ಹ್ಯಾಟ್ರಿಕ್ ಗೆಲುವು ಸಾಧಿಸಿದ ಯಶವಂತರಾಯಾಗೌಡ ಪಾಟೀಲ್.
ಇಂಡಿ ಮೇ.13

ವಿಜಯಪುರ ಜಿಲ್ಲೆಯ ಇಂಡಿ ಮತಕ್ಷೇತ್ರದಲ್ಲಿ ಫಲಿತಾಂಶ ಪ್ರಕಟವಾಗಿದ್ದು , ಕಾಂಗ್ರೆಸ್ ನ ಯಶವಂತರಾಯಗೌಡ ಪಾಟೀಲ್ ರವರು 9,690 ಅಂತರದ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಯಶವಂತರಾಯಗೌಡ ಪಾಟೀಲರು ಒಟ್ಟು 70,267 ಮತಗಳನ್ನು ಪಡೆಯುವುದರ ಮೂಲಕ ಹ್ಯಾಟ್ರಿಕ್ ಗೆಲುವು ಸಾಧಿಸಿದರು . ಇನ್ನೂ ಸಮೀಪದ ಪ್ರತಿಸ್ಪರ್ಧಿ ಜೆಡಿಎಸ್‌ನ ಬಿ. ಡಿ. ಪಾಟೀಲರು 60,577 ಮತಗಳನ್ನು ಪಡೆದುಕೊಂಡಿದ್ದಾರೆ .ಬಿಜೆಪಿ ಅಭ್ಯರ್ಥಿ ಕಾಸುಗೌಡ ಬಿರಾದಾರ್ ಗೆ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.
ಜಿಲ್ಲಾ ವರದಿಗಾರರು : ಬೀ.ಎಸ್.ಹೊಸೂರ್. ವಿಜಯಪುರ