ಬಿಜೆಪಿ ಬಂಡಾಯ ಪಕ್ಷೇತರ ಅಭ್ಯರ್ಥಿ ನಾಮಪತ್ರ ಸಲ್ಲಿಕೆ: ಅಚ್ಚರಿ ಮೂಡಿಸಿದ ಬಂಗಾರು ನಡೆ
ಕೂಡ್ಲಿಗಿ ಏ.19

ಕೂಡ್ಲಿಗಿ ಕ್ಷೇತ್ರದಲ್ಲಿ ಬುಧವಾರ ನಡೆದ ಉಮೇದುವಾರಿಕೆಸಲ್ಲಿಕೆ ವೇಳೆ ಮುಖಂಡ ಬ೦ಗಾರು ಹನುಮಂತು ಅವರು ಚುನಾವಣಾಧಿಕಾರಿ ಕಚೇರಿಗೆ ಆಗಮಿಸಿ ಅಧಿಕಾರಿ ಈರಣ್ಣ ಬಿರಾದರ್ ಹಾಗೂ ತಹಸಿಲ್ದಾರ್ ಸಮ್ಮುಖದಲ್ಲಿ ಬಂಡಾಯ ಬಿಜೆಪಿಯಿ೦ದ ಬಂಗಾರು ಹನುಮಂತು ಹಾಗೂ ಅವರ ಬೆಂಬಲಿಗರು ನಾಮಪತ್ರ ಸಲ್ಲಿಸಿದರು. ಆ ಮೂಲಕ ಬಿಜೆಪಿ ಪಾಳೇಯದಲ್ಲಿ ಬಂಗಾರು ಹನುಮಂತು ನಡೆ ಅಚ್ಚರಿ ಮೂಡಿಸಿತು. ಬಿಜೆಪಿಯಿಂದ ಬೆಳಗ್ಗೆ 11 ಗಂಟೆಗೆ ಲೋಕೇಶ್ ವಿ. ನಾಯಕ ನಾಮಪತ್ರ ಸಲ್ಲಿಸಿ ತೆರಳಿದ ನಂತರ, ಮಧ್ಯಾಹ್ನ 2 ಗಂಟೆ ಸಮಯದಲ್ಲಿ ಬಂಗಾರು ಹನುಮ೦ತು ಅವರು ತಮ್ಮ ಬೆಂಬಲಿಗರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಜಿಲ್ಲಾ ವರದಿಗಾರರು:ರಾಘವೇಂದ್ರ ಸಾಲುಮನೆ ಕೂಡ್ಲಿಗಿ