ಜಮಖಂಡಿ ವಿಧಾನ ಸಭಾ ಕ್ಷೇತ್ರದಲ್ಲಿ, ಶಾಸಕ ನ್ಯಾಮಗೌಡ ಅವರ ನೇತೃತ್ವದ ಎರಡನೇ ಹಂತದ ಪಾದಯಾತ್ರೆಯನ್ನು ಆರಂಭಿಸಲಾಯಿತು…….!
ಕಾಂಗ್ರೇಸ್ ಪಕ್ಷದ ವತಿಯಿಂದ ಆರಂಭವಾದ ಕೈ ಗೆ ಕೈ ಜೋಡಿಸಿ ಪಾದಯಾತ್ರೆ ನಿನ್ನೆ ಎರಡನೇ ಹಂತ ತಲುಪಿದ್ದು, ಎರಡನೇ ಹಂತದ ಪಾದಯಾತ್ರೆಯನ್ನು ಜಮಖಂಡಿಯಿಂದ ಆರಂಭಿಸಲಾಯಿತು.
ಜಮಖಂಡಿ (ಫೆಬ್ರವರಿ.13) :
ನಿನ್ನೆ (ಫೆಬ್ರವರಿ 12) ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನಲ್ಲಿ ಕೈ ಗೆ ಕೈ ಜೋಡಿಸಿ ಪಾದಯಾತ್ರೆ ಮುಂದುವರೆದಿದ್ದು,2 ನೇ ಹಂತದ ಪಾದಯಾತ್ರೆ ಆರಂಭವಾಗಿದೆ, ಎಂದು ಶಾಸಕ ಆನಂದ ನ್ಯಾಮಗೌಡ ಅವರ ಕಚೇರಿಯಿಂದ ಬಂದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕಾಂಗ್ರೇಸ್ ಪಕ್ಷದ ವತಿಯಿಂದ ಈ ಪಾದಯಾತ್ರೆಯನ್ನು ಆಯೋಜಿಸಲಾಗಿದ್ದು, ಶಾಸಕ ನ್ಯಾಮಗೌಡ ಅವರು ಈ ಕಾರ್ಯಕ್ರಮದ ನೇತೃತ್ವವನ್ನು ವಹಿಸಿಕೊಂಡಿದ್ದಾರೆ.
ಕಾರ್ಯಕ್ರಮದ ಎರಡನೇ ಹಂತದ ಮೊದಲ ದಿನದ ಪಾದಯಾತ್ರೆ ಶಿರಗುಪ್ಪಿ ಗ್ರಾಮದಿಂದ ಆರಂಭವಾಗಿ ಮೈಗೂರು ಮಾರ್ಗ ಸಾಗಿ ಮುತ್ತೂರಿನಲ್ಲಿ ಮುಕ್ತಾಯಗೊಂಡಿತು.
ಈ ಕಾರ್ಯಕ್ರಮವು ವಿವಿಧ ಗ್ರಾಮಗಳಲ್ಲಿ ಜರುಗುವುದರ ಮೂಲಕ, ಶಾಸಕ ಆನಂದ ನ್ಯಾಮಗೌಡ ಅವರ ಅಧಿಕಾರದ ಅವಧಿಯಲ್ಲಿ ಆದ ಅಭಿವೃದ್ಧಿ ಕಾರ್ಯಗಳು,ಕಾಮಗಾರಿಗಳ ಬಗ್ಗೆ ವಿವಿಧ ಗ್ರಾಮದ ಜನರಿಗೆ, ಮನೆ ಮನೆಗಳಿಕೆ ತಲುಪಿಸುವ ಪಾದಯಾತ್ರೆಯಾಗಿದೆ ಎಂದು ಶಾಸಕ ನ್ಯಾಮಗೌಡ ಅವರ ಕಛೇರಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಶಾಸಕ ಆನಂದ ನ್ಯಾಮಗೌಡ ಅವರು ಭೇಟಿ ನೀಡಿದ ಎಲ್ಲಾ ಗ್ರಾಮಗಳಲ್ಲಿಯೂ ಪುಷ್ಪಾಚರಣೆ ಮಾಡುವುದರ ಮೂಲಕ ಅದ್ಧೂರಿ ಸ್ವಾಗತ ಕೋರಲಾಯಿತು. ಎಂದು ಅವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಸಂತಸವನ್ನು ಹಂಚಿಕೊಂಡಿದ್ದಾರೆ.ಇದೇ ಸಂದರ್ಭದಲ್ಲಿ, ಕಾಂಗ್ರೆಸ್ ಪಕ್ಷದ ಕಾರ್ಯಗಳನ್ನು ಮೆಚ್ಚಿ ಬಿಜೆಪಿ ತೊರೆದು ಮೈಗೂರು ಗ್ರಾಮದ ಕಲ್ಲಪ್ಪ ಅವಟಿ, ಬಾಹುಬಲಿ ಕವಟಗೊಪ್ಪ, ಸಿದ್ದು ಹಾಲಳ್ಳಿ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಎಂದು ಅವರು ತಮ್ಮ FB ಖಾತೆಯಲ್ಲಿ ಹಂಚಿಕೊಂಡಿದ್ದಾರೆ .
ಒಟ್ಟಾರೆಯಾಗಿ ಬಾಗಲಕೋಟೆಯ ಜಮಖಂಡಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಾಂಗ್ರೇಸ್ ಪಕ್ಷ ಕೈ ಗೆ ಕೈ ಜೋಡಿಸಿ ಅಭಿಯಾನವನ್ನು ಮುಂದುವರೆಸಿದೆ..