ಸಿದ್ದೇಶ್ವರ ಸ್ವಾಮೀಜಿ ಮೇಲೆ ಕವನವನ್ನು ರಚಿಸಿ ವಿಶ್ವ ದಾಖಲೆ ನಿರ್ಮಿಸಿದ ಮುತ್ತು
ವಿಜಯಪುರ ಮಾರ್ಚ್ : ವಿಜಯಪುರದ ಜ್ಞಾನ ಯೋಗಾಶ್ರಮದಲ್ಲಿ ರವಿವಾರದಂದು ಕನ್ನಡ ಬುಕ್ ಆಫ್ ರೆಕಾರ್ಡ್ಸ್ ಧಾರವಾಡ ಮತ್ತು ಯುನಿವರ್ಸಲ್ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ಸ್ ಚೆನ್ನೈ ಇವರ ಸಂಯುಕ್ತ ಆಶ್ರಯದಲ್ಲಿ ಶತಮಾನದ ಸಂತ ಜ್ಞಾನಯೋಗಿ ಪೂಜ್ಯ ಶ್ರೀ ಸಿದ್ದೇಶ್ವರ ಮಹಾ ಸ್ವಾಮಿಗಳಿಗೆ ” ಕವಿಗಳ ಕಾವ್ಯ ನಮನ “ಎಂಬ ವಿಶ್ವ ದಾಖಲೆಯ ಕಾರ್ಯಕ್ರಮದಲ್ಲಿ 20 ನಿಮಿಷ 23 ಸೆಕೆಂಡುಗಳಲ್ಲಿ ಒಟ್ಟಿಗೆ 236 ಕವಿಗಳು ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಮೇಲೆ ಕವನವನ್ನು ರಚಿಸಿ ವಿಶ್ವ ದಾಖಲೆ ನಿರ್ಮಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಾಗಲಕೋಟ ಜಿಲ್ಲೆಯ,ಹುನಗುಂದ ತಾಲೂಕಿನ ಹಿರೇಮಾಗಿಯ
ಶ್ರೀ ಮುತ್ತು.ಯ.ವಡ್ಡರ ಇವರಿಗೆ ಆಶ್ರಮದ ಪೂಜ್ಯಶ್ರೀ ಬಸವಲಿಂಗ ಮಹಾಸ್ವಾಮಿಗಳು ವಿಶ್ವ ದಾಖಲೆಯ ಎರಡು ಪ್ರಮಾಣ ಪತ್ರಗಳನ್ನು ವಿತರಿಸಿದರು.


ಕಾರ್ಯಕ್ರಮದಲ್ಲಿ ಆಶ್ರಮದ ಪೂಜ್ಯಶ್ರೀ ಶ್ರದ್ಧಾನoದ ಮಹಾಸ್ವಾಮಿಗಳು, ಮಂಜುನಾಥ್ ಬಾರಕೇರ, ಸದಾನಂದ ಏಳಗoಟಿ,ವಿ.ಸಿ. ನಾಗಠಾಣ, ಡಾ. ವಿ.ಡಿ. ಐಹೊಳೆ, ಬಿ ವಿ ಪಟ್ಟಣಶೆಟ್ಟಿ ಸೇರಿದಂತೆ ಅನೇಕ ಗಣ್ಯ ಮಾನ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಇನ್ನುಳಿದಂತೆ ಹಲವಾರು ಕವಿಗಳು ಪೂಜ್ಯಶ್ರೀಗಳಿಗೆ ಕವನ ನಮನ ಸಲ್ಲಿಸಿದರು.
ಕವನ ರಚನೆ:ಮುತ್ತು ಯ ವಡ್ಡರ