ಹೆಣ್ಣು ಪ್ರತಿಯೊಬ್ಬನ ಬಾಳಿನ ಕಣ್ಣುತಿಳಿಯಬೇಡಿ ಅರಿಯದೆ ಬದುಕಿಗದು ಹುಣ್ಣುಸೌಜನ್ಯದಿ ಬದುಕಿ ನಿತ್ಯ ಜೀವನವೇ ಹಣ್ಣುಹೆಣ್ಣಿಲ್ಲದ ಜೀವನದಲಿ ತಿನ್ನಬೇಕಾಗುವುದು ಮಣ್ಣು.. ಕೈಲಾಗದವರು ತೆಗೆದುಕೊಂಡರು ಅವಳಿಂದ ವರದಕ್ಷಿಣೆನೆನಪಿರಲಿ ಅದು ಮಾವನಿಂದ ಪಡೆದ ಬಿಕ್ಷಾಟನೆಹೆಣ್ಣು ಹೆತ್ತವರ ಕಣ್ಣೀರು ತಟ್ಟದೇ ಇರದು ದೇವರಾಣೆಸಾಕು ಬಿಟ್ಟುಬಿಡಿ ಕಿರುಕುಳ ಸಿಗಲಿ ಹೆಣ್ಣಿಗೆ ರಕ್ಷಣೆ.. ವರದಕ್ಷಿಣೆ ವಿಷಯಕ್ಕೆ ಹೆತ್ತವರು ನೊಂದರು ಹಲವು ಪಾಪಿಗಳು ಮುಗ್ಧ ಹೆಣ್ಣನ್ನೇ ಕೊಂದರುಮದುವೆಯ ಸಾಲಕ್ಕೆ ಹರಿಯಿತು ಹೆಣ್ಣೆತ್ತವರ ನೆತ್ತರುಅಳಿಯನ ಕಾಟಕೆ ನೇಣುಗಂಭಕೆ ಕೊರಳು ಕೊಟ್ಟರು.. ವರದಕ್ಷಿಣೆಯ ಪಡೆದು ಒಳಗಾಗಬೇಡಿ ಹೆಣ್ಣಿನ ಶಾಪಕ್ಕೆಮನುಷ್ಯತ್ವದಿ ಬದುಕಿ ಮಾದರಿಯಾಗಿ ಮನುಕುಲಕ್ಕೆವಿಪರೀತವಾದರೆ ವಧುದಕ್ಷಿಣೆ ಕೊಡಲು ಸಿದ್ದರಾಗಿರಿ ಮುಂದಕ್ಕೆವರದಕ್ಷಿಣೆ ಕಿರುಕುಳ ನಿಲ್ಲಿಸೆಂದು ಕೈಮುಗಿದು ಕೇಳುವೆ ಸರ್ಕಾರಕ್ಕೆ.. ಮುತ್ತು.ಯ.ವಡ್ಡರ ಶಿಕ್ಷಕರು, ಬಾಗಲಕೋಟ