ಪಿ.ಯು.ಸಿ.ಫಲಿತಾಂಶದಲ್ಲಿ ರಾಜ್ಯಕ್ಕೆ ಪ್ರಥಮ ಕುಶು ನಾಯ್ಕ್ ಕಲಾ ವಿಭಾಗದಲ್ಲಿ ತಮ್ಮ ಕಾಲೇಜಿನ ಮುಡಿಗೆ ಏರಿಸಿಕೊಂಡ ಇಂದು ಇನೋವೇಟಿವ್ ಕಾಲೇಜ್.
ಕೊಟ್ಟೂರು ಮೇ.20

ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನ ಇಂದು ಕಾಲೇಜ್ ನ ವಿದ್ಯಾರ್ಥಿಗಳು ಈ ಬಾರಿ ಕಲಾ ವಿಭಾಗದಿಂದ ರಾಜ್ಯಕ್ಕೆ ಪ್ರಥಮ ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ಇಂದು ಕಾಲೇಜ್ ತಮ್ಮದಾಗಿಸಿಕೊಂಡಿದೆ, ಈ ಬಾರಿ ಕಲಾ ವಿಭಾಗದ ವಿದ್ಯಾರ್ಥಿ ಆದಂತಹ ಕುಶು ನಾಯ್ಕ್ ಅಂಗವಿಕಲನಾಗಿದ್ದು ತನ್ನ ಕಠಿಣ ವಿಧ್ಯಾಭ್ಯಾಸದ ಪರಿಶ್ರಮದಿಂದ ಈತನು ಪಿಯುಸಿ ಪರೀಕ್ಷೆ ಫಲಿತಾಂಶ ಹೊರ ಬಂದಾಗ ಕುಶು ನಾಯ್ಕ್ ಇವರ ಫಲಿತಾಂಶ 592 ಅಂಕಗಳನ್ನು ಪಡೆದಿದ್ದು ನಂತರ ಐಚ್ಛಿಕ ಕನ್ನಡದಲ್ಲಿ ಮರು ಮೌಲ್ಯಮಾಪನಕ್ಕೆ ಕಳಿಸಿದ ನಂತರ ಮತ್ತೆ 2 ಅಂಕಗಳು ಬಂದಿವೆ ಒಟ್ಟು ಅಂಕ 594 ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯಲು ಕಾರಣವಾಯಿತು.

ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿ ಕೃಷ್ಣ ಎಲ್.ಎಸ್ ಪೊಲಿಟಿಕಲ್ ಸೈನ್ಸ್ ನಲ್ಲಿ 591 ಪಡೆದಿದ್ದು ಈ ವಿದ್ಯಾರ್ಥಿಯ ಉತ್ತರ ಪೇಪರನ್ನು ಮರು ಮೌಲ್ಯಮಾಪನಕ್ಕೆ ಕಳಿಸಿದಾಗ 2 ಮಾರ್ಕ್ಸ್ ಐಚ್ಚಿಕ ಬಂದಿವೆ,593 ಇದ್ದುಈ ವಿದ್ಯಾರ್ಥಿಗಳ ಬಗ್ಗೆ ಮಾನ್ಯ ಕಲಾ ವಿಭಾಗದ ಪ್ರಾಂಶುಪಾಲರಾದ ಮಹೇಶ್ ಅವರು ಸಂಕ್ಷಿಪ್ತವಾಗಿ ತಿಳಿಸುವುದರೊಂದಿಗೆ ಹಿಂದೂ ಕಾಲೇಜ್ ರಾಜ್ಯದಲ್ಲೇ ಎಂಟನೇ ಬಾರಿಗೆ ರ್ಯಾಂಕ್ ಪಡೆಯುವುದರಲ್ಲಿ ನಮ್ಮ ಕಾಲೇಜು ಮುಂದಾಗಿದೆ .

ಎಂದು ಸಂತಸವನ್ನು ಹಂಚಿಕೊಂಡರು ಹಾಗೆ ತಮ್ಮ ಕಾಲೇಜಿನ ಹೆಸರನ್ನು ರಾಜ್ಯಕ್ಕೆ ಪ್ರಥಮ ಮತ್ತು ದ್ವಿತೀಯ ಶ್ರೇಣಿಯಲ್ಲಿ ಅತಿಹೆಚ್ಚಿನ ಅಂಕವನ್ನು ಪಡೆದಿರುವಂತಹ ವಿದ್ಯಾರ್ಥಿಗಳನ್ನು ಕಾಲೇಜಿನ ಎಲ್ಲಾ ಸಿಬ್ಬಂದಿ ವರ್ಗದವರು ಹಾಗೂ ಶಿಕ್ಷಕರು ವೃಂದದವರು ಮತ್ತು ವಿದ್ಯಾರ್ಥಿಗಳು ಸಂಭ್ರಮಿಸಿ ಸಿಹಿ ತಿನಿಸುವುದರೊಂದಿಗೆ ಕಾಲೇಜಿನ ಕೀರ್ತಿ ಬೆಳಗಿಸಿದಂತಹ ವಿದ್ಯಾರ್ಥಿಗಳನ್ನು ಗೌರವಿಸುವುದರೊಂದಿಗೆ ಹೂಮಾಲೆಯನ್ನು ಹಾಕಿ ಕಾಲೇಜಿನ ಆವರಣದಲ್ಲಿ ಪಟಾಕಿಗಳನ್ನು ಹಚ್ಚುವುದರ ಮೂಲಕ ಸಂಭ್ರಮಿಸಿದರು ಈ ಸಂದರ್ಭದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆದ ಕುಶು ನಾಯ್ಕ್ ಅವರ ತಂದೆ ತಾಯಿಗೂ ಸಹ ಸಿಹಿ ತಿನಿಸುವುದರೊಂದಿಗೆ ತನ್ನ ಮಗ ಒಬ್ಬ ಅಂಗವಿಕಲತೆ ಇದ್ದು ಸಂತಸ ದೊಂದಿಗೆ ದು:ಖವನ್ನು ಸಹ ವ್ಯಕ್ತಪಡದಿಸಿದರು. ಜಿಲ್ಲಾ ವರದಿಗಾರರು:ರಾಘವೇಂದ್ರ. ಸಾಲುಮನೆ. ಕೂಡ್ಲಿಗಿ