ಸಮಾಜ ಸೇವಾರತ್ನ ರಾಜ್ಯ ಮಟ್ಟದ ಪ್ರಶಸ್ತಿ ಪ್ರಧಾನ ಸಮಾರಂಭ.

ಲಿಂಗಸಗೂರು ಆ.19

ಡಾ, ಬಿ.ಆರ್. ಅಂಬೇಡ್ಕರ್ ಶಿಕ್ಷಣ ಅಭಿವೃದ್ಧಿ ಟ್ರಸ್ಟ್ (ರಿ) ಹಾಗೂ ನಮ್ಮೂರ ಶಾಸಕರು ರಾಷ್ಟ್ರೀಯ ಕನ್ನಡ ಪತ್ರಿಕೆ ಇವರ ಸಂಯೋಗದಲ್ಲಿ ಪತ್ರಿಕಾ ಭವನ ಉದ್ಘಾಟನೆ ಹಾಗೂ ಸಮಾಜ ಸೇವಾ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭವು ಭಾನುವಾರ ಪಟ್ಟಣದ ಗುರು ಭವನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವು ನಮ್ಮೂರ ಶಾಸಕರು ಪತ್ರಿಕೆಯ ಸಂಪಾದಕರಾದ ಡಾ, ಜಲಾಲುದ್ದೀನ್ ಅಕ್ಟರ್ ಹಾಗೂ ಡಾಕ್ಟರ್, ಬಿ.ಆರ್ ಅಂಬೇಡ್ಕರ್ ಶಿಕ್ಷಣ ಅಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀಮಾರುತಿ ಗೋಸ್ಲಿ ಇವರ ನೇತೃತ್ವದಲ್ಲಿ ಈ ಕಾರ್ಯಕ್ರಮದ ದೀಪ ಹಚ್ಚುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ನಂತರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ರೆವರೆಂಡ್ ಫಾದರ್ ರಾಬರ್ಟ್ ಪಾಲ್ ರವರು. ಸಾಧಕರನ್ನು ಸನ್ಮಾನಿಸಿ ಸಮಾಧಿ ಮಾಡಬೇಡಿ ಸಾಧಕರನ್ನು ಗುರುತಿಸಿ ಅವರನ್ನು ಸನ್ಮಾನಿಸ ಬೇಕೇ ಹೊರತು ಸಾಧಕರನ್ನು ಇತರರ ಜೊತೆ ಬೆರಸಿದಾಗ ಸಾಧಕರನ್ನು ಸಮಾಧಿ ಮಾಡಿದಂತೆ ಆಗುತ್ತದೆ ಎಂದು ವಂ.ಫಾ.ರಾರ್ಬಟ್ ಪೌಲ್ ಅಭಿಪ್ರಾಯ ಪಟ್ಟರು.ಪಟ್ಟಣದ ಗುರು ಭವನದಲ್ಲಿ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಪತ್ರಿಕಾ ಭವನ ಉದ್ಘಾಟನೆ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭದ ದಿವ್ಯ ಸಾನಿಧ್ಯವನ್ನು ವಹಿಸಿ ಕೊಂಡು ಆರ್ಶೀವಚನ ನೀಡಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧಕರು ಇರುತ್ತಾರೆ. ಆದರೆ ನಿಜವಾದ ಸಾಧಕರನ್ನು ಗುರುತಿಸಿ ಗೌರವಿಸುವುದು ಶಾಘ್ಲನೀಯ ಕಾರ್ಯವಾಗಿದೆ.ನಮ್ಮ ದೇಶ ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ಆದರೆ ದೇಶ ನನ್ನದು ಎಂದಾಗ ನಮ್ಮದಾಗಿರುವುದಿಲ್ಲ. ಈ ದೇಶ ನಮ್ಮದು ಎಂದಾಗ ಮಾತ್ರ ನಮ್ಮದಾಗಿರುತ್ತದೆ. ದೇಶ ನಮ್ಮದಾಗಿದ್ದಾಗ ಮಾತ್ರ ಸರ್ವ ಜನಾಂಗದ ಶಾಂತಿಯ ತೋಟವಾಗಿರುತ್ತದೆ. ನನ್ನದು ಎಂದರೆ ದೇಶ ಸರ್ವ ನಾಶವಾಗುತ್ತದೆ. ಆದ್ದರಿಂದ ನಾನು ನನ್ನದು ಎನ್ನುವ ಬದಲು ನಾವು ನಮ್ಮದು ಎನ್ನಬೇಕೆಂದರು.

