ಜಿ. ಎಚ್.ಶ್ರೀನಿವಾಸ್ ರವರಿಗೆ ಸಚಿವ ಸ್ಥಾನ ನೀಡಬೇಕು-ಹೆಚ್.ಯು.ಫಾರುಕ್.

ತರೀಕೆರೆ ಮೇ.20

ಎರಡನೇ ಬಾರಿಗೆ ಶಾಸಕರಾಗಿರುವ ಜಿಎಚ್ ಶ್ರೀನಿವಾಸ್ ರವರಿಗೆ ಸಚಿವ ಸ್ಥಾನ ನೀಡಬೇಕೆಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್ ಯು ಫಾರೂಕ್ ಇಂದು ಪಟ್ಟಣದ ಎಂ ಜಿ ವೃತ್ತದಲ್ಲಿ ಜಿಎಚ್ ಶ್ರೀನಿವಾಸ್ ಅಭಿಮಾನಿ ಬಳಗ ಏರ್ಪಡಿಸಿದ್ದ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಪ್ರಮಾಣ ವಚನ ನೇರ ಕಾರ್ಯಕ್ರಮದಲ್ಲಿ ಕೇಕ್ ಹಂಚಿಕೆ ಮಾಡಿ ಮಾತನಾಡಿದರು. ಕರ್ನಾಟಕದ ಜನತೆ ಸಂತೋಷ ಪಡುವ ದಿನವಾಗಿದೆ. ಜೋಡೆತ್ತುಗಳೆಂದು ಪ್ರಖ್ಯಾತರಾಗಿರುವ ಸಿದ್ದರಾಮಯ್ಯ ಮುಖ್ಯಮಂತ್ರಿ ಯಾಗಿ,ಡಿ.ಕೆ. ಶಿವಕುಮಾರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ, ಮೊದಲನೇ ಸಂಪುಟ ಸಭೆಯಲ್ಲಿ ಭರವಸೆಗಳನ್ನು ಜಾರಿಗೆ ತರುತ್ತಾರೆ ಎಂದು ಹೇಳಿದರು. ಜಾತ್ಯತೀತ ಜನತಾದಳದ ತಾಲೂಕು ಅಧ್ಯಕ್ಷ ಎಂ ನರೇಂದ್ರ ಮಾತನಾಡಿ ನಾಡಿನ ಜನರ ಅಶೋತ್ತರಗಳನ್ನು, ಸವಲತ್ತುಗಳನ್ನು ಪಕ್ಷವು ನೀಡಿದ ಭರವಸೆಗಳನ್ನು ಸರ್ಕಾರವು ಈಡೇರಿಸಲು 1,20 ಕೋಟಿ ರೂಗಳ ಉಚಿತ ಕೊಡುಗೆಗಳನ್ನು ನೀಡಲು ಕರ್ನಾಟಕದ ಜನತೆ ಸ್ಪಂದಿಸಬೇಕು.

ತಾಲೂಕಿನಲ್ಲಿ ಸಾವಿರಾರು ಸಮಸ್ಯೆಗಳನ್ನು ಶಾಸಕ ಜಿ ಎಚ್ ಶ್ರೀನಿವಾಸ್ ಬಗೆಹರಿಸಬೇಕಾಗಿದೆ, ಎಲ್ಲರೂ ಸಹಕಾರ ನೀಡಬೇಕು ಎಂದು ಹೇಳಿದರು. ಬೃಹತ್ ಕೇಕ ಕತ್ತರಿಸಿ ಮಾತನಾಡಿದ ಕೆಪಿಸಿಸಿ ಸದಸ್ಯರಾದ ಟಿವಿ ಶಿವಶಂಕರಪ್ಪ ಮಾತನಾಡಿ ಈ ಕ್ಷಣವು ಏಳು ಕೋಟಿ ಜನರು ಮರೆಯಲಾರದ ಕ್ಷಣ. ಆರ್ಥಿಕ ತಜ್ಞರಾದ ಸಿದ್ದರಾಮಯ್ಯ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಪಕ್ಷವು ಘೋಷಣೆ ಮಾಡಿದ ಪಂಚ ಯೋಜನೆಗಳನ್ನು ಈಡೇರಿಸಲಿ. ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಡಿ.ಕೆ. ಶಿವಕುಮಾರ್ ಅವರು ಸಂಘಟನೆಯ ಚತುರರಾಗಿದ್ದಾರೆ. ಇಂದಿರಾ ಕ್ಯಾಂಟೀನ್ ಮುಖಾಂತರ ಬಡವರ ಹಸಿವನ್ನು ಈ ಸರ್ಕಾರ ನೀಗಿಸಲಿ, ಎಲ್ಲಾ ವರ್ಗದವರು ಕಾಂಗ್ರೆಸ್ಸಿಗೆ ಸ್ಪಂದಿಸಿದ್ದಾರೆ ಎಂದು ಹೇಳಿದರು. ಮಾಜಿ ಪುರಸಭಾ ಅಧ್ಯಕ್ಷರಾದ ಪ್ರಕಾಶ್ ವರ್ಮಾ ಮಾತನಾಡಿ ದೇವರಾಜ ಅರಸು ನಂತರದಲ್ಲಿ ಅತ್ಯುತ್ತಮವಾದ ಸರ್ಕಾರದ ಆಡಳಿತ ನೀಡಿದವರು ಸಿದ್ದರಾಮಯ್ಯ ರವರು. 2023 ನೇ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ರವರು ರಾಜ್ಯದಲ್ಲಿ ಸುಭದ್ರ ಸರ್ಕಾರ ರಚಿಸಿದ್ದಾರೆ ಎಂದು ಹೇಳಿದರು.

ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ ಅಸ್ಲಾಂ ಖಾನ್, ಬೆಟ್ಟದಹಳ್ಳಿ ರವಿ, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷರಾದ ಎ. ಆರ್. ರಾಜಶೇಖರ್, ಮಾತನಾಡಿದರು. ವೇದಿಕೆಯಲ್ಲಿ ಪುರಸಭಾ ಅಧ್ಯಕ್ಷರಾದ ಕಮಲಾ ರಾಜೇಂದ್ರ, ಉಪಾಧ್ಯಕ್ಷರಾದ ರಿಹಾನ ಪರ್ವೀನ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಕುಮಾರಪ್ಪ, ಸದಸ್ಯರಾದ ಟಿ. ಜಿ. ಲೋಕೇಶ್, ಅಶೋಕ್ ಕುಮಾರ್, ಕವಾಲಿ ಕುಮಾರ್, ಫೋಟೋ ಬಸವರಾಜ್, ದಾದಾಪೀರ್, ಯಶೋದಮ್ಮ, ಗೀತಾ ಗಿರಿರಾಜ್, ಗಿರಿಜಾ ಪ್ರಕಾಶ್ವರ್ಮ, ದಿವ್ಯ ರವಿ, ಪಾರ್ವತಮ್ಮ, ಮಾಜಿ ಪುರಸಭಾ ಅಧ್ಯಕ್ಷರಾದ ಹೇಮಲತಾ ರೇವಣ್ಣ, ಅನ್ನಪೂರ್ಣ, ಟಿ ಜಿ ಮಂಜುನಾಥ್, ಮಹಿಳಾ ಘಟಕದ ಅಧ್ಯಕ್ಷರಾದ ಭಾಗ್ಯಲಕ್ಷ್ಮಿ ಕೃಷ್ಣ, ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದ ಘಟಕದ ಅಧ್ಯಕ್ಷರಾದ ಗೌರೀಶ್, ಪ್ರಚಾರ ಸಮಿತಿ ಅಧ್ಯಕ್ಷರಾದ ಪರಶುರಾಮ್, ಭಗೀರಥ ಉಪ್ಪಾರ ಸಮಾಜದ ಜಿಲ್ಲಾಧ್ಯಕ್ಷರಾದ ಮಲ್ನಾಡ್ ನಾಗರಾಜ್, ಜಯ ಕರ್ನಾಟಕ ಸಂಘಟನೆಯ ಜಗದೀಶ್, ವೀರಮಣಿ, ಲಕ್ಷ್ಮೀಬಾಯಿ, ಚಂದ್ರನಾಯ್ಕ, ಮಿರ್ಜಾ ಇಸ್ಮಾಯಿಲ್, ಎಂ ಟಿ ಗಂಗಾಧರ ಕೆ ಹೊಸೂರು ಮಹಿದ್ದೀನ್, ಟೈಲರ್ ರಮೇಶ, ಹರ್ಷದ್, ಮನಸುಳಿ ಮೋಹನ್, ಕವಾಲಿ ಸೋಮಶೇಖರ್, ಉಪಸ್ಥಿತರಿದ್ದು ಮಾಜಿ ಪುರಸಭಾ ಅಧ್ಯಕ್ಷರಾದ ಧರ್ಮರಾಜ್ ಸ್ವಾಗತಿಸಿ ನಿರೂಪಿಸಿದರು.

ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button