ಹಗರಿಬೊಮ್ಮನಹಳ್ಳಿ ಎಸ್ ಸಿ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್ ,ಬಿಜೆಪಿ,ಜೆಡಿಎಸ್ ಮಧ್ಯೆ ತ್ರಿಕೋನ ಸ್ಪರ್ಧೆ ….
ಹಗರಿಬೊಮ್ಮನಹಳ್ಳಿ (ಮೇ.4) :
2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಮೇ 10ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ. ಸದ್ಯ ಎಲ್ಲಾ ಪಕ್ಷಗಳು ಮತ್ತು ಅಭ್ಯರ್ಥಿಗಳು ಮತಬೇಟೆಯಲ್ಲಿ ನಿರತರಾಗಿದ್ದಾರೆ.ಬಾರಿ ರಾಜ್ಯದ ಹೈ-ವೋಲ್ಟೇಜ್ ಕ್ಷೇತ್ರಗಳಲ್ಲಿ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿಯೂ ಒಂದು.ಸದ್ಯ ಕಾಂಗ್ರೆಸ್ ಹತೋಟಿಯಲ್ಲಿರುವ ಈ ಕ್ಷೇತ್ರದಲ್ಲಿ ಹಿಡಿತ ಸಾಧಿಸಲು ಬಿಜೆಪಿ ಮತ್ತು ಜೆಡಿಎಸ್ ಪೈಪೋಟಿ ನಡೆಸುತ್ತಿವೆ. ಹೀಗಾಗಿ ಅಭಿವೃದ್ಧಿಯಲ್ಲಿ ಹಿಂದೆ ಉಳಿದಿರುವ ಹಗರಿಬೊಮ್ಮನಹಳ್ಳಿಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.ಹಗರಿಬೊಮ್ಮನಹಳ್ಳಿಯಲ್ಲಿ ಕಾಂಗ್ರೆಸ್ ಪಕ್ಷದ ಎಸ್ ಭೀಮಾ ನಾಯ್ಕ್ ಅವರು ಹಾಲಿ ಶಾಸಕರಾಗಿದ್ದು, 2023ರ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಕೈ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಇನ್ನು ಬಿಜೆಪಿ ಅಭ್ಯರ್ಥಿಯಾಗಿ ಬಿ ರಾಮಣ್ಣ ಅಖಾಡಕ್ಕಿಳಿದಿದ್ದರೆ,ಜೆಡಿಎಸ್‌ನಿಂದ ನೇಮಿರಾಜ್ ನಾಯ್ಕ್ ಸ್ಪರ್ಧಿಸುತ್ತಿದ್ದಾರೆಎಸ್ ಭೀಮಾ ನಾಯ್ಕ್ – ಕಾಂಗ್ರೆಸ್ಅವಿಭಜಿತ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಎಸ್‌ಸಿ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸತತ ಎರಡು ಬಾರಿ ಗೆದ್ದಿರುವ ಎಸ್ ಭೀಮಾ ನಾಯ್ಕ್ ಕ್ಷೇತ್ರದಲ್ಲಿ ಹಿಡಿತ ಸಾಧಿಸಿದ್ದಾರೆ.