ನಂತರಕುಮಾರಿ ಶೋಭಾ ಎಸ್.ಬಿಜ್ಜಿಗಾರ ಸಮಾಜ ಸೇವಾ ಕ್ಷೇತ್ರ, ಜಮಖಂಡಿ, ಬಾಗಲಕೋಟೆ ಜಿಲ್ಲಾ. ಶಬ್ಬಿರ್.ಆರ್ ಪಕಾಲಿ ಶಿಕ್ಷಣ ಮತ್ತು ವಿಕಲ ಚೇತನರ ಸೇವಾ ಕ್ಷೇತ್ರ, ಬನಹಟ್ಟಿ ರಬಕವಿ.ಶರಣಪ್ಪ ಬುಗವಾರಿ, ಪ್ರಥಮ ದರ್ಜೆ ಗುತ್ತಿಗೆದಾರರು, ಕುರುಡಗಿ,ರೋಣ ತಾಲ್ಲೂಕು, ಗದಗ ಜಿಲ್ಲೆ, ಶಿವಪುತ್ರಗೌಡ ಪಾಟೀಲ್, ಜಿಲ್ಲಾಧ್ಯಕ್ಷರು, ಕರ್ನಾಟಕ ರಾಜ್ಯ ರೈತ ಸಂಘ ಹಸಿರುಸೇನೆ, ರಾಯಚೂರು, ಸಣ್ಣಹಳ್ಳಿ ಹನುಮಂತ, ಪೊಲೀಸ್ ಕೇಂದ್ರಸ್ಥಾನ ಹಾಗೂ ಸಾಹಿತಿ ಬರಹಗಾರರು, ನೀರಮಾನ್ವಿ ರಾಯಚೂರು ಹಾಜಿಬಾಬು ಕಲ್ಯಾಣಿ, ತಾ. ಅಧ್ಯಕ್ಷರು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಲಿಂಗಸಗೂರು ವೀರನಗೌಡ ಪಾಟೀಲ್ ಬಯ್ಯಾಪುರ, ತಾಲ್ಲೂಕ ಅಧ್ಯಕ್ಷರು, ಮಾಜಿ ಸೈನಿಕರ ಸಂಘ, ಲಿಂಗಸಗೂರು, ಶ್ರೀ ಮಲ್ಲಿಕಾರ್ಜುನ ಎಸ್ ಬಿರಾದಾರ್, ಸಮಾಜ ಸೇವಕರು, ಬಸವನ ಬಾಗೇವಾಡಿ ಬಾಗಲಕೋಟೆ ಜಿಲ್ಲೆ. ಶ್ರೀಮತಿ ಅನುರಾಧ ಡಿ.ಪಿ.,ಚಲನ ಚಿತ್ರ ನಟಿ ಹಾಗೂ ನಿರ್ದೇಶಕರು, ಬೆಂಗಳೂರು, ಯಶವಂತಪ್ಪ ಕೋವಿ, ಸಂಪಾದಕರು ನಿತ್ಯವಾಣಿ ಪತ್ರಿಕೆ ಸಂಪಾದಕರು ಹಾಗೂ ಸಾಮಾಜಿಕ ಕಾರ್ಯಕರ್ತರು, ಸಿಂಧನೂರು, ಲಿಂಗಸಗೂರು. ನಾಗರೆಡ್ಡಿ, ದೇವಪುರ, ಪ್ರಧಾನ ಕಾರ್ಯದರ್ಶಿ ಲಿಂಗಸುಗೂರು, ಶನವಾಬ್, ಹಾಗೂ ಸಮಾಜ ಸೇವಕರು ಲಿಂಗಸಗೂರು, ಡಾ, ಚೆನ್ನ ಬಸಯ್ಯಸ್ವಾಮಿ ಹಿರೇಮಠ ಕಾರುಣ್ಯ ಆಶ್ರಮ ಸಿಂಧನೂರು, ಮೌನುದ್ದೀನ್ ಬೂದಿನಾಳ,ಶರಣು ವಿಶ್ವವಚನ ಫೌಂಡೇಶನ್, ಮೈಸೂರು, ರಾಯಚೂರು ತಾಲೂಕ ಗೌರವಾಧ್ಯಕ್ಷರು, ಅಶೋಕ್ ಎಸ್ ಮುಳವಾಡ, ಸಮಾಜ ಸೇವಕರು, ಬೀಳಗಿ.