ಪ್ರೇಮಿಗಳ ದಿನದಂದು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬಿಜೆಪಿ ನಾಯಕರನ್ನು ವ್ಯಂಗ್ಯ ಚಿತ್ರಗಳ ಮೂಲಕ ಕಾಲೆಳೆದ ಕಾಂಗ್ರೇಸ್….!
ಇಂದು ಫೆಬ್ರವರಿ 14 ಅಂದರೆ ಪ್ರೇಮಿಗಳ ದಿನ , ರಾಜಕೀದಲ್ಲಿ ಪ್ರತಿದಿನ ಏನಾದರೊಂದು ವ್ಯಂಗ್ಯ, ಹಾಸ್ಯ ಪ್ರಸಂಗಗಳನ್ನು ಕಾಣುತ್ತಲೇ ಇರುತ್ತೇವೆ. ಒಮ್ಮೆ ಬಿಜೆಪಿ ಕಾಂಗ್ರೇಸ್ ನ ಕಾಲೇಳದರೆ, ಒಮ್ಮೆ ಕಾಂಗ್ರೇಸ್ ಬಿಜೆಪಿಯನ್ನು ಅನಕಿಸುತ್ತದೆ, ಇದೇ ರೀತಿ ಈಗ ರಾಜ್ಯ ಕಾಂಗ್ರೆಸ್ ಘಟಕ ಟ್ವಿಟರ್ ಪ್ರೇಮಿಗಳ ದಿನದಂದು ತುಂಬಾ ವಿಶಿಷ್ಟವಾಗಿ ಹಾಸ್ಯಾಸ್ಪದವಾಗಿ ಬಿಜೆಪಿ ನಾಯಕರ ಕಾಲೆಳೆಯುವ ಮೂಲಕ ವಿಶೇಷವಾಗಿ ತನ್ನ ಖಾತೆಯಲ್ಲಿ ಪೋಸ್ಟ್ ಗಳನ್ನು ಹಂಚಿಕೊಂಡಿದೆ.
ಮುಖ್ಯಮಂತ್ರಿ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್, ಸಚಿವ ಅಶ್ವತ್ಥ ನಾರಾಯಣ, ಸಚಿವ ಸ್ಥಾನ ಕಳಕೊಂಡ ಈಶ್ವರಪ್ಪ, ಸಚಿವ ಸ್ಥಾನಕ್ಕಾಗಿ ಹಪಹಪಿಸುತ್ತಿರುವ M.P ರೇಣುಕಾಚಾರ್ಯ ,ಸೇರಿದಂತೆ ಹಲವು ನಾಯಕರ ಕುರಿತಂತೆ ಟ್ವಿಟರ್ ನಲ್ಲಿ ವ್ಯಂಗ್ಯ ಚಿತ್ರ ಹಾಗೂ ಕ್ಯಾಪ್ಶನ್ ಗಳನ್ನು ನೀಡಿ ಬಿಜೆಪಿ ನಾಯಕರನ್ನು ವ್ಯಂಗ್ಯ ಮಾಡಿದೆ.
ಬಿಜೆಪಿಗರು ಶುದ್ಧ 40% ಪ್ರೇಮಿಗಳು,
40% ಕಮಿಷನ್ ಮೇಲಿನ ಅವರ ಪ್ರೀತಿ ರೋಮಿಯೋ ಜ್ಯುಲಿಯೆಟ್ ಪ್ರೀತಿಗಿಂತಲೂ ಉತ್ಕಟವಾದುದು!!ಪ್ರಿಯಕರನ ಕನಸು, ಮನಸಲ್ಲೂ ಪ್ರಿಯತಮೆ ಕಾಣುವಂತೆ, ಬಿಜೆಪಿಗರ ಕನಸು ಮನಸ್ಸಿನಲ್ಲೂ 40 ಪರ್ಸೆಂಟಿನದ್ದೇ ಧ್ಯಾನ…..!!#40PercentLove pic.twitter.com/5DkQwfRvv3
— Karnataka Congress (@INCKarnataka) February 14, 2023
ಬಿಜೆಪಿಗರದ್ದು ಗೋ ಪ್ರೀತಿಯಲ್ಲ,
Go ಪ್ರೀತಿ!!ಬಿಜೆಪಿಗರು ಗೋವಿನ ಎದುರು ಫ್ಲರ್ಟ್ ಮಾಡುತ್ತಾರೆ ಹೊರತು ಪ್ರೀತಿಯಲ್ಲ!#40PercentLove pic.twitter.com/SH4rO9n4eo
— Karnataka Congress (@INCKarnataka) February 14, 2023
ಭಗ್ನ ಪ್ರೇಮಿಯೊಬ್ಬನ ಪ್ರಲಾಪಗಳು,
◆ವಿಮಾನದ ತುರ್ತು ನಿರ್ಗಮನದ ಬಾಗಿಲು ತೆಗೆಯುವುದು.
◆ಸಿಎಂ ಮನೆಗೆ ಕಲ್ಲು ಹೊಡೆಯುವುದು.