2018ರಲ್ಲಿ 78,337 ಮತಗಳನ್ನು ಪಡೆದು ಸಮೀಪದ ಸ್ಪರ್ಧಿ ಬಿಜೆಪಿ ಅಭ್ಯರ್ಥಿ ಕೆ ನೇಮಿರಾಜ ನಾಯ್ಕ್ ಅವರನ್ನು ಸೋಲಿಸಿದ್ದರು.ಈ ಬಾರಿ ಹತ್ತು ವರ್ಷದಲ್ಲಿ ದುಡಿದ ಎಸ್ ಭೀಮ ನಾಯಕ್ ಈಗ ಪಟ್ಟಣ ಪಂಚಾಯತಿ ಸದಸ್ಯರಿಗೆ ಹಾಗೂ ಗ್ರಾಮ ಪಂಚಾಯತಿ ಸದಸ್ಯರು ಮತ್ತು ಮಾಜಿ ಸದಸ್ಯರಿಗೆ ಕ್ರಮವಾಗಿ 10 ಲಕ್ಷ 5 ಲಕ್ಷ 3 ಲಕ್ಷ ಈ ರೀತಿ ನೀಡುತ್ತಾ ಬಂದಿದ್ದಾರೆ. ಇನ್ನು ಕೆಲ ಮುಖಂಡರಿಗೆ ಲಕ್ಷಗಟ್ಟಲೆ ಸುರಿದಿದ್ದಾರೆ ಎಂದು ಸಾರ್ವಜನಿಕರು ಮೆಲುಕು ಹಾಕುತ್ತಿದ್ದಾರೆ ಹಾಗೂ ಕೆಲವೊಂದು ಸುದ್ದಿ ಮಾಧ್ಯಮಗಳಲ್ಲಿ ಎರಡು ಲಕ್ಷ ಲಂಚ ಪಡೆದಿರುವುದು ಮನದಲ್ಲಿ ಇದೆ.ಹತ್ತು ವರ್ಷದ ಅವಧಿಯಲ್ಲಿ ಹಗರಿಬೊಮ್ಮನಹಳ್ಳಿ ಕ್ಷೇತ್ರ ವ್ಯಾಪ್ತಿಗೆ ಬರುವ ಕೊಟ್ಟೂರು ಮರೆಮನಹಳ್ಳಿ ಹಗರಿಬೊಮ್ಮನಹಳ್ಳಿ ಎಂಬ ಮೂರು ಭಾಗ ಮಾಡಿ ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಹಚ್ಚಿದ್ದಾರೆ ಎಂದು ಕೆಲಸ ಸಂಭ್ರಮ ರಂಗಗಳಲ್ಲಿ ಸಾರ್ವಜನಿಕರು ನೇರವಾಗಿ ಪ್ರಶ್ನೆ ಮಾಡಿದ್ದು ಕಂಡಿದ್ದೇವೆ. ಹಾಗೂ ಇವರು ಸಭೆ ಸಮಾರಂಭಗಳಲ್ಲಿ ಕೋಟಿಗಟ್ಟಲೆ ಕೋಟಿ ಸುಳ್ಳುಗಳನ್ನು ಹೇಳುತ್ತಾ ಬರುತ್ತಾರೆ ಇವರು ಮಹಾ ಗರ್ವಿ ಎಂದು ಸಾರ್ವಜನಿಕರ ಮನೆ ಮಾತಾಗಿದೆ ಹೀಗಾಗಿ ಎಷ್ಟರಮಟ್ಟಿಗೆ ಸಾರ್ವಜನಿಕರ ಮನ ಗೆಲ್ಲುತ್ತಾರೆ ಎಂಬುದು ಕಾದು ನೋಡಬೇಕಾಗಿದೆ.ಇದಕ್ಕೂ ಮುನ್ನ 2013ರಲ್ಲಿ ಆಗ ಜೆಡಿಎಸ್‌ನಲ್ಲಿದ್ದ ಭೀಮಾ ನಾಯ್ಕ್ ಅವರು ನೇಮಿರಾಜ ನಾಯ್ಕ್ ವಿರುದ್ಧ ಕೇವಲ 125 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಇದೀಗ ಮತ್ತೊಂದು ಬಾರಿ ಸ್ಪರ್ಧಿಸಿರುವ ಭೀಮಾ ನಾಯ್ಕ್‌ಗೆ ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳಿಂದ ದೊಡ್ಡ ಪೈಪೋಟಿ ನಿರೀಕ್ಷಿಸಲಾಗಿದೆ.