ಹಲವು ಕೊರತೆಗಳ ನಡುವೆಯೂ ಶಿಕ್ಷಣ ಬಯಸುವ ಮಕ್ಕಳ – ನಿತ್ಯ ಕಾಲ್ನಡಿಗೆ ಪಯಣ.

ನಂದಿಹಾಳ ಜೂ.22

ಮಾನ್ವಿ ತಾಲೂಕಿನ ಸಮೀಪದ ರಾಜಲದಿನ್ನಿ, ನಂದಿಹಾಳ ಗ್ರಾಮದ ನೂರಾರು ವಿದ್ಯಾರ್ಥಿಗಳು ಪ್ರೌಢ ಶಿಕ್ಷಣ ಹಾಗೂ ಕಾಲೇಜು ಶಿಕ್ಷಣಕ್ಕಾಗಿ ಮಾನ್ವಿ ಪಟ್ಟಣಕ್ಕೆ ನಿತ್ಯ ತಮ್ಮ ಗ್ರಾಮಗಳಿಂದ 2.5 ಕಿ.ಮೀ ದೂರದಿಂದ ಕಾಲ್ನಡಿಗೆ ಪ್ರಯಾಣ ಮಾಡಿ ನಂದಿಹಾಳ ಕ್ರಾಸಿನಿಂದ ಪಟ್ಟಣದ ಶಾಲಾ ಕಾಲೇಜುಗಳಿಗೆ ಬರ ಬೇಕಾದ ಪರಿಸ್ಥಿತಿ ನಿತ್ಯವೂ ನಡೆದಿದೆ.

ಪ್ರತಿ ದಿನ 80 ರಿಂದ 100 ವಿದ್ಯಾರ್ಥಿಗಳು ನಡೆದು ಕೊಂಡು ಬಂದು ವೇಗದ ಬಸ್ ನಿಲುಗಡೆ ಮಾಡದ ಕ್ರಾಸಲ್ಲಿ ಲೋಕಲ್ ಬಸ್ ಹತ್ತಿ ಶಾಲಾ ಕಾಲೇಜುಗಳಿಗೆ ತಡವಾಗಿ ಬರುತ್ತಿರುವುದರಿಂದ ಶಿಕ್ಷಕರಿಂದ ಹೊರಗೆ ನಿಲ್ಲುವ ಶಿಕ್ಷೆ ಜೊತೆಗೆ ಅಂದಿನ ಅರ್ಧ ಪಾಠ ಮಿಸ್ಸಾಗಿ ಕಲಿಕೆ ತೊಂದರೆ ಆಗುತ್ತಿದೆ ಎಂದು ವಿದ್ಯಾರ್ಥಿಗಳು ಹೇಳುವುದು ಮನ ಕಲುಕುತ್ತದೆ.

ಹಿಂದೆ ಮಾನ್ವಿ ಬಸ್ ಘಟಕದಿಂದ ಎರಡು ವರ್ಷಗಳ ಕಾಲ ಬಸ್ ಸಂಚಾರ ಆಗುತ್ತಿತ್ತು. ಆದರೆ ಹತ್ತಾರು ವರ್ಷದಿಂದ ಸ್ಥಗಿತ ಆದ ಕಾರಣ ಆಟೋ ದ್ವಿಚಕ್ರ ವಾಹನ ಅವಲಂಬನೆ ಇಲ್ಲವೇ ಕ್ರಾಸ್ ವರೆಗೆ ಪಾದಯಾತ್ರೆ ಮಾಡಿ ಸಮಯಕ್ಕೆ ಸರಿಯಾಗಿ ಇಲ್ಲದ ಬಸ್ ಹತ್ತಿ ಸಾರ್ವಜನಿಕರು ವಿದ್ಯಾರ್ಥಿಗಳು ಪಟ್ಟಣಕ್ಕೆ ಬರ ಬೇಕಾಗಿದೆ.

ಇಷ್ಟೇ ಅಲ್ಲದೇ ಬಂದ ಅಲ್ಪ ಮಳೆ ನಂಬಿ ಬೀಜ ಬಿತ್ತನೆ ಮಾಡಿ ಆಕಾಶ ನೋಡುತ್ತಾ ಕಂಗಾಲಾಗಿರುವ ರೈತರು ಪಂಪ್ ಸೈಟ್ ಮೂಲಕ ಅಷ್ಟೋ ಇಷ್ಟೋ ನೀರು ಬಳಕೆ ಮಾಡಿ ಕೊಂಡು ಬೆಳೆ ಉಳಿಸಿ ಕೊಳ್ಳಲು ಮುಂದಾಗಿದ್ದಾರೆ. ಆದರೆ ಜೇಸ್ಕಾಂ ಇಲಾಖೆಯ ಬೇಜವಾಬ್ದಾರಿ ತನಕ್ಕೆ ನಿತ್ಯ ಸರಿಯಾಗಿ ವಿದ್ಯುತ್ ಸರಬರಾಜು ಆಗುತ್ತಿಲ್ಲ. ಎರಡು ವಿದ್ಯುತ್ ಕಂಬ ಹಾಕ ಬೇಕಾದಲ್ಲಿ ಒಂದು ಕಂಬ ಹಾಕಿ ಉದ್ದ ವೈರ್ ಹಾಕಿದ ಕಾರಣ ಸ್ವಲ್ಪ ಗಾಳಿ ಬಿಟ್ಟರೆ ಅವಘಡ ಸಂಭವಿಸಿ ಪವರ್ ಕಟ್ ಆಗುತ್ತಿದೆ. ಇದನ್ನ ಇಲಾಖೆಯ ಗಮನಿಸಿ ಸಮಸ್ಯೆ ಪರಿಹಾರ ಮಾಡಬೇಕು ಜೊತೆಗೆ ಸ್ಥಗಿತ ಮಾಡಿದ ಬಸ್ ಸಂಚಾರ ವಿದ್ಯಾರ್ಥಿಗಳಿಗೆ ಅನುಕೂಲ ಆಗುವಂತೆ ಪುನಃ ಆರಂಭಿಸ ಬೇಕು ಎಂದು ಗ್ರಾಮದ ಮುಖಂಡರು ಸಾರ್ವಜನಿಕರು ವಿದ್ಯಾರ್ಥಿಗಳು ಶಾಸಕರು ಹಾಗೂ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button