ಪಕ್ಷೇತರ ಅಭ್ಯರ್ಥಿಯಾಗಿ ದೋರನಾಳು ಪರಮೇಶ್ ನಾಮಪತ್ರ ಸಲ್ಲಿಕೆ
ತರೀಕೆರೆ ಏ.19

ವೀರಶೈವ ಸಮಾಜದ ಮತಗಳೆ ತರೀಕೆರೆ ಕ್ಷೇತ್ರದಲ್ಲಿ ಹೆಚ್ಚಾಗಿರುತ್ತದೆ. ನಾನು ವೀರಶೈವ ಸಮಾಜಕ್ಕೆ ಸೇರಿದವನಾಗಿರುತ್ತೇನೆ ಎಂದು ದೋರನಾಳು ಪರಮೇಶ್ ರವರು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು. ಕಳೆದ 15 ವರ್ಷಗಳಿಂದಲೂ ಪಕ್ಷ ನಿಷ್ಠೆಯಿಂದ ಕೆಲಸ ಮಾಡಿದ್ದೇನೆ.
ಕಾಂಗ್ರೆಸ್ ಪಕ್ಷವು ಕೊಟ್ಟಂತ ಎಲ್ಲಾ ಜವಾಬ್ದಾರಿಗಳನ್ನ ನಿರ್ವಹಿಸಿರುತ್ತೇನೆ. ಪಕ್ಷಕ್ಕೆ ಅರ್ಜಿ ಸಲ್ಲಿಸಿ ನಾನು ಆಕಾಂಕ್ಷಿಯಾಗಿರುವುದನ್ನು ತಿಳಿಸಿರುತ್ತೇನೆ. ಆದರೂ ಕಾಂಗ್ರೆಸ್ ಪಕ್ಷ ನನಗೆ ಟಿಕೆಟ್ ಕೊಡಲಿಲ್ಲ ಆದಕಾರಣ ನಾನು ಕಾಂಗ್ರೆಸ್ ಬಂಡಾಯ ಪಕ್ಷೇತರ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿರುತ್ತೇನೆ. ಎಲ್ಲಾ ಜಾತಿ ಮುಖಂಡರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು ಎಲ್ಲರ ಕಷ್ಟ ಸುಖಕ್ಕೆ ಸ್ಪಂದಿಸಿ ಕೆಲಸ ಮಾಡಿರುತ್ತೇನೆ ಎಂದು ಹೇಳಿದರು. ತರೀಕೆರೆ 126 ಚುನಾವಣಾ ಅಧಿಕಾರಿ ಸಿದ್ದಲಿಂಗಾರೆಡ್ಡಿರವರಿಗೆ ನಾಮಪತ್ರ ನೀಡಿರುತ್ತೇನೆ. ಸೂಚಕರಾಗಿ ಬಿವಿ ತಿಪ್ಪೇಶಪ್ಪ ವಿರೂಪಾಕ್ಷಪ್ಪ ಹಾಗೂ ದೋರನಾಳು ಗ್ರಾಮ ಪಂಚಾಯಿತಿ ಸದಸ್ಯರಾದ ಕರುಣ ಹಾಗೂ ಸ್ನೇಹಿತರು ಹಿತೈಷಿಗಳು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