ಕನಸಿನ ಸುಂದರಿ
ಬರೆದೆನು ಹೃದಯದಿ ಮನದ ಪ್ರೀತಿಯ ಓಲೆ
ಸುಮ್ಮನಿದ್ದ ನನ್ನಲ್ಲಿ ಎಬ್ಬಿಸಿದೆ ನೀ ಪ್ರೇಮದಲೆ
ಪ್ರೀತಿಯ ಒಪ್ಪಿಕೋ ರಂಗಿನ ಅರಮನೆಯ ಕೋಮಲೆ
ತಿರಸ್ಕರಿಸಿದರೆ ಒಂದು ವೇಳೆ ನಾನು ಜೀವಂತ ಕೊಲೆ…
ಕನಸಲಿ ಬಂದು ಬಡಿದೆಬ್ಬಿಸಿ ಮಾಯವಾಗಿ ಹೋದವಳೇ
ಎಷ್ಟು ಕಾಡುವೆ,ಕಣ್ಣ ಮುಂದೆ ಬಾರದೆ ಬಚ್ಚಿಕೊಂಡವಳೆ
ಸುಮ್ಮನೆ ತಿರುಗಿ ನೋಡಿ ಮುಗುಳುನಗೆ ನಕ್ಕವಳೆ
ಎದೆಯ ಬಾಗಿಲ ನೂಕಿ
ಹೃದಯದಿ ಬಲಗಾಲ ಇಟ್ಟವಳೆ…

ಪ್ರೀತಿಸುವೆ ನಾ ಅಂಬರದ ಚಂದಿರನಂತೆ
ನಕ್ಕು ನಲಿದೆ ಮನೆಯ ಮುಂದಿನ ರಂಗೋಲಿಯಂತೆ
ಪ್ರೀತಿಸೋಣ ದುಂಬಿಯು ತುಸು ನಾಚುವಂತೆ
ಸ್ಪೂರ್ತಿಯಾಗೋಣ ಪ್ರೇಮಿಗಳಾಗಿ ಲೈಲಾ ಮಜುನುವಂತೆ…
ಮುಂಗುರುಳಿನ ಕೃಷ್ಣಸುಂದರಿ ಕ್ಷಣವು ಬಿಟ್ಟಿರದ ಪ್ರೇಮ ಮಯೂರಿ
ಪ್ರೀತಿಸದಿದ್ದರೂ ಪ್ರೇಮಿಸುವೆ ನಾ ಪ್ರೇಮ ಪೂಜಾರಿ
ಮರೆತರೂ ನೆನಪಾಗುವೆ ಓ ಕನ್ನಡದ ಕುವರಿ….
ಜೊತೆಗಿದ್ದರೇ ನೀ ಪ್ರೀತಿಯ ಅಕ್ಕರೆ
ನೋಡುತಲಿದ್ದರೆ ತಿಂದಷ್ಟೇ ಸಿಹಿ ಸಕ್ಕರೆ
ಶುಭ ಗಳಿಗೆಯಲಿ ನೀ ನನಗೆ ಸಿಕ್ಕರೆ
ತಾಳಿ ಕಟ್ಟುವೆ ಓ ಮಲೆನಾಡಿನ ಕೊಕ್ಕರೆ…..
ರಚನೆ:ಮುತ್ತು.ಯ.ವಡ್ಡರ (ಶಿಕ್ಷಕರು)
ಬಾಗಲಕೋಟ