ವಾತ್ಸಲ್ಯತೀರ್ಥ ಶ್ರೀಮಾತೆ ಶಾರದಾದೇವಿ – ಶ್ರೀಮತಿ ಜಿ.ಯಶೋಧಾ ಪ್ರಕಾಶ್.
ಚಳ್ಳಕೆರೆ ಫೆ.02

ಶ್ರೀಮಾತೆ ಶಾರದಾದೇವಿಯವರು ವಾತ್ಸಲ್ಯ ತೀರ್ಥರಾಗಿದ್ದರು ಎಂದು ಚಳ್ಳಕೆರೆಯ ಶಿವನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಮುಖ್ಯಸ್ಥರಾದ ಶ್ರೀಮತಿ ಜಿ ಯಶೋಧಾ ಪ್ರಕಾಶ್ ತಿಳಿಸಿದರು.

ಶಿವ ನಗರದ ತಮ್ಮ ಜಿ.ವಿ.ಎಸ್ ನಿವಾಸದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ ಮಾಡುತ್ತ “ಮುನ್ನಡೆಸುವ ಮಹಾ ಶಕ್ತಿ” ಎಂಬ ಅಧ್ಯಾಯವನ್ನು ಓದುತ್ತಾ ಮಾತನಾಡುತ್ತಿದ್ದರು.

ಈ ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಶ್ರೀದೇವಿಸ್ತುತಿ ಪಠಣ, ವಿಶೇಷ ಭಜನೆ,ಶ್ರೀಮದ್ ಭಗವದ್ಗೀತೆಯ ಶ್ಲೋಕಗಳ ಕಲಿಕಾ ಕಾರ್ಯಕ್ರಮ ನಡೆಯಿತು.

ಸತ್ಸಂಗ ಕಾರ್ಯಕ್ರಮದಲ್ಲಿ ತಾಲೂಕು ವಿಶ್ವ ಹಿಂದೂ ಪರಿಷತ್ ನ ಅಧ್ಯಕ್ಷರಾದ ಕೆ.ಎಂ ಯತೀಶ್, ಪ್ರಕಾಶ್, ಕುಮಾರ್, ಜಗದಂಬಾ, ಶಾಂತಮ್ಮ, ವಿನೋದಮ್ಮ, ಯತೀಶ್ ಎಂ ಸಿದ್ದಾಪುರ, ಪಿ.ಎಸ್. ಮಾಣಿಕ್ಯ ಸತ್ಯನಾರಾಯಣ, ಕವಿತಾ ಗುರುಮೂರ್ತಿ, ವೀರಮ್ಮ, ಸಂಗೀತ, ಕೃಷ್ಣವೇಣಿ, ಶೈಲಜಾ, ರಶ್ಮಿ ವಸಂತ, ರಶ್ಮಿ ರಮೇಶ್, ಗೀತಾಲಕ್ಷ್ಮೀ, ಸೌಮ್ಯ ಪ್ರಸಾದ್, ದ್ರಾಕ್ಷಾಯಣಿ, ಲೀಲಾವತಿ, ಶಾರದಮ್ಮ, ಶಿಲ್ಪಾ ಮಹೇಶ್, ಅನಿತಾ ಸೇರಿದಂತೆ ಸದ್ಭಕ್ತರು ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

