ಮತದಾನ ಮಾಡಿ ದೇಶದ ಪ್ರಗತಿಗೆ ಕೈಜೋಡಿಸಿ
ತರೀಕೆರೆ ಏ.19
ಎಲ್ಲರೂ ಮತದಾನ ಮಾಡಿ ದೇಶದ ಪ್ರಗತಿಗೆ ಕೈಜೋಡಿಸಬೇಕು ಎಂದು ಸಹಾಯಕ ಚುನಾವಣಾ ಅಧಿಕಾರಿಯದ ತಹಸಿಲ್ದಾರ್ ಸಿ ಎಸ್ ಪೂರ್ಣಿಮಾ ರವರು ಭಾರತ ಚುನಾವಣಾ ಆಯೋಗ ಮತ್ತು ತಾಲೂಕು ಆಡಳಿತ, ತಾಲೂಕು ಸ್ವೀಪ್ ಸಮಿತಿ, ವಿವಿಧ ಇಲಾಖೆಗಳ ಸಂಘ ಸಂಸ್ಥೆಗಳ ಸಹಭಾಗಿತ್ವದೊಂದಿಗೆ ಮತದಾನ ಜಾಗೃತಿ ಅಭಿಯಾನ ಜಾಥಾವನ್ನು ಹಸಿರು ನಿಶಾನೆ ತೋರಿಸಿ ಉದ್ಘಾಟನೆಮಾಡಿ ಮಾತನಾಡಿದರು. ಪ್ರತಿ ಬಾರಿಯೂ ಚುನಾವಣೆ ನಡೆದಾಗ ಶೇಕಡ 70% ಮತದಾನವಾಗುತ್ತಿತ್ತು.

ಈ ಬಾರಿ 2023ರ ಚುನಾವಣೆಯಲ್ಲಿ ಶೇಕಡ 100% ಮತದಾನ ವಾಗಬೇಕೆಂದು ಜಾಗೃತಿ ಮೂಡಿಸುವುದೇ ಈ ಜಾಥಾದ ಉದ್ದೇಶ ಎಂದು ಹೇಳಿದರು . ಸ್ವೀಪ್ ಸಮಿತಿ ಅಧ್ಯಕ್ಷರಾದ ತಾಲೂಕು ಕಾರ್ಯ ನಿರ್ವಹಣಾಧಿಕಾರಿ ಗೀತಾ ಶಂಕರ್ ರವರು ಮಾತನಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ದೊರೆಗಳು ಮತದಾನವನ್ನು ಹಬ್ಬದಂತೆ ನಡೆಸಬೇಕು ಎಂದು ಹೇಳಿ ಪ್ರತಿಜ್ಞಾವಿಧಿ ಬೋಧಿಸಿದರು. ತಾಲೂಕು ಪಂಚಾಯಿತಿ ಸಿಬ್ಬಂದಿ ವರ್ಗ ಮತ್ತು ಎಲ್ಲಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಹಾಗೂ ಕಸ ಸಂಗ್ರಹಣೆ ಮಾಡುವ ಸ್ವಚ್ಛ ಭಾರತ್ ವಾಹನಗಳೊಂದಿಗೆ ಭಾಗವಹಿಸಿದ್ದರು.
ಪುರಸಭೆಯ ಮುಖ್ಯ ಅಧಿಕಾರಿ ಹೆಚ್ ಮಹಾಂತೇಶ್ ಮತ್ತು ಸಿಬ್ಬಂದಿ ವರ್ಗ ಪೌರಕಾರ್ಮಿಕರು ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಚಿದಾನಂದಪ್ಪ, ಮತ್ತು ಸಿಬ್ಬಂದಿ ವರ್ಗ, ಸಿ ಡಿ ಪಿ ಓ ಜ್ಯೋತಿಲಕ್ಷ್ಮಿ ಮತ್ತು ಸಿಬ್ಬಂದಿ ವರ್ಗ, ಅಂಗನವಾಡಿ ಕಾರ್ಯಕರ್ತರು, ತಾಲೂಕು ಆರೋಗ್ಯ ಅಧಿಕಾರಿ ಡಾ. ಚಂದ್ರಶೇಖರ್ ಹಾಗೂ ಸಿಬ್ಬಂದಿ ವರ್ಗ, ಆರೋಗ್ಯ ನಿರೀಕ್ಷಣಾಧಿಕಾರಿಗಳು, ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಎಸ್ ಮಂಜುನಾಥ್ ಮತ್ತು ಸಿಬ್ಬಂದಿ ವರ್ಗ, ಕ್ಷೇತ್ರ ಶಿಕ್ಷಣಾಧಿಕಾರಿ ಗೋವಿಂದಪ್ಪ ಹಾಗೂ ಸಿಬ್ಬಂದಿ ವರ್ಗ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ರಮೇಶ್ ಮತ್ತು ಸಿಬ್ಬಂದಿ ವರ್ಗ, ತೋಟಗಾರಿಕೆ ಸಹಾಯಕ ನಿರ್ದೇಶಕರಾದ ಯತಿರಾಜ್ ಹಾಗೂ ಸಿಬ್ಬಂದಿ ವರ್ಗ, ಎಲ್ಲಾ ಇಲಾಖಾ ಸಿಬ್ಬಂದಿಗಳು ಜಾಥಾ ದಲ್ಲಿ ಭಾಗವಹಿಸಿದ್ದರು.
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