ಕೊಳಕು ನಾರುತ್ತಿರುವ ಚರಂಡಿಯ ಕ್ರಮಕ್ಕೆ ಸಾರ್ವಜನಿಕರಿಂದ ಆಗ್ರಹ.
ಹಾನಗಲ್ ಜೂನ್.1

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಹಾನಗಲ್ ಗ್ರಾಮ ಪಂಚಾಯಿತಿ ಹಾನಗಲ್ ಗ್ರಾಮದ ನ್ಯಾಷನಲ್ ಹೈವೇ ಪಕ್ಕದಲ್ಲಿ ಸರ್ವಿಸ್ ರೋಡ್ ಸಾರ್ವಜನಿಕರ ಓಡಾಡುವಂತ ರಸ್ತೆ ಪಕ್ಕದಲ್ಲಿ ಚರಂಡಿ ಕೆಸರುಗದ್ದೆಯಂತಾಗಿದೆ ಮತ್ತು ಅಗರಿಯಲ್ಲಿ ಬೆಳೆಯುವ ದಿಂಡು ಆಪು ಸಹ ಈ ಚರಂಡಿಯಲ್ಲಿ ಐದಡಿ ಬೆಳೆದು ನಿಂತಿದೆ ಕೊಳಕು ನಾರುತ್ತಿರುವ ಚರಂಡಿಯನ್ನು ಇವತ್ತಿನವರೆಗೂ ಯಾರು ಗಮನ ಹರಿಸಿಲ್ಲ ನ್ಯಾಷನಲ್ ಹೈವೇ ಅಧಿಕಾರಿಗಳು ಗ್ರಾಮ ಪಂಚಾಯಿತಿಗೆ ಅನುದಾನವನ್ನು ಕೊಡುತ್ತಾರೆಂದು ಅಲ್ಲಿಯ ಸಾರ್ವಜನಿಕರು ಹೇಳುತ್ತಾರೆ ಆದರೆ ಹಾನಗಲ್ ಗ್ರಾಮ ಪಂಚಾಯತಿ ಪಿಡಿಓಗಳು ಇವತ್ತಿನವರೆಗೂ ಆ ಚರಂಡಿಯ ಬಗ್ಗೆ ಚಕಾರವೆತ್ತದೆ ಮೌನವಹಿಸುವುದು ನೋಡಿದರೆ ಕುಂಬಕರ್ಣನ ನಿದ್ರೆಗೆ ಜಾರಿರುವುದು ಸ್ಪಷ್ಟ ಕಾಣುತ್ತದೆ ಎಂದು ಸಾರ್ವಜನಿಕ ವಲಯಗಳಲ್ಲಿ ಪಿಸು ಪಿಸು ಮಾತುಗಳು ಅಲ್ಲಲ್ಲಿ ಗುಣಗುತ್ತಿದ್ದರು.

ಗಮನ ಹರಿಸಿಲ್ಲ ಇಲ್ಲಿ ಹೇಳರು ಇಲ್ಲ ಕೇಳೋರು ಇಲ್ಲದಂತೆ ಆಗಿದೆ ಇಂತಹ ಅಧಿಕಾರಿಗಳನ್ನು ಈ ಸಂಬಂಧಪಟ್ಟ ಮೇಲಾಧಿಕಾರಿಗಳು ತಾಲೂಕು ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿಗಳು ಸಾರ್ವಜನಿಕರಿಗೆ ಸರಿಯಾದ ರೀತಿಯಿಂದ ಚರಂಡಿ ವ್ಯವಸ್ಥೆ ಮಾಡಿಸಿಕೊಡಬೇಕೆಂದು. ಮತ್ತು ಹಾವು ಚೇಳು ಹೆಗ್ಗಣ ಇಲಿ ಸೇರಿಕೊಂಡಿವೆ ಸಣ್ಣ ಮಕ್ಕಳು ಹಾಗೂ ಸಾರ್ವಜನಿಕರಿಗೆ ದಿನನಿತ್ಯದ ತೊಂದರೆ ಅನುಭವಿಸುವಂತಾಗಿದೆ ಮಳೆಗಾಲದ ಪೂರ್ವವವೆ ಹೀಗೆ ಇನ್ನೂ ಮಳೆ ಬಂದರೆ ಪರಸ್ತಿತಿ ಏನಾಗಬಹುದು ಅಂತಾ ಜನ ರೋಗರುಜಿನಗಳು ಮಧ್ಯೆ ಬದುಕುವ ಆತಂಕ ಎದುರಾಗಿದೆ. ಆದಷ್ಟು ಕೂಡಲೇ ಸೂಕ್ತ ಕ್ರಮಕೈಗೊಳ್ಳದಿದ್ದಲ್ಲಿ ಬೀದಿಗಿಳಿದು ಹೋರಾಟ ಮಾಡುವ ಹಾದಿ ದೂರ ಉಳದಿಲ್ಲ ಅನ್ನುವು ಮಾತುಗಳು ಸಾರ್ವಜನಿಕರು ಆಡಿಕೊಳ್ಳುತ್ತಿದ್ದಾರೆ ಎಂದೂ ವರದಿಯಾಗಿದೆ.
ತಾಲೂಕ ವರದಿಗಾರರು:ತಿಪ್ಪೇಸ್ವಾಮಿ.ಹೊಂಬಾಳೆ.