ಶೌಕತ್‌ ಅಲಿ ಅ. ನದಾಫ,ಸಮಾಜ ಸೇವಕರು ಹಾಗೂ ಶಿಕ್ಷಣಪ್ರೇಮಿ, ಕುರುಡಗಿ, ಇದೇ ಸಂದರ್ಭದಲ್ಲಿ ವಿಶ್ವ ಚೇತನ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ವಿಶೇಷ ಸನ್ಮಾನಿತ ಭೂಷಿತರು ಆದ ಸಿದ್ದು ಮುರಾರಿ. ಆಟೋ ಚಾಲಕ ಸಂಘದ ಅಧ್ಯಕ್ಷರು ಸಮಾಜ ಸೇವಕರು ಮಸ್ಕಿ, ವಿಶ್ವೇಶ್ ಯರಗುಂಟಿ, ಪತ್ರಕರ್ತರು ಹಾಗೂ ಸಮಾಜ ಸೇವಕರು, ಹಿರೇನಗನೂರು,ಬಸವರಾಜ ಹೊರಪೇಟೆ, ಪಾರಂಪರಿಕ ವೈದ್ಯರು ಹಿರೇನಗನೂರು,ಎಂ ಮೌಲಸಾಬ್, ಶಿಕ್ಷಕರು ಹಾಗೂ ಸಮಾಜ ಸೇವಕರು, ಹಟ್ಟಿ. ಕುಮಾರಸ್ವಾಮಿ ಕಳ್ಳಿಮಠ ವೈದ್ಯ ಜ್ಯೋತಿಷ್ಯ ಪಂಡಿತರು ಹಟ್ಟಿ. ಈ ಎಲ್ಲಾ ಸಾಧಕರಿಗೆ ಸನ್ಮಾನಿಸಿ ಗೌರವರಿಸಿ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು ಮುಖ್ಯ ಅತಿಥಿಯಾಗಿ ಮುಖ್ಯ ಶೇಖರ್ ಕಾಖಂಡಕಿ ಅಧ್ಯಕ್ಷರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಸಂಸ್ಥೆ ಗಿರಿಸಾಗರ. ವಿರೂಪಾಕ್ಷಯ್ಯ ಸಾಲಿಮಠ ಅಂತರಗಂಗೆ ಪ್ರತಕರ್ತರು ಧ್ವನಿ ಸಂಘದ ಮಸ್ಕಿ ತಾಲೂಕು ಅಧ್ಯಕ್ಷರು, ಮಧುಶ್ರೀ ಪತ್ರಕರ್ತರ ಧ್ವನಿ ಸಂಘದ ಲಿಂಗಸಗೂರು ತಾಲೂಕ ಅಧ್ಯಕ್ಷರು, ಸೇಕ್ ನಿಸಾರುದ್ದಿನ್ ಮಾತೃಭೂಮಿ ರಾಷ್ಟ್ರೀಯ ಪತ್ರಿಕೆ ಸಂಪಾದಕರು, ಇನ್ನೂ ಅನೇಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿ ಗೊಳಿಸಿದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರತಾಪ್.ವಾಯ್.ಕಿಳ್ಳಿ. ಇಲಕಲ್ಲ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button