20 ವರ್ಷಗಳ ನಂತರ ಕೂಡ್ಲಿಗಿ ಮತಕ್ಷೇತ್ರದ ಜನ ಕೈಪಕ್ಷದ ಗೆಲುವಿಗೆ 54 ಸಾವಿರಕ್ಕೂ ಹೆಚ್ಚು ಡಾll ಶ್ರೀನಿವಾಸ್.ಎನ್. ಟಿ ಇವರಿಗೆ ಬಹುಮತ ಕೊಟ್ಟ ಜನತೆ.
ಕೂಡ್ಲಿಗಿ ಮೇ.13

ವಿಜಯನಗರ ಜಿಲ್ಲೆ ಕೂಡ್ಲಿಗಿ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಪಾಲಾಗಿದ್ದು ಈ ಬಾರಿ ದಿವಂಗತ ಮಾಜಿ ಶಾಸಕರಾದ ಎನ್ ಟಿ ಬೊಮ್ಮಣ್ಣನವರ ಸುಪುತ್ರ ನಾದ ಡಾಕ್ಟರ್ ಎನ್.ಟಿ. ಶ್ರೀನಿವಾಸ್ ರವರು ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ 54,000ಕ್ಕೂ ಹೆಚ್ಚು ಬಹುಮತಗಳಿಂದ ಗೆಲುವು ಸಾಧಿಸಿದ್ದಾರೆ ,ಈ ಸಾಧನೆ 20 ವರ್ಷಗಳಿಂದ ಬೇರೆ ಬೇರೆ ಪಕ್ಷದವರನ್ನು ಹೊರಗಡೆ ಯಿಂದ ಬಂದಂತಹ ಅಭ್ಯರ್ಥಿಗಳನ್ನು ಮೂರ ರಿಂದ ನಾಲ್ಕು ಬಾರಿ ಕೂಡ್ಲಿಗಿ ಕ್ಷೇತ್ರದಲ್ಲಿ ಹೊರಗಿನಿಂದ ಬಂದಿರುವರನ್ನು ಆಯ್ಕೆ ಮಾಡಿದ್ದ ಸ್ಥಳೀಯ ಜನತೆ ,ಈ ಬಾರಿ ಸ್ಥಳೀಯ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಂಡು ಪಕ್ಷಾತೀತವಾಗಿ ಕೂಡ್ಲಿಗಿ ತಾಲೂಕಿನ ಎಲ್ಲಾ ಮುಖಂಡರುಗಳು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಒಳಗಿಂದೊಳಗೆ ಸ್ಥಳೀಯ ಅಭ್ಯರ್ಥಿಯಾದಂತಹ ಶ್ರೀನಿವಾಸ್ ಎನ್ ಟಿ ಇವರನ್ನು ಕಾಂಗ್ರೆಸ್ ಗೆಲುವು ಸಾಧಿಸಲು ಮುಂದಾದ ಕೂಡ್ಲಿಗಿ ವಿಧಾನಸಭಾ ಕ್ಷೇತ್ರ ಜನತೆ ಇಂದು ತಾಲೂಕಿನ್ಯಾಧ್ಯಾಂತ ಸಂಭ್ರಮದ ಸಿಹಿ ಹಂಚುವ ಮೂಲಕ ಪಟಾಕಿ ಅಚ್ಚಿ ವಿಜಯೋತ್ಸವದ ಸಡಗರವನ್ನು ಆಚರಿಸಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಪಕ್ಷದ ತಾಲೂಕು ಅಧ್ಯಕ್ಷರಾದ ಗುರುಸಿದ್ಧನಗೌಡ ಇವರು ಗೆಲುವು ಕುರಿತು ದೇಶಾದ್ಯಂತ ಬಿಜೆಪಿಯ ದುರಾಡಳಿತವನ್ನು