ಬಿ. ರಾಮಣ್ಣ – ಬಿಜೆಪಿಇನ್ನು ಹಗರಿಬೊಮ್ಮನಹಳ್ಳಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಹೊಸ ಮುಖ ಬಿ. ರಾಮಣ್ಣ ಸ್ಪರ್ಧಿಸಿದ್ದಾರೆ. ಈ ಬಾರಿ ನೇಮಿರಾಜ್ ನಾಯ್ಕ್ ಬದಲಾಗಿ ಬಿ. ರಾಮಣ್ಣಗೆ ಮಣೆ ಹಾಕಲಾಗಿದೆ. ಬಲ್ಲಾಹುಣ್ಸಿ ರಾಮಣ್ಣ ಅವರು ಜಿಲ್ಲಾ ದಿಶಾ ಸಮಿತಿ ಸದಸ್ಯರಾಗಿದ್ದಾರೆ.ಎರಡು ಬಾರಿ ಲಂಬಾಣಿ ಸಮುದಾಯದ ನೇಮಿರಾಜ ನಾಯ್ಕ್ ಅವರಿಗೆ ಟಿಕೆಟ್ ನೀಡಿದ್ದ ಬಿಜೆಪಿ, ಇದೀಗ ಮಾದಿಗ ಸಮುದಾಯಕ್ಕೆ ಸೇರಿರುವ ಬಲ್ಲಾಹುಣ್ಸಿ ರಾಮಣ್ಣಗೆ ಟಿಕೆಟ್ ನೀಡಿದೆ. ಕಾಂಗ್ರೆಸ್ ಅಭ್ಯರ್ಥಿಗೆ ಕಠಿಣ ಸ್ಪರ್ಧೆ ಒಡ್ಡುವ ಮುನ್ಸೂಚನೆ ನೀಡಿದ್ದಾರೆ.ನೇಮಿರಾಜ ನಾಯ್ಕ್ – ಜೆಡಿಎಸ್2013 ಮತ್ತು 2018ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನೇಮಿರಾಜ ನಾಯ್ಕ್ ಅವರಿಗೆ ಈ ಬಾರಿ ಟಿಕೆಟ್ ನಿರಾಕರಿಸಲಾಗಿದೆ. ಹೀಗಾಗಿ ನೇಮಿರಾಜ ನಾಯ್ಕ್ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. 2008ರಲ್ಲಿ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕರಾಗಿದ್ದ ನೇಮಿರಾಜ ನಾಯ್ಕ್, ನಂತರದ ಚುನಾವಣೆಗಳಲ್ಲಿ ಸೋಲು ಕಂಡಿದ್ದಾರೆ.ಈ ಬಾರಿಯೂ ನೇಮಿರಾಜ ನಾಯ್ಕ್ ಅವರಿಗೆ ಬಿಜೆಪಿ ಟಿಕೆಟ್ ಸಿಗಲಿದೆ ಎಂದು ಭಾವಿಸಲಾಗಿತ್ತು. ಆದರೆ ಸ್ಥಳೀಯವಾಗಿ ವಿರೋಧ ವ್ಯಕ್ತವಾದ ಕಾರಣ ಅವರಿಗೆ ಟಿಕೆಟ್ ಮಿಸ್ ಆಯಿತು. ಹೀಗಾಗಿ ಬಂಡಾಯವೆದ್ದಿದ್ದ ನೇಮಿರಾಜ ನಾಯ್ಕ್ ಪಕ್ಷೇತರನಾಗಿ ಸ್ಪರ್ಧಿಸಲು ನಿರ್ಧರಿಸಿದರು. ನಂತರ, ಜೆಡಿಎಸ್ ಪಕ್ಷ ನೇಮಿರಾಜ ನಾಯ್ಕ್ ಅವರನ್ನು ತಮ್ಮ ಅಭ್ಯರ್ಥಿ ಎಂದು ಘೋಷಿಸಿತು.ಒಟ್ಟಾರೆಯಾಗಿ, ಹಗರಿಬೊಮ್ಮನಹಳ್ಳಿಯಲ್ಲಿ ಕಾಂಗ್ರೆಸ್‌ನ ಹಾಲಿ ಶಾಸಕ ಎಸ್ ಭೀಮಾ ನಾಯ್ಕ್ ಅವರಿಗೆ ಬಿಜೆಪಿಯ ಬಿ. ರಾಮಣ್ಣ ಮತ್ತು ಜೆಡಿಎಸ್‌ನ ನೇಮಿರಾಜ್ ನಾಯ್ಕ್ ಮತ್ತು ಎನ್‌ಸಿಪಿಯ ಕೆ ಸುಗುಣ ಕಠಿಣ ಪೈಪೋಟಿ ನೀಡುತ್ತಿದ್ದಾರೆ.
ತಾಲೂಕ ವರದಿಗಾರರು: ಪ್ರದೀಪ್.ಕುಮಾರ್.C ಕೊಟ್ಟೂರು …..