ಗೌರವ ಡಾಕ್ಟರೇಟ್ ಪ್ರಶಸ್ತಿಗೆ ಭಾಜನರಾದ ಡಾ. ಸಾಹೀರಾಬಾನು ಹಂಡೆಬಂಡಿಯವರು
ಹೊಸಪೇಟೆ ಡಿಸೆಂಬರ್.31
ತಮಿಳುನಾಡಿನ ಹೊಸೂರು ನಗರದಲ್ಲಿರುವ ಹೋಟೆಲ್ ಹಿಲ್ಸ್ ನಲ್ಲಿ ಗೌರವ ಡಾಕ್ಟರೇಟ್ ಪ್ರಧಾನ ಸಮಾರಂಭವನ್ನು 30.ನೇ ಡಿಸೆಂಬರ್ 2023 ರಂದು ಹಮ್ಮಿಕೊಳ್ಳಲಾಗಿತ್ತು.

ಇವರು ಸತತವಾಗಿ 25 ವರ್ಷಗಳಿಂದ ಜನ ಸಾಮಾನ್ಯರಲ್ಲಿ ಬೆರೆತು ಅವರ ಕಷ್ಟಗಳನ್ನರಿತು, ದ್ವನಿಯಾಗಿ ನಿಂತು ಹಲವಾರು ಸಾಮಾಜಿಕ ಹೋರಾಟಗಳಲ್ಲಿ ಭಾಗಿಯಾಗಿ ಸಮಾಜ ಮುಖಿ ಕೆಲಸಗಳನ್ನು ಮಾಡುತ್ತಾ ಬಂದಿದ್ದು. ಇವರ ಸಾಮಾಜಿಕ ಸೇವೆಯ ಕ್ಷೇತ್ರದಲ್ಲಿ ಅವರ ಅಮೂಲ್ಯ ಕೊಡುಗೆಗಳನ್ನು ಗುರುತಿಸಿ. ಕೊಯಂಬುತ್ತೂರಿನ ಏಷ್ಯಾ ಅಂತರಾಷ್ಟ್ರೀಯ ಸಂಸ್ಕೃತಿ ಸಂಶೋಧನಾ ವಿಶ್ವ ವಿದ್ಯಾಲಯದ ಕುಲ ಪತಿಗಳು ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿ ಗೌರವಿಸಿ ಪ್ರಶಂಸಿಸಲಾಗಿದೆ. ಇದರಿಂದ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದ್ದು. ಹಲವು ಗಣ್ಯರು ಅಭಿನಂದಿಸಿದ್ದಾರೆ.ಒಟ್ಟು 45 ಜನರಿಗೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರಿಗೆ ಡಾಕ್ಟರೇಟ್ ಪದವಿಯನ್ನು ಪ್ರಧಾನ ಮಾಡಲಾಯಿತು.
ತಾಲೂಕ ವರದಿಗಾರರು: ಮಾಲತೇಶ್.ಶೆಟ್ಟರ್.ಹೊಸಪೇಟೆ