ಹುಣಸಘಟ್ಟ ಗ್ರಾಮ ಪಂಚಾಯತಿಯ ನೂತನ ಉಪಾಧ್ಯಕ್ಷರಾಗಿ ಶ್ರೀಮತಿ ವಿನೋದಭಾಯಿ ಮಲ್ಲೇಶ್ ನಾಯಕರವರ ಆಯ್ಕೆ….!
ತರೀಕೆರೆ (ಫೆಬ್ರವರಿ. 13) :
ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕು ಹುಣಸಘಟ್ಟ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಗಂಗಮ್ಮ ಸುರೇಶ್ ರವರಿಂದ ತೆರವಾಗಿದ್ದ ಸ್ಥಾನಕ್ಕೆ ನೂತನವಾಗಿ ಅವಿರೋಧವಾಗಿ ಉಪಾಧ್ಯಕ್ಷರಾಗಿ ಶ್ರೀಮತಿ ವಿನೋದಭಾಯಿ ಮಲ್ಲೇಶ್ ನಾಯಕ ರವರನ್ನು ಆಯ್ಕೆ ಮಾಡಲಾಯಿತು ಈ ಸಂದರ್ಭದಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷರಾದ ಪಿ ಕೃಷ್ಣ ನಾಯಕರವರು, ಹಾಗೂ ತಾಲೂಕು ಪಂಚಾಯತಿ ಸದಸ್ಯರಾದ ಹಾಲ ನಾಯಕರವರು ಮಾತನಾಡಿದರು.
ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮಗಳಿಗೂ ಸಮಾನವಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತೇನೆ ಎಂದು ನೂತನವಾಗಿ ಆಯ್ಕೆಯಾಗಿರತಕ್ಕಂತಹ ಹುಣಸಘಟ್ಟ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ವಿನೋದಬಾಯಿ ಮಲ್ಲೇಶ್ ನಾಯ್ಕ ರವರು ಹೇಳಿದರು. ಹುಣಸಘಟ್ಟ ಗ್ರಾಮ ಪಂಚಾಯಿತಿಯ ಗಂಗಮ್ಮ ಸುರೇಶ್ ರವರಿಂದ ತೆಳುವಾಗಿದ್ದ ಉಪಾಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹೊಸಳ್ಳಿ ತಾಂಡಾದ ವಿನೋದಬಾಯಿ ಮಲ್ಲೇಶ್ ನಾಯಕ್ ರವರು ಅವಿರೋಧವಾಗಿ ಆಯ್ಕೆಯಾದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಯ ಸದಸ್ಯರಾದ ಚೇತನ್ ಕುಮಾರ್, ರವಿಕುಮಾರ್, ರಮೇಶ್ ನಾಯ್ಕ, ವೀಣಾ ಈರೇಗೌಡ, ಶ್ರೀನಿವಾಸ, ಗೌರಮ್ಮ ಗಂಗಾಧರಪ್ಪ, ಇಂದ್ರಮ್ಮ ಈಶ್ವರಪ್ಪ ಹಾಗೂ ಹುಣಸಘಟ್ಟ ಗ್ರಾಮದ ಮುಖಂಡರಾದ ಮೋಹನ್ ಕುಮಾರ್, ಸೋಮಣ್ಣ, ಮುದುಗುಂಡಿ ಲೋಹಿತ್, ಚಂದಪ್ಪ ಓಂಕಾರಪ್ಪ, ಪ್ರದೀಪ್, ಹೊಸಳ್ಳಿ ತಾಂಡಾದ ಮುಖಂಡರಾದ ಮಲ್ಲೇಶ್ ನಾಯ್ಕ, ದೇವೇಂದ್ರ ನಾಯಕ, ಪತ್ರಕರ್ತರಾದ ಪ್ರದೀಪ್, ಹಾಗೂ ಪತ್ರಕರ್ತರ ಸಂಘದ ಅಧ್ಯಕ್ಷರಾದ ಬಿ ಕೃಷ್ಣ ನಾಯ್ಕ ಮುಂತಾದವರು ಮಾತನಾಡಿದರು.