◆ರೈತರಿಗೆ ಅವಮಾನಿಸುವುದು.ಪ್ರೀತಿ ಕಳೆದುಕೊಂಡು ವಿಚಿತ್ರವಾಗಿ ವರ್ತಿಸುತ್ತಿರುವ ಈ ಭಗ್ನಪ್ರೇಮಿಗೆ ಕೌನ್ಸ್ಲಿಂಗ್ ಅಗತ್ಯವಿದೆ!#40PercentLove pic.twitter.com/xkEzJxeIIB

ಒಮ್ಮೆ ತಿರಸ್ಕಾರ ಭಾವ ಮೂಡಿದರೆ ಮತ್ತೆಂದೂ ಅಲ್ಲಿ ಪ್ರೀತಿಗೆ ಜಾಗವಿಲ್ಲ!
ಮಂಡ್ಯದಲ್ಲಿ ತಿರಸ್ಕಾರದ ಪ್ರೇಮವೈಫಲ್ಯ ಅನುಭವಿಸಿ ನೋವಿನಲ್ಲಿರುವ ಭಗ್ನಪ್ರೇಮಿಗೆ ನಮ್ಮ ಸಾಂತ್ವಾನಗಳು!#40PercentLove pic.twitter.com/KFnfYJOqtv
— Karnataka Congress (@INCKarnataka) February 14, 2023
"ಪ್ರೀತಿ ಮಧುರ, ತ್ಯಾಗ ಅಮರ"
ಕುರ್ಚಿಯೊಂದಿಗಿನ ಪ್ರೇಮದ ಸವಿಗಳಿಗೆಯ ನೆನಪು, ವಿರಹದ ನೋವು ಸದಾ ಕಾಡುತ್ತಿರುತ್ತದೆ..
ಈಶ್ವರಪ್ಪನವರೇ ತಮಗೆ ವಿರಹದ ನೋವು ಭರಿಸುವ ಶಕ್ತಿ ಸಿಗಲಿ!!#40PercentLove pic.twitter.com/JMZNsbPMuL
— Karnataka Congress (@INCKarnataka) February 14, 2023
ಒಂದು ಮುತ್ತಿನ ಕತೆಯಲ್ಲಿ ಪ್ರೇಮಿಗೆ ಜಯ ಸಿಗಲಿಲ್ಲ!
"ಸಚಿವ ಹುದ್ದೆ" ಎಂಬ ಪ್ರೇಮ ವೈಫಲ್ಯದಿಂದ ಭಗ್ನಪ್ರೇಮಿಯಾಗಿ ತಿರುಗುತ್ತಿರುವವರ ನೋವು ಜಗತ್ತಿನ ಕಣ್ಣಿಗೆ ಕಾಣುವುದಿಲ್ಲ!#40PercentLove pic.twitter.com/DxYk7afEmR
— Karnataka Congress (@INCKarnataka) February 14, 2023
ಈ ಸ್ಪೆಷಲ್ ಡಾಕ್ಟರ್ಗೆ ಹೃದಯ ಬಡಿತವೂ ತಿಳಿಯುತ್ತದೆ.
ಲೂಟಿ ಹೊಡೆತವೂ ತಿಳಿದಿದೆ!ಈ ಡಾಕ್ಟರ್ಗೂ ಲವ್ವಾಗಿದೆ – PSI ಹುದ್ದೆಗಳ ಮೇಲೆ!#40PercentLove pic.twitter.com/nEvQTqk7AT
— Karnataka Congress (@INCKarnataka) February 14, 2023
ಪ್ರೇಮವಿರುವ ಕಡೆ ದ್ವೇಷಕ್ಕೆ ಜಾಗವಿಲ್ಲ..
ಆದರೆ ದ್ವೇಷವನ್ನೇ ಪ್ರೇಮಿಸಿದರೆ….!?ದ್ವೇಷವನ್ನೇ ಪ್ರೀತಿಸಿ, ದ್ವೇಷವನ್ನೇ ಧ್ಯಾನಿಸಿ, ದ್ವೇಷದೊಂದಿಗೆ ರೊಮ್ಯಾನ್ಸ್ ಮಾಡುವ ವಿಶಿಷ್ಠ ಪ್ರೇಮಿ ಇವರು!!#40PercentLove pic.twitter.com/malmJWsea5
— Karnataka Congress (@INCKarnataka) February 14, 2023
ಪ್ರೇಮದಲ್ಲಿ ಮುಳುಗಿದವರು ಸದಾ ಕಲ್ಪನಾಲೋಕದಲ್ಲಿ ವಿಹರಿಸುತ್ತಿರುತ್ತಾರೆ.
ಮತ್ತು ಆ ಭ್ರಮೆಗಳನ್ನೇ ವಾಸ್ತವ ಎಂದು ತಿಳಿದುಕೊಂಡಿರುತ್ತಾರೆ.
ಇದು ಪ್ರೇಮದ ಮೊದಲ ಹಂತ!#40PercentLove pic.twitter.com/AovyFUSwwa
— Karnataka Congress (@INCKarnataka) February 14, 2023