ಗಿಡ ಮರ ಬೆಳೆಸಿ ಪರಿಸರ ಉಳಿಸಿ.
ತರೀಕೆರೆ ಜೂನ್.5

ತರೀಕೆರೆ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ವೈದ್ಯಾಧಿಕಾರಿಗಳಾದ ಡಾ. ದೇವರಾಜ್, ಡಾ. ಚಂದ್ರಶೇಖರ್, ಡಾ. ಸುರೇಶ್ ಕುಮಾರ್, ಡಾ. ಶ್ರೀನಿವಾಸ್ , ಡಾ. ಭಾಗ್ಯಲಕ್ಷ್ಮಿ, ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು. ಶಾಲಾ ಆವರಣಗಳಲ್ಲಿ ಸಸಿನಡಲು, ಹಣ್ಣು ಹೂವು ಬಿಡುವ ಸಸಿಗಳನ್ನು ವಿತರಿಸಲಾಯಿತು. ಗಿಡ ಮರ ಬೆಳೆಸಿ ಪರಿಸರ ಉಳಿಸುವುದು ಪ್ರತಿಯೊಬ್ಬ ನಾಗರೀಕರ ಕರ್ತವ್ಯ ಎಂದು ಡಾ. ದೇವರಾಜ್ ಹೇಳಿದರು. ಈ ಕಾರ್ಯಕ್ರಮದಲ್ಲಿ ಸಾರ್ವಜನಿಕ ಆಸ್ಪತ್ರೆಯ ಎಲ್ಲಾ ವೈದ್ಯರುಗಳು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