ಶ್ರೀ ರೇವಣಸಿದ್ದೇಶ್ವರ ಏತನೀರಾವರಿ ತ್ವರಿತ ಅನುಷ್ಠಾನಕ್ಕೆ ಜೆಡಿಎಸ್ ಬೆಂಬಲಿಸಿ …
ಹೊರ್ತಿ (ಮೇ.4) :
ವಿಜಯಪೂರ ಜಿಲ್ಲೆಯ ಇಂಡಿ ತಾಲೂಕಿನ ಹೊರ್ತಿ ಗ್ರಾಮದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ ಹಾಗೂ ಪಕ್ಷ ಸೇರ್ಪಡೆ ಸಮಾರಂಭದಲ್ಲಿ ಭಾಗವಹಿಸಿ , ಮಾಜಿ ವಿಧಾನ ಪರಿಷತ್ ಸದಸ್ಯ ಬಿ ಜಿ ಪಾಟೀಲ ಹಲಸಂಗಿ ಮಾತನಾಡುತ್ತಾ ಜೆಡಿಎಸ್ ಪಕ್ಷ ಯಾವ ಯಾವ ಸಂದರ್ಭದಲ್ಲಿ ಅಧಿಕಾರಕ್ಕೆ ಬಂದಿದ್ದಿಯೊ ಆಯಾ ಸಂದರ್ಭದಲ್ಲಿ ರೈತಪರವಾದ ಹಾಗೂ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಶ್ರಮಿಸಿದ್ದು,ಸದ್ಯದ ಶ್ರೀ ರೇವಣಸಿದ್ದೇಶ್ವರ ಏತನೀರಾವರಿ ಯೋಜನೆಯನ್ನು ಅನುಮೋದಿಸಿದ್ದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು ಎಂಬುದು ತಿಳಿಯಬೇಕು ಎಂದು ಮಾತನಾಡಿದರು.

ಮಾಜಿ ಶಾಸಕರಾದ ಶ್ರೀರವಿಕಾಂತ ಪಾಟೀಲ ಮಾತನಾಡುತ್ತಾ ಬಿ ಡಿ ಪಾಟೀಲರು ವಿಶೇಷವಾಗಿ ನೀರಾವರಿ ಹೋರಾಟಗಾರ ಮತ್ತು ಬಡವರ ಬಗ್ಗೆ ಅಪಾರವಾದ ಕಳಕಳಿಯನ್ನು ಹೋಂದಿದ್ದು ಹಂತವರು ಚುನಾಯಿಸಬೇಕು ಎಂದು ಮಾತನಾಡಿದರು.ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶಿವಯೋಗಪ್ಪ ನೇದಲಗಿ ಮಾತನಾಡುತ್ತಾ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು ಪಂಚರತ್ನ ಯೋಜನೆಯನ್ನು ಅನುಷ್ಠಾನಕ್ಕೆ ತರಲು ದೃಢಸಂಕಲ್ಪ ಮಾಡಿದ್ದಾರೆ.ಜೆಡಿಎಸ್ ಅಭ್ಯರ್ಥಿ ಬಿ ಡಿ ಪಾಟೀಲರು ಹಣದಿಂದ ಬಡವರಾಗಿದ್ದು ಆದರೆ ಹೃದಯ ಶ್ರೀಮಂತಿಕೆ ಹೊಂದಿರುವ ವ್ಯಕ್ತಿ ಎಂದು ಮಾತನಾಡಿದರು.ಜೆ

ಜೆಡಿಎಸ್ ಮುಖಂಡರಾದ ಅಕ್ತರ ಪಟೇಲ್,ಮುಖಂಡ ನಾಗೇಶ ತಳಕೇರಿ, ಶ್ರೀ ಶೈಲಗೌಡ ಪಾಟೀಲ,ಅಯೋಬ ನಾಟೀಕರ ಮಾತನಾಡಿದರು.ವೇದಿಕೆಯ ಮೇಲೆ ಮುಖಂಡರಾದ ವೀರಾಜ ಪಾಟೀಲ, ಲಕ್ಷ್ಮಣ ಸಾವಳಗಿ, ಬಸವರಾಜ ಶಿವುರ, ಶ್ರೀಮಂತ ಪೂಜಾರಿ, ಮಲ್ಲಪ್ಪ ಶಿರಶ್ಯಾಡ,ಬಿ ಬಿ ಪಾಟೀಲ,ಕಾಂತು ಇಂಚಗೇರಿ,ಬಸಗೋಂಡ ಪಾಟೀಲ, ಸದ್ದಾಂ ಅರಬ್, ಜಬ್ಬಾರ್ ಅಣ್ಣಾ ಅರಬ್, ಸಿದ್ದು ಡಂಗಾ, ರೇವಣಸಿದ್ದ ಗೋಡಕೆ, ಎಮ್ ಬಿ ಮಾಣಿಕ , ಇಕ್ಬಾಲ್ ಪಠಾಣ,ಸಿದ್ದರಾಯ ಅರಳಗುಂಡಗಿ,ಶರಣಗೌಡ ಪಾಟೀಲ ಸಂತೋಷ ತಳಕೇರಿ,ಡಾ ರಮೇಶ ರಾಠೋಡ, ಅಣ್ಣಪ್ಪಗೌಡ ಪಾಟೀಲ, ಈಶ್ವರಪ್ಪ ಪೂಜಾರಿ,ಅಮಸಿದ್ದಗೌಡ ಲೋಣಿ,ಚಾಂದ್ ಮುಲ್ಲಾ, ಶಿವಪ್ಪಾ ತಳಕೇರಿ,ಸೈಪನ್ ಮುಲ್ಲಾ, ಮುಂತಾದ ನಾಯಕರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು: ಬೀ.ಎಸ್.ಹೊಸೂರ್.ವಿಜಾಪೂರ …….