುವುದರಿಂದ, ಆನ್‌ಲೈನ್ ಬುಕ್ಕಿಂಗ್ ಅನ್ನು ಆಯ್ಕೆ ಮಾಡುವ ಬದಲು ಫಿಸಿಕಲ್ ಟಿಕೆಟ್‌ಗಳನ್ನು ಖರೀದಿಸಲು ಜನರು ಸಾಲಿನಲ್ಲಿ ನಿಂತಿರುವುದು ಆಸಕ್ತಿದಾಯಕವಾಗಿದೆ ” ಎಂದು ಸಂತಸ ವ್ಯಕ್ತಪಡಿಸಿದ್ದರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button