ವಿಜಯನಗರ ಜಿಲ್ಲೆ ರಂಗೇರಿದ ರಾಜಕೀಯ ಬಿಜೆಪಿ ಅಭ್ಯರ್ಥಿ ‘ಸಿದ್ದಾರ್ಥ್ ಸಿಂಗ್’ನಾಮಪತ್ರ ಸಲ್ಲಿಕೆ

ಹೊಸಪೇಟೆ ಏ.19

ದಿನಾಂಕ 19/04/2023 ರಂದು ಸಿದ್ದಾರ್ಥ್ ಸಿಂಗ್ ಕುಟುಂಬ ಸಮೇತವಾಗಿ ಹಂಪಿ ಶ್ರೀ ವಿರೂಪಾಕ್ಷ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ಪುನೀತ್ ರಾಜಕುಮಾರ್ ಕ್ರೀಡಾಂಗಣದಲ್ಲಿ ಸೇರಿದ ಬಿಜೆಪಿ ಕಾರ್ಯಕರ್ತರು ಬೃಹತ್ ಜನಸಾಗರ ನಡುವೆ ಆರಂಭಗೊಂಡ ಬಿಜೆಪಿ ಘೋಷಣೆಗಳನ್ನು ಹಾಕುತ್ತಾ ಉರಿಬಿಸಿಲಿನಲ್ಲಿ ಸಿದ್ದಾರ್ಥ್ ಸಿಂಗ್ ನಾಮಪತ್ರ ಸಲ್ಲಿಸಲು ಬೃಹತ್ ರೋಡ್ ಶೋ ಮೆರವಣಿಗೆ ಮುಖಾಂತರ ಸಹಾಯಕ ಆಯುಕ್ತ ಕಚೇರಿಗೆ ತೆರಳಿ ಅಪಾರ ಬೆಂಬಲಿಗರೊಂದಿಗೆ ಆಗಮಿಸಿ ನಾಮಪತ್ರವನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಮೆರವಣಿಗೆ ವೇಳೆ ಎತ್ತಿನ ಬಂಡಿಯಲ್ಲಿ ಆಗಮಿಸಿದ ಸಿದ್ದಾರ್ಥ್ ಸಿಂಗ್ ಸಣ್ಣ ಅವಘಡ ಸಂಭವಿಸಿತು ಈ ಸಂದರ್ಭದಲ್ಲಿ ಯಾವುದೇ ರೀತಿ ಅಪಾಯ ಸಂಭವಿಸಿಲ್ಲ ಎತ್ತಿನ ಬಂಡಿಯ ಸುತ್ತ ಇದ್ದ ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಜೋಡು ಎತ್ತುಗಳು ಹೆದರಿ ಜಿಗಿತ ರಭಸಕ್ಕೆ ಜನರು ಚದುರಿ ಹೋದರು. ಈ ವೇಳೆ ವಿವೇಕ್ ಎಂಬ ಪೋಲೀಸ್ ಪೇದೆಗೆ ಸಣ್ಣಪುಟ್ಟ ಗಾಯಗಳಾದ ಘಟನೆ ನಡೆಯಿತು.


ಕಚೇರಿಯಿಂದ ಆಗಮಿಸಿದ ಸಿದ್ದಾರ್ಥ್ ಸಿಂಗ್ ಮಾತನಾಡಿದರು ನಾನು ಎಲ್ಲಾ ಸಮಾಜದ ಮುಖಂಡರು ಜೊತೆ ಆಗಮಿಸಿ ಮತದಾರರು ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿ ನಾನು ಚುನಾವಣೆಯಲ್ಲಿ ಗೆದ್ದು ಶಾಸಕನಾದ ನಂತರ ವಿಜಯನಗರ ಕ್ಷೇತ್ರವನ್ನು ಒಂದು ಮಾದರಿ ಕ್ಷೇತ್ರವನ್ನಾಗಿ ಅಭಿವೃದ್ಧಿ ಪಡೆಸುತ್ತೇನೆ. ವಿಜಯನಗರ ಜನ ಮತ ಹಾಕುತ್ತಾರೆ ಎಂಬ ನಂಬಿಕೆ ಯಿದೆ. ನಮ್ಮ ಕ್ಷೇತ್ರವನ್ನು ಒಳ್ಳೆ ಮಾದರಿ ಮಾಡಬೇಕು ಎಂಬ ಕನಸಿದೆ ಎಂದರು ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ಮಾಡುವ ಸಲುವಾಗಿ ಜನರು ನನಗೆ ಆಶೀರ್ವಾದಿಸುತ್ತಾರೆ ಎಂದು ಹೇಳಿದರು. ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಸಂಚಾರ ಮಾಡಿದ್ದೇನೆ ಆಧುನಿಕ ಕಾಲದಲ್ಲಿ ಸಾಮಾಜಿಕ ಕಾಳಜಿಯನ್ನು ಯುವಕರು ತಿಳಿದುಕೊಳ್ಳಬೇಕು, ಹಣ ಬಲ ನಮ್ಮ ಬಳಿ ಇಲ್ಲ, ಮನಸ್ಸು ಗೆಲ್ಲುವ ಪ್ರಯತ್ನ ಮಾತ್ರ ನಮ್ಮದಷ್ಟೇ ಯುವಕನಿದ್ದೇನೆ ಸಾಮಾಜಿಕ ಕಾಳಜಿ ಇದೆ. 50 ಸಾವಿರ ಮತಗಳಿಂದ ಗೆಲ್ಲುವ ಗುರಿಯನ್ನು ಹೊಂದಿದ್ದೇನೆ ಮುಂದಿನದು ವಿಜಯನಗರದ ಜನರು ನಿರ್ಧರಿಸುತ್ತಾರೆ. ಅಲ್ಪಸಂಖ್ಯಾತರು ನನ್ನನ್ನು ಬೆಂಬಲಿಸುತ್ತಾರೆ ಎಂಬ ನಂಬಿಕೆಯಿದೆ.

ತಾಲೂಕ ವರದಿಗಾರರು:ಮಾಲತೇಶ. ಶೆಟ್ಟರ್ ಹೊಸಪೇಟೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button