ಖಂಡಿಸಿ ಹಾಗೂ ಸುಳ್ಳು ಅಭಿವೃದ್ಧಿ ಯ ಹೇಳಿಕೆಗಳನ್ನು ಖಂಡಿಸಿ ಇಂದು ರಾಜ್ಯಾದ್ಯಂತ ಜನಗಳು ಒಗ್ಗಟ್ಟಿನ ಮನಸ್ಸಿನಿಂದ ಕಾಂಗ್ರೆಸ್ ಪಕ್ಷಕ್ಕೆ ತಮ್ಮ ಅಮೂಲ್ಯವಾದಂತ ಮತ ನೀಡಿ ಇಂದು ಕೇಂದ್ರದಲ್ಲೂ ಹಾಗೂ ಕರ್ನಾಟಕ ರಾಜ್ಯದಲ್ಲೂ ಡಬಲ್ ಇಂಜಿನ್ ಸರ್ಕಾರವನ್ನು ಒಪ್ಪಿಕೊಳ್ಳದೆ ,ಈ ಬಾರಿ ಕರ್ನಾಟಕ ಜನತೆ ರಾಜ್ಯ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತವನ್ನು ನೀಡಿ ಪ್ರತ್ಯೇಕವಾದಂತಹ ಸರ್ಕಾರವನ್ನು ರಚಿಸಲು ಜನರು ನಿರ್ಧಾರ ತೋರಿರುವುದನ್ನು ಕಂಡು ಭಾರತ ದೇಶವೇ ಕರ್ನಾಟಕದತ್ತ ನೋಡುವಂತೆ ಮತದಾರ ರಾಜ್ಯದ ಜನರು ನಿರ್ಧಾರ ಮಾಡಿ ಗೆಲುವು ಸಾಧಿಸಲು ಮುಂದಾದ ರಾಜ್ಯದ ಜನತೆ ಕಾಂಗ್ರೆಸ್ ಪಕ್ಷದ ಇಂದಿನ ಸಿದ್ದರಾಮಯ್ಯ ಅವರ ಬಗ್ಗೆ ಅಪಾರ ಗೌರವ ಹೊಂದಿದ್ದ ಕನ್ನಡಿಗರು ಮಾತು ತಪ್ಪದ ಮಗ ಎಂದು ತಿಳಿದ ಜನರು ನಿರ್ಧಾರ ತೆಗೆದುಕೊಳ್ಳುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ ಸರ್ಕಾರ ರಚಿಸಲು ಜನರ ಅಭಿಪ್ರಾಯ ಪಟ್ಟಿದ್ದಾರೆ ,ಎಂದು ತಿಳಿಸಿದರು.

ಹಾಗೆ ಕೂಡ್ಲಿಗಿ ತಾಲೂಕಿನ ಜನತೆ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಸಿ ಮತ ಹಾಕಿ ಪ್ರಚಂಡ ಬಹುಮತದಿಂದ ಆಯ್ಕೆ ಮಾಡಿ ಕೂಡ್ಲಿಗಿ ತಾಲೂಕಿನ ಜನತೆ ಹಬ್ಬದ ಸಡಗರದಂತೆ ಸಿಹಿ ಹಂಚುವ ಮೂಲಕ ಕಾಂಗ್ರೆಸ್ ಮುಖಂಡರು ಅಶ್ವಮೇಧ ನಾಗರಾಜ, ಎಚ್.ರಮೇಶ ಮಾಜಿ ಸೈನಿಕರು, ರಾಘವೇಂದ್ರ, ವೆಂಕಣ್ಣ,ಗಣೇಶ, ಜಿಂಕಾಲಿ ನಾಗಾಮಣಿ, ಖಾವಲಿ, ಶಿವಪ್ಪನಾಯಕ,ಶಫೀ ಉಲ್ಲಾ ಗ್ರಾಮ ಗ್ರಾಮಗಳಲ್ಲಿ ಕಾಂಗ್ರೆಸ್ ಪಕ್ಷದ ಗೆಲುವುವಿಗೆ ವಿಜಯೋತ್ಸವ ಆಚರಿಸಿದರು.
ಜಿಲ್ಲಾ ವರದಿಗಾರರು : ರಾಘವೇಂದ್ರ. ಸಾಲುಮನಿ. ಕೂಡ್ಲಿಗಿ