ಸಖಿ ಜನಸ್ನೇಹಿ ಮತದಾನ ಕೇಂದ್ರಕ್ಕೆ ಸ್ವಾಗತ
ಕೊಟ್ಟೂರು ಮೇ.9
ಕರ್ನಾಟಕ ವಿಧಾನ ಸಭೆ ಸಾರ್ವತ್ರಿಕ ಚುನಾವಣೆ-2023 ಅಂಗವಾಗಿ ಕೊಟ್ಟೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 25 ಮತಗಟ್ಟೆಗಳಿದ್ದು, ಎಲ್ಲಾ ಮತಗಟ್ಟೆಗಳಲ್ಲಿ ಮೂಲಭೂತ ಸೌಕರ್ಯಕಗಳನ್ನು ಕಲ್ಪಿಸಿ, ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳಲಾಗಿರುತ್ತದೆ. ಮತದಾರರಲ್ಲಿ ಈಗಾಗಲೇ ಕಡ್ಡಯವಾಗಿ ಮತದಾನ ಮಾಡುವಂತೆ ಜಾಗೃತಿ ಜಾಥಾ, ಬೈಕ್ ರ್ಯಾಲಿ, ಪಂಚಿನ ಮೆರೆವಣಿಗೆ, ಮೇಣದ ಬತ್ತಿ ನಡಿಗೆ, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರಿಂದ, ಮಹಿಳಾ ಸಂಘದಿಂದ ಮೆಹೆಂದಿ ಹಾಕಿಕೊಳ್ಳುವ ಮೂಲಕ, ಬೀದಿ ನಾಟಕ, ಮತದಾನ ಜಾಗೃತಿ ಗೀತೆ ಹಾಡುವುದರ ಮೂಲಕ ಹಾಗೂ ಇನ್ನೂ ಆನೇಕ ರೀತಿಯ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿರುತ್ತದೆ.

ಕೊಟ್ಟೂರು ಪಟ್ಟಣದಲ್ಲಿ ಒಟ್ಟು 10768 ಪುರುಷರು ಮತ್ತು 11213 ಮಹಿಳೆಯ ಒಟ್ಟು 21981 ಮತದಾರರಿದ್ದು, ಮತಗಟ್ಟೆ ಸಂಖ್ಯೆ 232 ಸರ್ಕಾರಿ ಕಾಂಪೋಸಿಟ್ ಪದವಿ ಪೂರ್ವ ಕಾಲೇಜು ರೂಮ್ ನಂ.1 ನ್ನು ಸಖಿ ಮತದಾನ ಕೇಂದ್ರ (ಪಿಂಕ್ ಬೂತ್) ವನ್ನಾಗಿ ಮಾಡಿ ಬಹುತೇಕ ಗುಲಾಬಿ ಬಣ್ಣದಿಂದ ಸಿಂಗರೀಕರಿಸಲಾಗಿರುತ್ತದೆ, ಮತಗಟ್ಟೆ ಸಂಖ್ಯೆ 251 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೂಡ್ಲಿಗಿ ರಸ್ತೆ ಮತಗಟ್ಟೆಯನ್ನು ಯುವ ಮತದಾರರ ಕೇಂದ್ರ ಹಾಗೂ ಮತಗಟ್ಟೆ ಸಂಖ್ಯೆ 248 ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಗಚ್ಚಿನಮಠ ರೂಮ್ ನಂ.1 ನ್ನು ಮಾದರಿ ಮತದಾನ ಕೇಂದ್ರವನ್ನಾಗಿ ಮಾಡಲಾಗಿದ್ದು, ಸದರಿ ಮತಗಟ್ಟೆಗಳಿಗೆ ವಿಶೇಷ ರೂಪದಲ್ಲಿ ಅಲಂಕಾರ ಮಾಡಿ ಸುಂದರೀಕರಣಗೊಳಿಸಲಾಗಿರುತ್ತದೆ. ಹಾಗೂ ಮತದಾರರ ವಿಶ್ರಾಂತಿಗಾಗಿ ಮತಗಟ್ಟೆಗಳ ಹತ್ತಿರ ನೆರಳಿನ ವ್ಯವಸ್ಥೆ ಕಲ್ಪಿಸಲಾಗಿದ್ದು, ವಿಶ್ರಾಂತಿ ಕೊಠಡಿಗಳನ್ನು ಸಹ ವ್ಯವಸ್ಥೆ ಮಾಡಲಾಗಿರುತ್ತದೆ, ವಿಚಲಚೇತನರು, ಹಿರಿಯ ನಾಗರೀಕರ ಅನುಕೂಲಕ್ಕಾಗಿ ಗಾಲಿ ಕುರ್ಚಿ ವ್ಯವಸ್ಥೆ ಮಾಡಿದೆ. ಮೇ 10 ಕಡ್ಡಾಯ ಮತದಾನ ಮಾಡಲು ಕೋರಿದೆ. ಶ್ರೀ.ಎಂ.ಕುಮಾರಸ್ವಾಮಿ, ತಹಶೀಲ್ದಾರರು, ಸಹಾಯಕ ಚುನಾವಣಾಧಿಕಾರಿಗಳು-89 ಹಾಗೂ ಶ್ರೀ.ಎ.ನಸರುಲ್ಲಾ ಮುಖ್ಯಾಧಿಕಾರಿಗಳು, ಪ.ಪಂ.ಕೊಟ್ಟೂರು ಇವರು ತಿಳಿಸಿದರು. ತಾಲೂಕ ವರದಿಗಾರರು:ಪ್ರದೀಪ್. ಕುಮಾರ್. ಸಿ-ಕೊಟ್ಟೂರು